ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಸ್ಪುಟ್ನಿಕ್ v ಪ್ರಯೋಗಕ್ಕೆ ಡಿಸಿಜಿಐನಿಂದ ಅನುಮತಿ ಕೇಳಿದ ರೆಡ್ಡೀಸ್ ಲ್ಯಾಬ್

|
Google Oneindia Kannada News

ನವದೆಹಲಿ,ಅಕ್ಟೋಬರ್ 03: ಭಾರತದಲ್ಲಿ ರಷ್ಯಾದ ಸ್ಪುಟ್ನಿಕ್ v ಕೊರೊನಾ ಲಸಿಕೆಯ ಮೂರನೇ ಹಂತದ ಪ್ರಯೋಗಕ್ಕೆ ರೆಡ್ಡೀಸ್ ಲ್ಯಾಬೊರೇಟರಿ ಡಿಸಿಜಿಐನಿಂದ ಅನುಮತಿ ಕೇಳಿದೆ.

'ಸ್ಪುಟ್ನಿಕ್ ವಿ ಲಸಿಕೆಯ ಮೂರನೇ ಹಂತದ ಕ್ಲಿನಿಕಲ್ಪ್ರಯೋಗಕ್ಕಾಗಿ ರೆಡ್ಡೀಸ್ ಲ್ಯಾಬೊರೇಟರೀಸ್‌ನವರು ಡಿಸಿಜಿಐಗೆ ಅರ್ಜಿ ಸಲ್ಲಿಸಿದ್ದಾರೆ. ಕ್ಲಿನಿಕಲ್‌ ಪ್ರಯೋಗಕ್ಕೆ ಡಿಸಿಜಿಐ ಸಂಸ್ಥೆ ಅನುಮೋದನೆ ನೀಡುವ ಮೊದಲು, ಅರ್ಜಿಯಲ್ಲಿರುವ ತಾಂತ್ರಿಕ ಅಂಶಗಳನ್ನು ಮೌಲ್ಯಮಾಪನ ನಡೆಸಲಿದೆ' ಎಂದು ಮೂಲಗಳು ತಿಳಿಸಿವೆ.

80,000 ಕೋಟಿ ರೂ ಲೆಕ್ಕಾಚಾರ ಒಪ್ಪುವುದಿಲ್ಲ ಎಂದ ಸರ್ಕಾರ80,000 ಕೋಟಿ ರೂ ಲೆಕ್ಕಾಚಾರ ಒಪ್ಪುವುದಿಲ್ಲ ಎಂದ ಸರ್ಕಾರ

ಇಲ್ಲಿವರೆಗೂ ರೆಡ್ಡೀಸ್ ಲ್ಯಾಬೊರೇಟರಿ ಮತ್ತು ರಷ್ಯಾ ಡೈರೆಕ್ಟ್‌ ಇನ್ವೆಸ್ಟ್‌ಮೆಂಟ್ ಫಂಡ್ (ಆರ್‌ಡಿಐಎಫ್‌) ಜಂಟಿಯಾಗಿ ಎರಡು ಹಂತಗಳಲ್ಲಿ ಸ್ಪುಟ್ನಿಕ್ ವಿ ಲಸಿಕೆಯ ಕ್ಲಿನಿಕಲ್ ಟ್ರಯಲ್ ಪೂರ್ಣಗೊಳಿಸಿವೆ.

Dr Reddy’s Seeks Nod For Phase-3 Clinical Trial Of Russian Covid-19 Vaccine Sputnik V

ರಷ್ಯಾದಲ್ಲಿ ಸೆಪ್ಟೆಂಬರ್ 1ರಿಂದ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ಆರಂಭವಾಗಿದೆ. 40 ಸಾವಿರ ಸ್ವಯಂ ಸೇವಕರು ಈ ಪ್ರಯೋಗಕ್ಕೆ ಒಳಪಡುತ್ತಿದ್ದಾರೆ.

ಭಾರತದಲ್ಲಿ ಕ್ಲಿನಿಕಲ್‌ ಟ್ರಯಲ್‌ಗೆ ಔಷಧ ನಿಯಂತ್ರಣ ಸಂಸ್ಥೆ ಅನುಮತಿ ನೀಡಿದರೆ, 10 ಕೋಟಿ ಡೋಸೇಜ್‌ಗಳಷ್ಟು ಲಸಿಕೆಯನ್ನು ರೆಡ್ಡಿ ಲ್ಯಾಬೊರೇಟರಿಗೆ ಪೂರೈಸುವುದಾಗಿ ಆರ್‌ಡಿಎಫ್‌ಐ ಕಳೆದ ತಿಂಗಳು ತಿಳಿಸಿತ್ತು.

Recommended Video

BY Vijayendra ಅವರಿಗೆ ಕೊರೊನ ಸೋಂಕು , ಟ್ವಿಟ್ಟರ್ ನಲ್ಲಿ ಹೇಳಿದ್ದೇನು | Oneindia Kannada

English summary
Dr Reddy's Laboratories has applied to the Drugs Controller General of India for permission to conduct phase-3 human clinical trials of the Russian vaccine Sputnik V against Covid-19 in India, sources said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X