ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಸೋಂಕು ತಡೆಗೆ ಡಬಲ್ ಮಾಸ್ಕ್: ಎಂಥಾ ಮಾಸ್ಕ್ ಧರಿಸಬೇಕು, ಎಂಥದ್ದು ಧರಿಸಕೂಡದು?

|
Google Oneindia Kannada News

ನವದೆಹಲಿ, ಮೇ 10: ದೇಶಾದ್ಯಂತ ಕೊರೊನಾ ಎರಡನೇ ಅಲೆ ಹೆಚ್ಚು ಆತಂಕವನ್ನು ಸೃಷ್ಟಿಸುತ್ತಿದೆ. ಹೀಗಿರುವಾಗ ಕೊರೊನಾ ಎರಡನೇ ಅಲೆ ತಡೆಯಲು ಡಬಲ್ ಮಾಸ್ಕ್ ಧರಿಸಲು ತಜ್ಞರು ಸಲಹೆ ನೀಡಿದ್ದಾರೆ.

ಅಧ್ಯಯನದ ಪ್ರಕಾರ ಬಿಗಿಯಾಗಿ ಜೋಡಿಸಲಾಗಿರುವ ಎರಡು ಲೇಯರ್ ಮಾಸ್ಕ್ ಧರಿಸುವುದರಿಂದ ಕೊರೊನಾ ಸೋಂಕನ್ನು ತಡೆಯಬಹುದು. ಕೊರೊನಾ ಸೋಂಕಿನ ಕಣಗಳನ್ನು ಫಿಲ್ಟರ್ ಮಾಡುವ ಮೂಲಕ ನಿಮಗಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ.

ಕೊರೊನಾ ನಿರ್ವಹಣೆ: ಸ್ವಯಂ ಪ್ರೇರಿತ ಅರ್ಜಿ ವಿಚಾರಣೆ ಮೇ 13ಕ್ಕೆ ಮುಂದೂಡಿಕೆಕೊರೊನಾ ನಿರ್ವಹಣೆ: ಸ್ವಯಂ ಪ್ರೇರಿತ ಅರ್ಜಿ ವಿಚಾರಣೆ ಮೇ 13ಕ್ಕೆ ಮುಂದೂಡಿಕೆ

ಹಾಗೆಯೇ ನೇರವಾಗಿ ವೈರಸ್ ನಿಮ್ಮ ಮೂಗು ಅಥವಾ ಬಾಯಿ ಮೂಲಕ ದೇಹವನ್ನು ಸೇರುವುದಿಲ್ಲ.ಕೊರೊನಾ ಸೋಂಕಿನ ಎರಡನೇ ಅಲೆಯನ್ನು ಎದುರಿಸುತ್ತಿರುವ ಹಲವು ರಾಜ್ಯಗಳಲ್ಲ ವೈದ್ಯಕೀಯ ಆಮ್ಲಜನಕ, ವೆಂಟಿಲೇಟರ್ ಕೊರತೆ ಎದುರಾಗಿದೆ. ನಿತ್ಯ 3 ಲಕ್ಷಕ್ಕೂ ಅಧಿಕ ಕೊರೊನಾ ಸೋಂಕಿತ ಪ್ರಕರಣಗಳು ದಾಖಲಾಗುತ್ತಿವೆ.

Double-Masking Amid COVID-19 Second Wave: Centre Releases Dos And Don’ts

ದೇಶದಲ್ಲಿ ಒಂದೇ ದಿನ 3,66,161 ಮಂದಿಗೆ ಕೊರೊನಾವೈರಸ್ ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಕಳೆದ 24 ಗಂಟೆಗಳಲ್ಲಿ 3,53,818 ಸೋಂಕಿತರು ಗುಣಮುಖರಾಗಿದ್ದರೆ, 3,754 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ.

