ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಟ್ರೋಲ್-ಡೀಸೆಲ್ ಇಳಿಸಿದ ಸರ್ಕಾರದ ಲೆಕ್ಕಾಚಾರ ತಿಳಿಸಿದ ಸುರ್ಜೇವಾಲಾ!

|
Google Oneindia Kannada News

ನವದೆಹಲಿ, ಮೇ 21: ದೇಶದಲ್ಲಿ ಪೆಟ್ರೋಲ್-ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ಕಾಂಗ್ರೆಸ್ ಮುಖಂಡ ರಣದೀಪ್ ಸುರ್ಜೇವಾಲಾ ಟೀಕಿಸಿದ್ದಾರೆ.

ಮಾನ್ಯ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರೇ, ದೇಶದ ಜನರನ್ನು ಮೂರ್ಖರನ್ನಾಗಿ ಮಾಡುವುದು ಬೇಡ ಎಂದು ಟ್ವೀಟ್ ಮಾಡಿರುವ ಅವರು, ದರದ ಏರಿಳಿತದ ಕುರಿತು ತಮ್ಮ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.

ಕೇಂದ್ರ ಸರ್ಕಾರವು ಶನಿವಾರ ಪೆಟ್ರೋಲ್ ಮೇಲೆ 8 ರೂಪಾಯಿ ಹಾಗೂ ಡೀಸೆಲ್ ಮೇಲೆ 6 ರೂಪಾಯಿ ಅಬಕಾರಿ ಸುಂಕವನ್ನು ಕಡಿತಗೊಳಿಸಿದೆ. ಇದರಿಂದಾಗಿ ದೇಶದಲ್ಲಿ ಪೆಟ್ರೋಲ್ ದರ ಪ್ರತಿ ಲೀ.ಗೆ 9.50 ರೂಪಾಯಿ ಹಾಗೂ ಡೀಸೆಲ್ ದರ ಪ್ರತಿ ಲೀ.ಗೆ 7 ರೂಪಾಯಿ ಇಳಿಕೆಯಾಗಲಿದೆ.

Dont Be Fool People; Congress Leader Randeep Singh Surjewala Tweet on Petrol-Diesel Rate Reduce

ಪೆಟ್ರೋಲ್ ದರದ ಏರಿಳಿತ ಹೇಗಿದೆ?

"2014ರ ಮೇ ತಿಂಗಳಿನಲ್ಲಿ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವು ಪ್ರತಿ ಲೀ.ಗೆ 9.50 ರೂಪಾಯಿ ಇತ್ತು. 2022 ಮೇ ತಿಂಗಳಿನಲ್ಲಿ ಅದೇ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ಲೀ.ಗೆ 27.90 ರೂಪಾಯಿ ಆಗಿದ್ದು, ನೀವು ಕೇವಲ 8 ರೂಪಾಯಿ ಇಳಿಕೆ ಮಾಡಿದ್ದೀರಿ. ಪೆಟ್ರೋಲ್ ಮೇಲೆ 18.42 ರೂಪಾಯಿ ಸುಂಕವನ್ನು ಹೆಚ್ಚಿಸಿದ್ದು, ಈಗ 8 ರೂಪಾಯಿ ಕಡಿತಗೊಳಿಸಿದ್ದೀರಿ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿನ ಸುಂಕಕ್ಕೆ ಹೋಲಿಸಿದರೆ ಇಂದಿಗೂ ನೀವು ವಿಧಿಸುತ್ತಿರುವ ಅಬಕಾರಿ ಸುಂಕವು 19.90 ರೂಪಾಯಿ ಹೆಚ್ಚಾಗಿಯೇ ಇದೆ," ಎಂದು ತಮ್ಮ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.

ಡೀಸೆಲ್ ದರದ ಏರಿಳಿತ ಹೇಗಿದೆ?:

