ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹತ್ತರಲ್ಲಿ ಹನ್ನೊಂದು! ದೂರದರ್ಶನ ಸುದ್ದಿವಾಚಕಿ ಸಸ್ಪೆಂಡ್

|
Google Oneindia Kannada News

ನವದೆಹಲಿ, ಸೆ. 19 : ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು ಎಂಬ ಗಾದೆ ಇಲ್ಲಿ ನಿಜವಾಗಿದೆ. ತಪ್ಪು ಪದ ಪ್ರಯೋಗ ಮಾಡಿದ ದೂರದರ್ಶನದ ಸುದ್ದಿ ವಾಚಕಿ ಕೆಲಸ ಕಳೆದುಕೊಂಡು ಮನೆ ಸೇರಿದ್ದಾಳೆ.

ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಎಂದು ಕರೆಯುವ ಬದಲಾಗಿ 'ಹನ್ನೊಂದು ಜಿನ್ ಪಿಂಗ್' ಎಂದು ಸಂಭೋದಿಸಿದ್ದ ಸುದ್ದಿವಾಚಕಿ ಈಗ ಮನೆಯಲ್ಲಿ ಕುಳಿತು ವಾರ್ತೆ ವೀಕ್ಷಿಸಬೇಕಾಗಿದೆ. ಭಾರತದ ರಾಷ್ಟ್ರೀಯ ಪ್ರಸಾರ ವಾಹಿನಿ ದೂರದರ್ಶನ ಈ ಘಟನೆಯಿಂದ ಕೊಂಚ ಇರಿಸು ಮುರಿಸು ಅನುಭವಿಸಬೇಕಾಗಿದೆ.(ಭಾರತ-ಚೀನಾ ದ್ವಿಪಕ್ಷೀಯ ಸಹಿ ಕಂಡ ಒಪ್ಪಂದಗಳು)

china

ಇಂಗ್ಲಿಷ್‌ನಲ್ಲಿ ಚೀನಾ ಅಧ್ಯಕ್ಷರ ಹೆಸರು ಬರೆದರೆ 'Xi Jinping' ಎಂದಾಗುತ್ತದೆ ಮೊದಲ ಅಕ್ಷರಗಳನ್ನು ರೋಮನ್‌ ಅಂಕೆಯ ಹನ್ನೊಂದು ಎಂದು ಭಾವಿಸಿ ಓದಿದ ಸುದ್ದಿ ವಾಚಕಿ ಕೆಲಸ ಕಳೆದುಕೊಳ್ಳಬೇಕಾಗಿದೆ. ಮಾಡಿದ್ದ ಪ್ರಮಾದಕ್ಕೆ ದಂಡ ತೆತ್ತಿರುವ ಸುದ್ದಿಯನ್ನು ಸಸ್ಪೆಂಡ್‌ ಮಾಡಲಾಗಿದೆ.

ಸುದ್ದಿ ವಾಚಕಿಯನ್ನು ಕೆಲಸದಿಂದ ಸಸ್ಪೆಂಡ್‌ ಮಾಡಲಾಗಿದೆ. ಈ ರೀತಿಯ ಘಟನಾವಳಿಗಳು ಮುಂದೆ ಸಂಭವಿಸದಂತೆ ಎಚ್ಚರಿಕೆ ವಹಿಸಲಾಗುವುದು. ಅಲ್ಲದೇ ನಮ್ಮ ವಾಹಿನಿಯ ವ್ಯವಸ್ಥೆಯನ್ನು ಉತ್ತಮ ದಜರ್ಜೆಗೆ ಏರಿಸಲು ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಎಂದು ದೂರದರ್ಶನದ ಮುಖ್ಯ ಕಾರ್ಯನಿವರ್ವಾಹಕ ಜವಾಹರ್‌ ಸಿರ್‌ಕರ್‌ ಟ್ವಿಟ್ಟರ್‌ ನಲ್ಲಿ ಬರೆದುಕೊಂಡಿದ್ದಾರೆ.(ಬಾಪೂ ಸಮಾಧಿಗೆ ನಮಿಸಿದ ಚೀನಾ ಪ್ರಥಮ ದಂಪತಿ)

ದೇಶಕ್ಕೆ ಇದೊಂದು ಬೇಸರ ತರಿಸುವ ಸಂಗತಿಯಾಗಿದ್ದು ಚೀನಾ ಅಧ್ಯಕ್ಷರು ಭಾರತ ಪ್ರವಾಸಲ್ಲೇ ಇದ್ದಾಗ ಇಂಥ ಘಟನೆ ನಡೆದಿರುವುದು ದುರ್ದೈವ. ಭಾರತ ಮತ್ತು ಚೀನಾ ನಡುವೆ ವಿವಿಧ ಒಪ್ಪಂದಗಳು ನಡೆಯುತ್ತಿದ್ದಾಗಲೇ ಇಂಥ ಪ್ರಮಾದ ನಡೆದಿರುವುದು ದೇಶ ತಲೆತಗ್ಗಿಸುವಂತೆ ಮಾಡಿದೆ.

English summary
India's state broadcaster Doordarshan was left red-faced on Thursday after one of its news anchor prounounced Chinese President Xi Jinping's name as "Eleven Jinping", mistaking the word Xi for the Roman numeral XI, said an AFP report.The anchor was sacked later.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X