ಸೋಮವಾರದ ಅಂಕಿ-ಅಂಶಗಳ ಪ್ರಕಾರ, ದೇಶದಲ್ಲಿ ಒಟ್ಟು 2,26,62,575 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಈವರೆಗೂ 2,26,62,575 ಸೋಂಕಿತರು ಗುಣಮುಖರಾಗಿದ್ದು, ಒಟ್ಟು 2,46,116 ಸಾವಿನ ಪ್ರಕರಣಗಳು ಪತ್ತೆಯಾಗಿವೆ. ಭಾರತದಲ್ಲಿ 37,45,237 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಭಾರತದಲ್ಲಿ ಈವರೆಗೂ 17,01,53,432 ಕೋಟಿ ಫಲಾನುಭವಿಗಳಿಗೆ ಲಸಿಕೆ ವಿತರಣೆ ಮಾಡಲಾಗಿದೆ. ಈ ಪೈಕಿ 95,46,871 ಆರೋಗ್ಯ ಕಾರ್ಯಕರ್ತರಿಗೆ ಮೊದಲ ಡೋಸ್ ಮತ್ತು 64,71,090 ಆರೋಗ್ಯ ಕಾರ್ಯಕರ್ತರಿಗೆ ಎರಡನೇ ಡೋಸ್ ನೀಡಲಾಗಿದೆ. 1,39,71,341 ಜನ ಮೊದಲ ಶ್ರೇಣಿ ಕಾರ್ಮಿಕರಿಗೆ ಮೊದಲ ಡೋಸ್ ಹಾಗೂ 77,54,283 ಕಾರ್ಮಿಕರಿಗೆ ಎರಡನೇ ಡೋಸ್ ಕೊವಿಡ್-19 ಲಸಿಕೆ ನೀಡಲಾಗಿದೆ.

ಹಾಗಿದ್ದರೆ ಎಂತಾ ಮಾಸ್ಕ್ ಧರಿಸಬೇಕು, ಯಾವುದಾದರೂ ಎರಡು ಮಾಸ್ಕ್ ಧರಿಸಬಹುದೇ, ಮಾಸ್ಕ್ ಎಷ್ಟು ದಪ್ಪವಿರಬೇಕು ಹೀಗೆ ಸಾಕಷ್ಟು ಪ್ರಶ್ನೆಗಳು ಉದ್ಭವಾಗುವುದು ಸಹಜ ಅದಕ್ಕೆ ಉತ್ತರ ಇಲ್ಲಿದೆ.

ಯಾವ ರೀತಿಯ ಮಾಸ್ಕ್ ಧರಿಸಬೇಕು:
-ಡಬಲ್ ಮಾಸ್ಕ್ ಎಂದರೆ ಸರ್ಜಿಕಲ್ ಮಾಸ್ಕ್ ಆಗಿರಬೇಕು ಜತೆಗೆ ಆ 2-3 ಪದರಗಳು ಬಟ್ಟೆಯದ್ದಾಗಿರಬೇಕು.
-ಮಾಸ್ಕ್‌ಮೂಗಿನ ಮೇಲೆ ಗಾಳಿ ನೇರವಾಗಿ ಒಳಬರದಂತೆ ಬಿಗಿಯಾಗಿರಬೇಕು
-ನಿಮ್ಮ ಉಸಿರುಗಟ್ಟದ ರೀತಿ ನೋಡಿಕೊಳ್ಳಬೇಕು
-ನಿತ್ಯವೂ ಮಾಸ್ಕ್ ತೊಳೆಯಬೇಕು

ಯಾವ ರೀತಿಯ ಮಾಸ್ಕ್ ಬಳಸಬಾರದು
-ಒಂದೇ ರೀತಿಯ ಎರಡು ಮಾಸ್ಕ್ ಬಳಸಬೇಕು
-ಹಾಗೆಯೇ ಒಂದೇ ಮಾಸ್ಕ್ ಒಂದು ದಿನಕ್ಕಿಂತ ಹೆಚ್ಚಿನ ದಿನಗಳ ಕಾಲ ಬಳಸಬೇಡಿ
-ನಿತ್ಯವೂ ಮಾಸ್ಕ್ ತೊಳೆಯಿರಿ

English summary
With the country battling with the second wave of coronavirus, several medical experts have recommended wearing two masks to prevent the infection.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X