ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೊನಾಲ್ಡ್‌ ಟ್ರಂಪ್ ಬಳಿ ಇತ್ತು ಐಶಾರಾಮಿ ಖಾಸಗಿ ತಾಜ್‌ ಮಹಲ್!

|
Google Oneindia Kannada News

ವಾಷಿಂಗ್ಟನ್, ಫೆಬ್ರವರಿ 24: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೊದಲ ಬಾರಿ ಭಾರತಕ್ಕೆ ಬಂದಿದ್ದಾರೆ. ಭಾರತ ಭೇಟಿಯ ಸಂದರ್ಭ ಅವರು ಹಲವು ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ ಅದರಲ್ಲಿ ತಾಜ್ ಮಹಲ್ ಸಹ ಒಂದು. ವಿಶೇಷವೆಂದರೆ ಈ ಹಿಂದೆ ಡೊನಾಲ್ಡ್ ಟ್ರಂಪ್ ಬಳಿ ಅವರದ್ದೇ ಆದ ಖಾಸಗಿ 'ತಾಜ್ ಮಹಲ್' ಇತ್ತು!

ಹೌದು, ಡೊನಾಲ್ಡ್ ಟ್ರಂಪ್ ಬಳಿ 'ತಾಜ್ ಮಹಲ್' ಹೆಸರಿನ ಐಶಾರಾಮಿ ಕೆಸಿನೋ (ಜೂಜು ಕೇಂದ್ರ) ಇತ್ತು. ವಿಶ್ವದಲ್ಲೇ ದೊಡ್ಡ ಮತ್ತು ಐಶಾರಾಮಿ ಜೂಜು ಕೇಂದ್ರ ಇದು ಎಂದು ಟ್ರಂಪ್ ಹೇಳಿಕೊಂಡಿದ್ದರು. ಈ ಕೆಸಿನೋ ದಲ್ಲಿ ರಷ್ಯಾದ ಭಾರಿ ಭೂಗತ ದೊರೆಗಳು ಕಾಲಕ್ಷೇಪ ಮಾಡುತ್ತಿದ್ದರಂತೆ.

ರಾಜಕಾರಣಿಯಾಗಿ ಯಶಸ್ವಿ(?!) ಆಗಿರುವ ಟ್ರಂಪ್ ಅದಕ್ಕೂ ಮೊದಲು ಉದ್ದಿಮೆದಾರರಾಗಿ ಹೆಸರು ಮಾಡಿದವರು. ರಿಯಲ್ ಎಸ್ಟೇಟ್ ದಿಗ್ಗಜ ಡೊನಾಲ್ಡ್ ಟ್ರಂಪ್ ಹಲವು ಉದ್ದಿಮೆಗಳಲ್ಲಿ ಹಣ ತೊಡಗಿಸಿದ್ದಾರೆ. ಅದರಲ್ಲಿ ಕೆಸಿನೋ ಉದ್ದಿಮೆ ಸಹ ಒಂದು.

1990 ರಲ್ಲಿ 'ತಾಜ್ ಮಹಲ್' ಉದ್ಘಾಟಿಸಿದ್ದ ಟ್ರಂಪ್

1990 ರಲ್ಲಿ 'ತಾಜ್ ಮಹಲ್' ಉದ್ಘಾಟಿಸಿದ್ದ ಟ್ರಂಪ್

'ಟ್ರಂಪ್ ರೆಸಾರ್ಟ್ ಆಂಡ್ ಕಸಿನೋ' ಹೆಸರಿನಲ್ಲಿ ಹಲವು ರೆಸಾರ್ಟ್‌ಗಳು ಮತ್ತು ಕೆಸಿನೋ ಗಳನ್ನು ಟ್ರಂಪ್ ಈಗಲೂ ಹೊಂದಿದ್ದಾರೆ. ನ್ಯೂಜೆರ್ಸಿಯ ಅಟ್ಲಾಂಟಾ ಸಿಟಿಯಲ್ಲಿ 1990 ರಲ್ಲಿ ಟ್ರಂಪ್ 'ತಾಜ್ ಮಹಲ್' ಕೆಸಿನೋ ರೆಸಾರ್ಟ್ ಅನ್ನು ಅಧಿಕೃತವಾಗಿ ಉದ್ಘಾಟನೆ ಮಾಡಿದರು. ಇದಕ್ಕೆ ಅವರು 'ವಿಶ್ವದ ಎಂಟನೇ ಅದ್ಭುತ' ಎಂದು ಟ್ಯಾಗ್ ಲೈನ್ ಸಹ ಸೇರಿಸಿದ್ದರು.

