ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಪುಟ್ನಿಕ್ ಲೈಟ್ ಲಸಿಕೆಯ ಸುರಕ್ಷತೆ, ದಕ್ಷತೆ ಮಾಹಿತಿ ಕೇಳಿದ ತಜ್ಞರ ಸಮಿತಿ

|
Google Oneindia Kannada News

ನವದೆಹಲಿ, ಜುಲೈ 02: ರಷ್ಯಾ ಮೂಲದ ಸ್ಪುಟ್ನಿಕ್ ಲೈಟ್ ಲಸಿಕೆಯ ಪ್ರಯೋಗವನ್ನು ಮತ್ತೆ ಮಾಡುವ ಅವಶ್ಯಕತೆಯಿಲ್ಲ. ಅದರ ಸುರಕ್ಷತೆ ಹಾಗೂ ದಕ್ಷತೆಯ ಮಾಹಿತಿಯನ್ನು ಅನುಮೋದನೆಗೆ ಸಲ್ಲಿಸಿದರೆ ಸಾಕು ಎಂದು ತಜ್ಞರ ಸಮಿತಿ ಹೈದರಾಬಾದ್ ಮೂಲದ ಡಾ. ರೆಡ್ಡೀಸ್ ಲ್ಯಾಬೊರೇಟರಿಗೆ ತಿಳಿಸಿದೆ.

ಸ್ಪುಟ್ನಿಕ್ ಲೈಟ್ ಲಸಿಕೆಯ ಪ್ರಯೋಗಕ್ಕೆ ಸಂಬಂಧಿಸಿದಂತೆ ಡಾ. ರೆಡ್ಡೀಸ್ ಲ್ಯಾಬೊರೈಟರಿ ಕೇಂದ್ರ ಔಷಧ ನಿಯಂತ್ರಕಕ್ಕೆ ಅರ್ಜಿ ಸಲ್ಲಿಸಿತ್ತು. ಗುರುವಾರ, ತಜ್ಞರ ಸಮಿತಿ ಸ್ಪುಟ್ನಿಕ್ ಲೈಟ್ ಲಸಿಕೆಯ ಪ್ರಯೋಗಕ್ಕೆ ಅನುಮತಿ ನೀಡಿರಲಿಲ್ಲ.

Dr Reddys Allowed To Submit Sputnik Light Safety Data

ಔಷಧ ನಿಯಂತ್ರಕ ಸಂಸ್ಥೆಯ ತಜ್ಞರ ಸಮಿತಿ, ಈ ಲಸಿಕೆಯ ಪ್ರಯೋಗ ನಡೆಸಲು ಯಾವುದೇ ವೈಜ್ಞಾನಿಕ ತರ್ಕ ಕಂಡುಬಂದಿಲ್ಲ ಎಂದು ಉಲ್ಲೇಖಿಸಿತ್ತು. ಭಾರತದಲ್ಲಿ ಪ್ರಯೋಗ ನಡೆಸಲು ಡಾ. ರೆಡ್ಡೀಸ್ ಅರ್ಜಿಯನ್ನು ಪರಿಗಣಿಸಿರಲಿಲ್ಲ.

ಆನಂತರ ನಡೆದ ಬೆಳವಣಿಗೆಯಲ್ಲಿ, ಸ್ಪುಟ್ನಿಕ್ ಲೈಟ್ ಲಸಿಕೆಗೆಯ ಪ್ರಯೋಗವನ್ನು ಮತ್ತೆ ಪ್ರತ್ಯೇಕವಾಗಿ ನಡೆಸುವ ಅವಶ್ಯಕತೆಯಿಲ್ಲ. ಅದರ ಮಾಹಿತಿಯನ್ನು ಒದಗಿಸಿದರೆ ಸಾಕು ಎಂದು ತಜ್ಞರ ಸಮಿತಿ ಸಲಹೆ ನೀಡಿರುವುದಾಗಿ ತಿಳಿದುಬಂದಿದೆ.

"ಸ್ಪುಟ್ನಿಕ್ ಲೈಟ್" ಲಸಿಕೆ ಪ್ರಯೋಗಕ್ಕೆ ಭಾರತದಲ್ಲಿ ಸಿಗಲಿಲ್ಲ ಗ್ರೀನ್ ಸಿಗ್ನಲ್

ಸ್ಪುಟ್ನಿಕ್ ವಿ ನಂತರ ರಷ್ಯಾ, ಸ್ಪುಟ್ನಿಕ್ ಲೈಟ್ ಎಂಬ ಏಕ ಡೋಸ್ ಲಸಿಕೆಯನ್ನು ಮೇ ತಿಂಗಳಿನಲ್ಲಿ ಪರಿಚಯಿಸಿತ್ತು. ರಷ್ಯಾದ ಆರೋಗ್ಯ ಸಚಿವಾಲಯ, ಎಪಿಡೆಮಿಯಾಲಜಿ, ಮೈಕ್ರೋಬಯಾಲಜಿಯ ಗಮಾಲಯ ರಾಷ್ಟ್ರೀಯ ಸಂಶೋಧನಾ ಕೇಂದ್ರ ಹಾಗೂ ಆರ್‌ಡಿಐಎಫ್ ಸೇರಿ ಸ್ಪುಟ್ನಿಕ್ ಲೈಟ್ ಲಸಿಕೆ ಅಭಿವೃದ್ಧಿಪಡಿಸಿದ್ದವು.

ಸುಮಾರು ಆರು ತಿಂಗಳುಗಳ ಹಿಂದೆ ಸ್ಪುಟ್ನಿಕ್ V ಲಸಿಕೆ ಹಾಕಿಸಿಕೊಂಡವರಿಗೆ ಸ್ಪುಟ್ನಿಕ್ ಲೈಟ್ ಲಸಿಕೆ ಬೂಸ್ಟರ್ ರೀತಿಯಲ್ಲಿ ಕೆಲಸ ಮಾಡಲಿದೆ ಎಂದು ಕಂಪನಿ ತಿಳಿಸಿದೆ.

English summary
Dr Reddy's allowed to submit Sputnik Light vaccine safety data, no need for phase 3 trials in India
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X