ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಯೋಲ್: ಮೋದಿ ವಿರುದ್ಧ ಘೋಷಣೆ ಕೂಗಿದವರ ವಿರುದ್ಧ ಶಾಜಿಯಾ ಗರಂ

|
Google Oneindia Kannada News

ನವದೆಹಲಿ, ಆಗಸ್ಟ್ 18: ದಕ್ಷಿಣ ಕೊರಿಯಾದ ಸಿಯೋಲ್‌ನಲ್ಲಿ ಭಾರತ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗಿದವರ ವಿರುದ್ಧ ಬಿಜೆಪಿ ನಾಯಕಿ ಶಾಜಿಯಾ ಇಲ್ಮಿ ಗರಂ ಆಗಿದ್ದಾರೆ.

ಪಾಕಿಸ್ತಾನ ಧ್ಜಜಗಳನ್ನು ಹಿಡಿದು ನರೇಂದ್ರ ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿದವರಿಗೆ ತಿರುಗೇಟು ನೀಡಿದ್ದಾರೆ.

‘Don’t abuse our PM’: Shazia Ilmi confronts ‘Azadi’ protesters with Pak flags in Seoul

"ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಅಧಿಕಾರ ನೀಡುವ ಸಂವಿಧಾನದ 370ನೇ ವಿಧಿಯನ್ನು ಹಿಂಪಡೆಯುವುದು ಭಾರತದ ಆಂತರಿಕ ವಿಚಾರವಾಗಿದ್ದು, ಈ ವಿಚಾರವಾಗಿ ಪ್ರಶ್ನಿಸುವ ಯಾವ ಹಕ್ಕನ್ನು ಪಾಕಿಸ್ತಾನ ಹೊಂದಿಲ್ಲ" ಎಂದು ಪ್ರತಿಭಟನಾಕಾರರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

"ನಮ್ಮ ದೇಶ ಹಾಗೂ ಪ್ರಧಾನಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಬೇಡಿ" ಎಂದು ಪ್ರತಿಭಟನಾಕಾರರ ಮುಂದೆ ಧೈರ್ಯವಾಗಿ ಹೇಳಿದ್ದಾರೆ. ಸಿಯೋಲ್ ನ ಭಾರತೀಯ ರಾಯಭಾರ ಕಚೇರಿ ಎದುರು ಪಾಕಿಸ್ತಾನ ಬೆಂಬಲಿಗರು ಪಾಕ್ ಧ್ವಜ ಹಿಡಿದು, ಭಾರತ ವಿರುದ್ಧ ಘೋಷಣೆ ಕೂಗುತ್ತಿದ್ದ ವಿಡಿಯೋವೊಂದನ್ನು ಎಎನ್ಐ ಹಂಚಿಕೊಂಡಿದೆ.

ಪ್ರತಿಭಟನಾಕಾರರು 'ಅಜಾದಿ' ಎಂದು ಕೂಗುತ್ತಾ, ಮೋದಿ ವಿರುದ್ಧ ಘೋಷಣೆ ಕೂಗುತ್ತಿದ್ದಂತೆ ಇಲ್ಮಿ ಹಾಗೂ ಜೊತೆಗಿದ್ದ ಇಬ್ಬರು ಇನ್ಕ್ವಿಲಾಬ್ ಜಿಂದಾಬಾದ್, ಇಂಡಿಯಾ ಜಿಂದಾಬಾದ್ ಎಂದು ಕೂಗಿದ್ದಾರೆ. "3 ಮಂದಿ ವಿರುದ್ಧ 300 ಮಂದಿ ಪಾಕಿಸ್ತಾನಿಗಳು" ಎಂದು ಘಟನೆ ಬಗ್ಗೆ ಶಾಜಿಯಾ ಟ್ವೀಟ್ ಮಾಡಿದ್ದರು. ಇದಾದ ಬಳಿಕ ಎಎನ್ಐ ವಿಡಿಯೋ ಟ್ವೀಟ್ ಮಾಡಿದೆ.

English summary
BJP leader Shazia Ilmi confronted Pakistani supporters in South Korea who were raising anti-Modi and anti-slogans.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X