ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಳಗ್ಗಿನ ತಿಂಡಿಯಲ್ಲಿ ಅಗ್ರಸ್ಥಾನ ಪಡೆಯಿತು 'ದೋಸೆ'

|
Google Oneindia Kannada News

'ಬೆಳಗ್ಗೆ ತಿಂಡಿ ಏನು?' ಎಂದು ರಾತ್ರಿ ಮಲಗುವ ಮುನ್ನ ಮಕ್ಕಳು ಕೇಳುವ ಪ್ರಶ್ನೆಗೆ ಅಮ್ಮ, 'ದೋಸೆ' ಎಂದು ಉತ್ತರಿಸಿಬಿಟ್ಟರೆ ಅಂದು ನೆಮ್ಮದಿಯ ನಿದ್ದೆ! ಬೆಳಗ್ಗೆ ಎದ್ದು ಆ ಬಿಸಿ ಬಿಸಿ, ರುಚಿ ರುಚಿ ದೋಸೆ ಸವಿಯುವುದನ್ನು ನೆನಪಿಸಿಕೊಂಡು, ನೀರೂರಿದ ಬಾಯಿಯಲ್ಲೇ ನಿದ್ದೆ ಹೋಗಿರ್ತಾರೆ ಮಕ್ಕಳು! ಹೌದು, ಅದು ದೋಸೆಯ ಕಮಾಲ್!

ಬಿಸಿ ಬಿಸಿ ತವಾದ ಮೇಲೆ, ಬೆಳ್ಳನೆ - ತೆಳ್ಳನೆ ಹಿಟ್ಟು ಒಪ್ಪವಾಗಿ, ಗೋಲಾಕಾರದಲ್ಲಿ ಹರವಿಕೊಡರೆ ಒಂದೆರಡು ನಿಮಿಷದಲ್ಲಿ ದೋಸೆ ಎಂಬ ಸ್ವಾದಿಷ್ಟ ತಿಂಡಿ ಪ್ಲೇಟಿಗೆ ಬಂದು ಬಿದ್ದಿರುತ್ತದೆ! ಅದಕ್ಕೆ ಹೊಂದುವಂಥ ಚಟ್ನಿಯೋ, ಸಾಂಬಾರೋ ಇದ್ದುಬಿಟ್ಟರೆ 'ತಿಂದವನೇ ಬಲ್ಲ ದೋಸೆಯ ರುಚಿಯ' ಎಂದುಕೊಂಡು ಬ್ಯಾಂಟಿಂಗ್ ಆರಂಭವಾಗಿರುತ್ತದೆ. ಇದೇನು ಹೊಟ್ಟೆಯಾ, ಇಲ್ಲ ಕನ್ನಂಬಾಡಿ ಕಟ್ಟೆಯಾ ಎಂದೆನ್ನಿಸುವಷ್ಟು ದೋಸೆ ಹೊಟ್ಟೆಯನ್ನು ಸೇರಿಬಿಟ್ಟಿರುತ್ತದೆ![ಬಿಸಿ ಬಿಸಿ ಮದ್ದೂರು ವಡೆಯ ಹಿಂದೊಂದು ಸಿಂಪಲ್ ಕಹಾನಿ!]

ನಿಜ ಹೇಳಬೇಕಂದ್ರೆ, ದಕ್ಷಿಣ ಭಾರತೀಯರ ಪಾಲಿಗೆ ದೋಸೆಗೆ ಮಿಗಿಲಾದ ತಿಂಡಿ ಬೇರೆ ಇಲ್ಲ! ಅದಕ್ಕೆಂದೇ ಇತ್ತೀಚೆಗೆ ಫುಡ್ ಆರ್ಡರಿಂಗ್ ಆಪ್ 'ಸ್ವಿಗ್ಗಿ' ನಡೆಸಿದ ಸಮೀಕ್ಷೆಯೊಂದರಲ್ಲಿ, ಅತೀ ಹೆಚ್ಚು ಭಾರತೀಯರು ಇಷ್ಟಪಡುವ ಬೆಳಗ್ಗಿನ ತಿಂಡಿ ದೋಸೆಯೇ ಎಂಬುದು ದೃಢವಾಗಿದೆ!

ಅದರಕ್ಕೂ ರುಚಿ, ಉದರಕ್ಕೂ ಹಿತ

ಅದರಕ್ಕೂ ರುಚಿ, ಉದರಕ್ಕೂ ಹಿತ

ಬ್ರೇಕ್ ಫಾಸ್ಟ್ ಎಂದೊಡನೆ ಹಲವರಿಗೆ ತಟ್ಟಂಥ ನೆನಪಾಗುವ ತಿಂಡಿ ದೋಸೆಯೇ. ಅದರಕ್ಕೂ ರುಚಿ, ಉದರಕ್ಕೂ ಹಿತ ಎಂಬ ಕಾರಣಕ್ಕೆ ದೋಸೆಯನ್ನೇ ಆಯ್ದುಕೊಳ್ಳುವವರು ಹಲವರು. ಅದರಲ್ಲೂ ಸಾಕಷ್ಟು ವೆರೈಟಿ ಇರುವುದರಿಂದ ದೋಸೆ ಪ್ರಿಯರಿಗೆ ಆಯ್ಕೆಯ ಅವಕಾಶ ಜಾಸ್ತಿ.