ಪೆಟ್ರೋಲ್ ರೀತಿಯಲ್ಲೇ ಡೀಸೆಲ್ ದರದವನ್ನೂ ಸಹ ವಿಶ್ಲೇಷಿಸಲಾಗಿದೆ. "2014ರ ಮೇ ತಿಂಗಳಿನಲ್ಲಿ ಡೀಸೆಲ್ ಮೇಲಿನ ಅಬಕಾರಿ ಸುಂಕವು ಪ್ರತಿ ಲೀ.ಗೆ 3.56 ರೂಪಾಯಿ ಇತ್ತು. 2022 ಮೇ ತಿಂಗಳಿನಲ್ಲಿ ಅದೇ ಪೆಡೀಸೆಲ್ ಮೇಲಿನ ಅಬಕಾರಿ ಸುಂಕ ಲೀ.ಗೆ 21.80 ರೂಪಾಯಿ ಆಗಿದ್ದು, ನೀವು ಈಗ 6 ರೂಪಾಯಿ ಇಳಿಕೆ ಮಾಡಿದ್ದೀರಿ. ಡೀಸೆಲ್ ಮೇಲೆ 18.24 ರೂಪಾಯಿ ಸುಂಕವನ್ನು ಹೆಚ್ಚಿಸಿದ್ದು, ಈಗ 6 ರೂಪಾಯಿ ಕಡಿತಗೊಳಿಸಿದ್ದೀರಿ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿನ ಸುಂಕಕ್ಕೆ ಹೋಲಿಸಿದರೆ ಇಂದಿಗೂ ಅಬಕಾರಿ ಸುಂಕ 15.80 ರೂಪಾಯಿ ಹೆಚ್ಚಾಗಿಯೇ ಇದೆ," ಎಂದು ಟ್ವೀಟ್ ಮಾಡಿದ್ದಾರೆ.

ಜನರನ್ನು ಮೂರ್ಖರನ್ನಾಗಿ ಮಾಡಬೇಡಿ:

"ಇಂದು ಪೆಟ್ರೋಲ್ ಬೆಲೆ 105.41 ರೂಪಾಯಿಗೆ ಒಂದು ಲೀಟರ್ ಆಗಿದೆ. ನೀವು ಈಗ 9.50 ರೂಪಾಯಿ ಕಡಿಮೆಯಾಗಲಿದೆ ಎಂದು ಹೇಳುತ್ತಿದ್ದೀರಿ. ಕಳೆದ ಮಾರ್ಚ್ 21ರ, 2022 ರಂದು ಅಂದರೆ 60 ದಿನಗಳ ಹಿಂದೆ ಪೆಟ್ರೋಲ್ ಬೆಲೆ ಪ್ರತಿ ಲೀ.ಗೆ 95.41 ರೂಪಾಯಿ ಇತ್ತು. 60 ದಿನಗಳಲ್ಲಿ ನೀವು ಒಂದು ಲೀಟರ್ ಪೆಟ್ರೋಲ್ ಬೆಲೆಯನ್ನು 10 ಹೆಚ್ಚಿಸಿ, ಈಗ 9.50 ರೂಪಾಯಿ ಕಡಿಮೆ ಮಾಡಿದ್ದೀರಿ. ಜನರನ್ನು ಈ ರೀತಿ ಮೋಸಗೊಳಿಸಬೇಡಿ," ಎಂದು ರಣದೀಪ್ ಸುರ್ಜೇವಾಲಾ ಟ್ವೀಟ್ ಮಾಡಿದ್ದಾರೆ.

ಡೀಸೆಲ್ ಏರಿಳಿತದಲ್ಲೂ ಅದೇ ಲೆಕ್ಕಾಚಾರ:

"ಇಂದು ಡೀಸೆಲ್ ಬೆಲೆ ಪ್ರತಿ ಲೀ.ಗೆ 96.67 ಆಗಿದೆ. ಲೀಟರ್‌ಗೆ 7ರಷ್ಟು ಕಡಿಮೆ ಮಾಡಲಾಗುವುದು ಎಂದು ನೀವು ಹೇಳುತ್ತೀರಿ. 21ನೇ ಮಾರ್ಚ್ 2022ರಂದು ಅಂದರೆ 60 ದಿನಗಳ ಹಿಂದೆ ಡೀಸೆಲ್ ಬೆಲೆ ಪ್ರತಿ ಲೀ.ಗೆ 86.67 ರೂಪಾಯಿ ಇತ್ತು. 60 ದಿನಗಳಲ್ಲಿ ನೀವು ಡೀಸೆಲ್ ಬೆಲೆಯನ್ನು ಪ್ರತಿ ಲೀ.ಗೆ 10 ಹೆಚ್ಚಿಸಿ, ಈಗ 7 ರೂಪಾಯಿ ಕಡಿಮೆ ಮಾಡಿದ್ದೀರಿ. ಜನರನ್ನು ಮೋಸಗೊಳಿಸುವುದನ್ನು ನಿಲ್ಲಿಸಿ!," ಎಂದು ತಮ್ಮ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.

English summary
Dont Be Fool People; Congress Leader Randeep Singh Surjewala Tweet on Petrol-Diesel Rate Reduce.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X