ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಕಂದು ಕತ್ತೆ'ಗೆ ಸಿಕ್ಕಿತು ಪರೀಕ್ಷಾ ಪ್ರವೇಶ ಪತ್ರ!

|
Google Oneindia Kannada News

ಶ್ರೀನಗರ, ಏಪ್ರಿಲ್ 28: ಸೆಮೆಸ್ಟರ್ ಪೂರ್ತಿ ತರಗತಿಗೆ ಚಕ್ಕರ್ ಹೊಡೆದು ಕೊನೆಗೆ ಹಾಜರಾಗಿ ಕಡಿಮೆಯಾಗಿ ಹಾಲ್‌ ಟಿಕೆಟ್‌ಗಾಗಿ ಪ್ರಿನ್ಸಿಪಾಲರನ್ನು ಅಂಗಲಾಚುವ ವಿದ್ಯಾರ್ಥಿಗಳು ಈ ಸುದ್ದಿ ಕೇಳಿದರೆ ದಂಗಾಗುತ್ತಾರೆ. ಕೆಲಸಕ್ಕಾಗಿ ಪ್ರವೇಶ ಪರೀಕ್ಷೆಗಳನ್ನು ಬರೆಯಲು ಅವಕಾಶ ಸಿಗದೆ ಒದ್ದಾಡುವ ಉದ್ಯೋಗಾಕಾಂಕ್ಷಿಗಳು ಬೇಸರಪಟ್ಟುಕೊಳ್ಳಲೂಬಹುದು.

ಜಮ್ಮು ಮತ್ತು ಕಾಶ್ಮೀರದ ಸೇವಾ ಆಯ್ಕೆ ಮಂಡಳಿಯು ತಹಶೀಲ್ದಾರ್ ಹುದ್ದೆಯ ನೇಮಕಾತಿ ಪರೀಕ್ಷೆಗೆ ಕತ್ತೆಯೊಂದಕ್ಕೆ ಹಾಲ್‌ಟಿಕೆಟ್ ನೀಡಿದೆ.

ಒಳ್ಳೇ ದಿನಗಳು ಬರುತ್ತವೆ: ವೈರಲ್ ಆದ ಅಸಾರಾಮ್ ಫೋನ್ ಇನ್ ಸಂಭಾಷಣೆಒಳ್ಳೇ ದಿನಗಳು ಬರುತ್ತವೆ: ವೈರಲ್ ಆದ ಅಸಾರಾಮ್ ಫೋನ್ ಇನ್ ಸಂಭಾಷಣೆ

ಅಂದಹಾಗೆ ಆ ಕತ್ತೆಯ ಹೆಸರು "ಕಚೂರ್ ಖಾರ್" (ಕಂದು ಕತ್ತೆ) ಎಂದು. ಈ ಕತ್ತೆ ಶ್ರೀನಗರದ ಖನ್ಯಾರ್ ಗ್ರಾಮದಲ್ಲಿರುವ ಸರ್ಕಾರಿ ಶಾಲೆಯಲ್ಲಿ ಭಾನುವಾರ ಮಧ್ಯಾಹ್ನ ಒಂದು ಗಂಟೆಯಿಂದ ಪರೀಕ್ಷೆ ಬರೆಯಬೇಕಿದೆ!

donkey issued hall ticket

ಕತ್ತೆಗೆ ನೀರುವ ಪ್ರವೇಶಪತ್ರದ ಚಿತ್ರ ಟ್ವಿಟರ್ ಮತ್ತು ಫೇಸ್‌ಬುಕ್‌ಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಕತ್ತೆಯ ಹೆಸರಿನ ಜತೆ ಅದರ ಫೋಟೊಗ್ರಾಫ್ ಕೂಡ ಬಳಸಲಾಗಿದೆ.

ಈ ಸಂಬಂಧ ಕೆಲವರು ಮಂಡಳಿಗೆ ಕರೆ ಮಾಡಿದರೂ ಅವರಿಂದ ಸೂಕ್ತ ಪ್ರತಿಕ್ರಿಯೆ ಬರಲಿಲ್ಲ.

ಇದು ಕಿಡಿಗೇಡಿಗಳು ತೀಟೆಗಾಗಿ ಮಾಡಿರುವ ಕೃತ್ಯ ಎಂದು ಸಾಮಾಜಿಕ ಜಾಲತಾಣಗಳ ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ. ಈ ರೀತಿ ಹಾಲ್‌ ಟಿಕೆಟ್ ಸೃಷ್ಟಿಸಿ ಬೇಕೆಂದೇ ಸುದ್ದಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

2015ರಲ್ಲಿ ವೃತ್ತಿಪರ ಪ್ರವೇಶ ಪರೀಕ್ಷಾ ಮಂಡಳಿಯು ಹಸುವೊಂದಕ್ಕೆ ಪರೀಕ್ಷೆ ಬರೆಯಲು ಪ್ರವೇಶಪತ್ರ ನೀಡಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಈ ಘಟನೆ ಕೂಡ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿತ್ತು.

English summary
A hall ticket has apparently been issued to a donkey to appear for a recruitment test in Jammu and Kashmir
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X