ಬೇರೆ ಸಂಸ್ಥೆಯಿಂದ 'ತಾಜ್ ಮಹಲ್' ಖರೀದಿ

ಬೇರೆ ಸಂಸ್ಥೆಯಿಂದ 'ತಾಜ್ ಮಹಲ್' ಖರೀದಿ

ಅರ್ಧ ನಿರ್ಮಾಣಗೊಂಡಿದ್ದ 'ತಾಜ್ ಮಹಲ್' ಅನ್ನು ಟ್ರಂಪ್ ಅವರು ಬೇರೆ ಸಂಸ್ಥೆಯೊಂದರಿಂದ ಖರೀದಿಸಿದ್ದರು. ನಂತರ ಅದರ ವಿನ್ಯಾಸ ಬದಲಿಸಿ ಮರು ಉದ್ಘಾಟನೆ ಮಾಡಿದರು. 'ತಾಜ್ ಮಹಲ್' ಖರೀದಿ ಸಮಯದಲ್ಲಿ ಹಣಕಾಸಿನ ವಿಷಯದಲ್ಲಿ ಕೆಲವು ಸಮಸ್ಯೆಗಳು ಎದುರಾಗಿದ್ದವು, ವಿವಾದಗಳೂ ಟ್ರಂಪ್ ಅನ್ನು ಸುತ್ತಿಕೊಂಡಿತ್ತು.

'ತಾಜ್ ಮಹಲ್' ಭಾರಿ ಲಾಭವನ್ನು ತಂದುಕೊಡಲಿಲ್ಲ

'ತಾಜ್ ಮಹಲ್' ಭಾರಿ ಲಾಭವನ್ನು ತಂದುಕೊಡಲಿಲ್ಲ

ಆದರೆ ಟ್ರಂಪ್ ಅವರ 'ತಾಜ್ ಮಹಲ್' ಕೆಸಿನೋ ಭಾರಿ ಲಾಭವನ್ನು ಟ್ರಂಪ್‌ ಗೆ ತಂದುಕೊಡಲಿಲ್ಲ. ಎರಡೆರಡು ಬಾರಿ ದಿವಾಳಿ ಆಯಿತು. ಕೊನೆಗೆ ಟ್ರಂಪ್ ಅವರ ಟ್ರಂಪ್ ಎಂಟರ್ಟೈನ್‌ಮೆಂಟ್ ರೆಸಾರ್ಟ್ ಸಂಸ್ಥೆ ಅಡಿಗೆ 'ತಾಜ್ ಮಹಲ್' ಅನ್ನು ತರಲಾಯಿತು. ಬಹು ವರ್ಷ ಇದೇ ಸಂಸ್ಥೆಯು 'ತಾಜ್ ಮಹಲ್' ಕೆಸಿನೋ ಅನ್ನು ನೆಡೆಸಿತು.

ಅಮೆರಿಕ ಅಧ್ಯಕ್ಷರಾದ ವರ್ಷ 'ತಾಜ್ ಮಹಲ್' ಮಾರಾಟ

ಅಮೆರಿಕ ಅಧ್ಯಕ್ಷರಾದ ವರ್ಷ 'ತಾಜ್ ಮಹಲ್' ಮಾರಾಟ

ಕೊನೆಗೆ 2017 ರಲ್ಲಿ ಟ್ರಂಪ್ ಅವರು ಇದನ್ನು ಮಾರಿದರು. ಇದೇ ವರ್ಷವೇ ಅಮೆರಿಕದ ಅಧ್ಯಕ್ಷರಾಗಿ ಟ್ರಂಪ್ ಅಧಿಕಾರವಹಿಸಿಕೊಂಡರು. ಟ್ರಂಪ್ ತಮಗೆ ಅಂಟಿದ್ದ ಕೆಲವು 'ಉದ್ದಿಮೆ ಕಳಂಕ'ಗಳನ್ನು ಕಳೆದುಕೊಳ್ಳಲೆಂದು ಕೆಸಿನೋ ಮಾರಿದರು ಎನ್ನಲಾಗಿತ್ತು.

ನಿಜವಾದ ತಾಜ್ ಮಹಲ್ ವೀಕ್ಷಿಸಿದ ಟ್ರಂಪ್

ನಿಜವಾದ ತಾಜ್ ಮಹಲ್ ವೀಕ್ಷಿಸಿದ ಟ್ರಂಪ್

ಇದೀಗ ಮೊದಲ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿಜವಾದ ತಾಜ್ ಮಹಲ್ ವೀಕ್ಷಣೆ ಮಾಡಿದ್ದಾರೆ. ಪತ್ನಿ ಮಲಿನಾ ಮಗಳು ಇವಾಂಕಾ ಟ್ರಂಪ್ ಜೊತೆಗೆ ಆಗಮಿಸಿ ಅವರು ತಾಜ್ ಮಹಲ್ ಅನ್ನು ವೀಕ್ಷಿಸಿದ್ದು, ತಾಜ್ ಮಹಲ್ ಮುಂದೆ ಚಿತ್ರವನ್ನೂ ತೆಗೆಸಿಕೊಂಡಿದ್ದಾರೆ.

English summary
America President Donald Trump today visited Taj Mahal, but once he has his own 'Taj Mahal'. He owned a casino named 'Taj Mahal' in 1990 then he sold it in when he set to become America president.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X