ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದುಬಾರಿ ಗಿಡ ಹಾಳು ಮಾಡಿದ ಕತ್ತೆಗಳಿಗೆ 4 ದಿನ ಜೈಲು

|
Google Oneindia Kannada News

ಲಖನೌ, ನವೆಂಬರ್ 27: ಉತ್ತರಪ್ರದೇಶದ ಉರೈ ಜಿಲ್ಲಾ ಕಾರಾಗೃಹದಿಂದ ಕತ್ತೆಗಳಿಗೆ ಬಿಡುಗಡೆ ಭಾಗ್ಯ ಸಿಕ್ಕಿದ್ದು ಭಾರೀ ಸುದ್ದಿಯಾಗಿದೆ. ಅವುಗಳು ಮಾಡಿದ ತಪ್ಪಿಗೆ ನಾಲ್ಕು ದಿನ ಜೈಲಿನಲ್ಲಿ ಇರಿಸಿ, ಆ ನಂತರ ಬಿಡುಗಡೆ ಮಾಡಿದ್ದಾರೆ ಇಲ್ಲಿನ ಪೊಲೀಸರು. ಅಷ್ಟಕ್ಕೂ ಬಾಯಿಲ್ಲದ ಜೀವಗಳು ಅವು ಮಾಡಿದ ತಪ್ಪೇನು ಅಂತ ನೀವು ಕೇಳಬಹುದು. ಅಲ್ಲೇ ಇರುವುದು ಸುದ್ದಿಯ ತಿರುಳು.

ಆನೆ ಜತೆಗೆ ಬಾಹುಬಲಿ ಸ್ಟಂಟ್, ಬೆನ್ನ ಮೂಳೆಗೆ ತಂದಿತು ಕುತ್ತುಆನೆ ಜತೆಗೆ ಬಾಹುಬಲಿ ಸ್ಟಂಟ್, ಬೆನ್ನ ಮೂಳೆಗೆ ತಂದಿತು ಕುತ್ತು

ಜೈಲಿನೊಳಗೆ ಬೆಳೆಸೋಣ ಅಂದುಕೊಂಡು ತುಂಬ ದುಬಾರಿಯ ಹಾಗೂ ಉತ್ತಮ ದರ್ಜೆಯ ಸಸ್ಯಗಳನ್ನು ಪೊಲೀಸ್ ಅಧಿಕಾರಿಗಳು ತಂದಿರಿಸಿದ್ದಾರೆ. ಆದರೆ ಅಂಥ ಸಸ್ಯಗಳನ್ನು ಇವು ಹಾಳು ಮಾಡಿವೆ. ಅವುಗಳ ಮಾಲೀಕರಿಗೆ ಕೂಡ ಈ ಬಗ್ಗೆ ಹೇಳಿ, ಸ್ವಲ್ಪ ಗಮನಕ್ಕೆ ತಗೊಳ್ಳಿ ಅಂತಲೂ ಎಚ್ಚರಿಕೆ ಕೊಟ್ಟಿದ್ದಾರೆ. ಆದರೆ ಆ ಬಗ್ಗೆ ಏನೂ ಮುಂಜಾಗ್ರತೆ ತೆಗೆದುಕೊಳ್ಳಲಿಲ್ಲ ಅಂದಾಗ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ.

Donkeys released by UP police after 4 days

ಈ ಇಡೀ ಘಟನೆ ಬಗ್ಗೆ ಉರೈ ಜಿಲ್ಲಾ ಕಾರಾಗೃಹದ ಹೆಡ್ ಕಾನ್ ಸ್ಟೇಬಲ್ ವಿವರ ನೀಡಿದ್ದು, ನಮ್ಮ ಹಿರಿಯ ಅಧಿಕಾರಿಗಳು ಜೈಲಿನೊಳಗೆ ನೆಡಬೇಕು ಅಂದುಕೊಂಡಿದ್ದ ಕೆಲವು ದುಬಾರಿ ಸಸ್ಯಗಳನ್ನು ಈ ಕತ್ತೆಗಳು ಹಾಳು ಮಾಡಿದ್ದವು. ಅವುಗಳ ಮಾಲೀಕರಿಗೆ ಅದೆಷ್ಟೇ ಎಚ್ಚರಿಕೆ ಕೊಟ್ಟರೂ ಉಪಯೋಗ ಆಗಲಿಲ್ಲ. ಆದ್ದರಿಂದ ಅವುಗಳನ್ನು ಬಂಧಿಸಿ, ಜೈಲಿಗೆ ಹಾಕಿದ್ದೆವು ಎಂದಿದ್ದಾರೆ.

English summary
Police release a herd of donkeys from Urai district jail, Uttar Pradesh. They had been detained for destroying plants outside jail and were released after four days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X