ತರಹೇವಾರಿ ದೋಸೆ

ತರಹೇವಾರಿ ದೋಸೆ

ದೋಸೆಯಲ್ಲಿ ಸಾಕಷ್ಟು ವಿಧಗಳಿವೆ. ಪ್ಲೇನ್ ದೋಸೆ, ಮಸಾಲೆ ದೋಸೆ, ಆನಿಯನ್ ದೋಸೆ, ಸೆಟ್ ದೋಸೆ, ನೀರ್ ದೋಸೆ, ಪೇಪರ್ ದೋಸೆ, ರಾಗಿ ದೋಸೆ, ಗೋಧಿ ದೋಸೆ... ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ! ಇಷ್ಟೆಲ್ಲ ಆಯ್ಕೆಯ ಅವಕಾಶ ಇರುವುದರಿಂದಲೇ ದೋಸೆಗೆ ಬೇಡಿಕೆಯೂ ಜಾಸ್ತಿ.[ರವಾ ಇಡ್ಲಿಗೂ ವಿಶ್ವಯುದ್ಧಕ್ಕೂ ಎತ್ತಣಿಂದೆತ್ತಣ ಸಂಬಂಧವಯ್ಯ?]

ದೇಶದಾದ್ಯಂತ ಇದ್ದಾರೆ ದೋಸೆಪ್ರಿಯರು

ದೇಶದಾದ್ಯಂತ ಇದ್ದಾರೆ ದೋಸೆಪ್ರಿಯರು

ದೋಸೆ ಪ್ರೇಮ ಕೇವಲ ಕರ್ನಾಟಕ ಅಥವಾ ದಕ್ಷಿಣ ಭಾರತಕ್ಕಷ್ಟೇ ಸೀಮಿತವಾಗಿಲ್ಲ. ಮೆಟ್ರೋ ಸಿಟಿಗಳಾದ ದೆಹಲಿ, ಮುಂಬೈ, ಚೆನ್ನೈ, ಪುಣೆ ಮುಂತಾದ ಕಡೆಗಳಲ್ಲೂ ಬೆಳಗ್ಗಿನ ಉಪಹಾರಕ್ಕೆ ಹೆಚ್ಚು ಜನರು ಆಯ್ಕೆ ಮಾಡಿಕೊಳ್ಳುವ ಮೂರು ಮುಖ್ಯ ತಿಂಡಿಗಳಲ್ಲಿ ದೋಸೆಯೂ ಸ್ಥಾನ ಪಡೆದಿದೆಯಂತೆ!

ಆನ್ ಲೈನ್ ನಲ್ಲೂ ದೋಸೆಗೇ ಬೇಡಿಕೆ

ಆನ್ ಲೈನ್ ನಲ್ಲೂ ದೋಸೆಗೇ ಬೇಡಿಕೆ

ಆನ್ ಲೈನ್ ನಲ್ಲಿ ಬೆಳಗ್ಗಿನ ತಿಂಡಿಗೆ ಆರ್ಡರ್ ಮಾಡುವವರೂ ಹೆಚ್ಚಾಗಿ ದೋಸೆಯನ್ನೇ ಆರ್ಡರ್ ಮಾಡುತ್ತಿದ್ದು, ದೋಸೆ ಹೇಗಿದ್ದರೂ ರುಚಿಯಾಗಿಯೇ ಇರುತ್ತದೆ ಎಂಬ ಗ್ಯಾರಂಟಿಯ ಮೇಲೆ ಹೊಸ ಪ್ರಯೋಗಕ್ಕೆ ಮುಂದಾಗದೆ, ದೋಸೆಯನ್ನೇ ಜನರು ಆಯ್ದುಕೊಳ್ಳುತ್ತಿರಬಹುದೇನೋ![ಪೇಪರ್ ನಲ್ಲಿ ಬೋಂಡಾ ಕಟ್ಟಿಕೊಟ್ರೆ ತಗೋಬೇಡಿ, ಅದು ವಿಷ!]

365/ 24‌x7 ದೋಸೆ

365/ 24‌x7 ದೋಸೆ

ಬೆಳಗ್ಗಿನ ತಿಂಡಿಗಷ್ಟೇ ಅಲ್ಲ, ಸಂಜೆಯ ಉಪಾಹಾರಕ್ಕೂ ದೋಸೆಯನ್ನೇ ಇಷ್ಟಪಡುವವರಿದ್ದಾರೆ. ಅದಿರಲಿ, ಉತ್ತರ ಕನ್ನಡ ಜಿಲ್ಲೆಯ ಶಿರಸಿ- ಸಿದ್ದಾಪುರ ಭಾಗದ ಹವ್ಯಕರ ಮನೆಗಳಲ್ಲಿ 365 ದಿನ ಅಂದರೆ ವರ್ಷದ ಎಲ್ಲಾ ದಿನ, ಮೂರೂ ಹೊತ್ತೂ ದೋಸೆಯನ್ನೇ ತಿನ್ನುವವರಿದ್ದಾರೆ ಎಂದರೆ ಅಚ್ಚರಿಯಾಗಬಹುದು. ತೆಳ್ಳೇವು ಎಂದೇ ಪ್ರಸಿದ್ಧಿ ಪಡೆದ ತೆಳು ದೋಸೆಗೆ, ಕಾಯಿ ಚಟ್ನಿ ಇದ್ದರೆ ಅಲ್ಲಿನ ಜನರಿಗೆ ಬೇರೇನೂ ಬೇಡ![ಡೆಡ್ಲಿ ಕಾಂಬಿನೇಶನ್ ಮತ್ತು ಇಡ್ಲಿ ಕಾಂಬಿನೇಶನ್..]

English summary
According to reports quoting a recent survey by food ordering app Swiggy, Dosa has highest demand as breakfast dish. Here are few facts about south India's favourite dish.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X