• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
LIVE

Donald Trump India Visit Live: ಮೋದಿ-ಟ್ರಂಪ್ ಜಂಟಿ ಸುದ್ದಿಗೋಷ್ಠಿ ಆರಂಭ

|

ಅಹಮದಾಬಾದ್, ಫೆಬ್ರವರಿ 24: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎರಡು ದಿನಗಳ ಭಾರತ ಪ್ರವಾಸ ಕೈಗೊಂಡಿದ್ದಾರೆ. ಅಹಮದಾಬಾದ್, ನವದೆಹಲಿಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದು, ಭಾರತ್ರ ಪ್ರವಾಸದ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ...

   Donald Trump India's visit - LIVE from Ahmedabad

   ಡೊನಾಲ್ಡ್ ಟ್ರಂಪ್ ಫೆಬ್ರವರಿ 24 ಮತ್ತು 25ರಂದು ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. ಅಹಮದಾಬಾದ್‌ಗೆ ಅವರು ಭೇಟಿ ನೀಡಲಿದ್ದು, ವಿಮಾನ ನಿಲ್ದಾಣದಿಂದ ಪ್ರಧಾನಿ ನರೇಂದ್ರ ಮೋದಿ ಜೊತೆ ರೋಡ್ ಶೋ ನಡೆಸಲಿದ್ದಾರೆ. ಸಬರಮತಿ ಆಶ್ರಮಕ್ಕೆ ಭೇಟಿ ನೀಡಲಿದ್ದು, ನಂತರ ಮೊಟೆರಾದ ನೂತನ ಬೃಹತ್ ಕ್ರೀಡಾಂಗಣ ಉದ್ಘಾಟಿಸಿ, ನಮಸ್ತೆ ಟ್ರಂಪ್ ಕಾರ್ಯಕ್ರಮದಲ್ಲಿ ಭಾಷಣ ಮಾಡಲಿದ್ದಾರೆ.

   ನಮಸ್ತೆ ಟ್ರಂಪ್: ಸೋಮವಾರ ಅಮೆರಿಕ ಅಧ್ಯಕ್ಷರ ಕಾರ್ಯಕ್ರಮಗಳ ವೇಳಾಪಟ್ಟಿ

   ಫಾರ್ಚ್ಯೂನ್ ಲ್ಯಾಂಡ್ ಮಾರ್ಕ್ ಹೋಟೆಲ್ ನಲ್ಲಿ ನೆಲೆಸಲಿರುವ ಡೊನಾಲ್ಡ್ ಟ್ರಂಪ್ ಹಾಗೂ ಪರಿವಾರಕ್ಕೆ ಗುಜರಾತಿ ಶೈಲಿ ಊಟ, ತಿಂಡಿ ವ್ಯವಸ್ಥೆ ಕೈಗೊಳ್ಳಲಾಗುತ್ತದೆ. ಇದಕ್ಕಾಗಿ ವಿಶೇಷ ತಿನಿಸುಗಳೊಂದಿಗೆ ಮುಖ್ಯ ಬಾಣಸಿಗ ಸುರೇಶ್ ಖನ್ನ ಸಿದ್ದರಾಗಿದ್ದಾರೆ. ಅಹಮದಾಬಾದ್ ನಗರದ ತುಂಬಾ ಮೋದಿ- ಟ್ರಂಪ್ ಕಟೌಟ್, ಹೋರ್ಡಿಂಗ್, ಬಂಟಿಂಗ್ಸ್ ಎದ್ದು ಕಾಣುತ್ತಿದ್ದು, ಹಬ್ಬದ ವಾತಾವರಣ ಸೃಷ್ಟಿಯಾಗಿದೆ.

   Donald Trump India Visit Live Updates in Kannada

   ಅಹಮದಾಬಾದ್ ವಿಮಾನ ನಿಲ್ದಾಣದ ರಸ್ತೆಯ ಪಕ್ಕದಲ್ಲಿರುವ ಸ್ಲಂಗಳನ್ನು ತೆರವುಗೊಳಿಸಲಾಗಿದೆ. ಗೋಡೆಗಳನ್ನು ಸಿಂಗರಿಸಲಾಗಿದೆ. ಎಲ್ಲೆಡೆ ಅಭೂತಪೂರ್ವ ಭದ್ರತೆ ಒದಗಿಸಲಾಗಿದೆ. ಯುಎಸ್ ಅಧ್ಯಕ್ಷೀಯ ಚುನಾವಣೆಯ ಪ್ರಚಾರದ ಭಾಗವಾಗಿ ಹೌಡಿ ಮೋದಿ ಕಾರ್ಯಕ್ರಮ ಆಯೋಜಿಸಿ ಗೆದ್ದ ಟ್ರಂಪ್ ಗೆ "ನಮಸ್ತೆ ಟ್ರಂಪ್" ಮೂಲಕ ಮೋದಿ ಅವರು ತಮ್ಮ ಬೆಂಬಲ ವ್ಯಕ್ತಪಡಿಸಿ, ಅನಧಿಕೃತವಾಗಿ ಟ್ರಂಪ್ ಪರ ಅಭಿಯಾನ ನಡೆಸಿದ್ದಂತಾಗಿದೆ.

   Newest First Oldest First
   1:42 PM, 25 Feb
   ಮಾನಸಿಕ ಆರೋಗ್ಯ, ಐಓಸಿ ಎಕ್ಸಾನ್ ಮತ್ತು ಚಾರ್ಟ್ ನಡುವೆ ಸಮನ್ವಯತೆ, ವೈದ್ಯಕೀಯ ಉತ್ಪನ್ನಗಳ ಸುರಕ್ಷತೆ ಸೇರಿ ಒಟ್ಟು ಮೂರು ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ.
   1:40 PM, 25 Feb
   ಮೂರು ಬಿಲಿಯನ್ ಡಾಲರ್ ರಕ್ಷಣಾ ಒಪ್ಪಂದಕ್ಕೆ ಭಾರತ-ಅಮೆರಿಕ ಸಹಿ
   1:40 PM, 25 Feb
   ಭಾರತ-ಅಮೆರಿಕ ನಡುವೆ ಕಚ್ಚಾತೈಲ ಒಪ್ಪಂದ ನಡೆದಿದೆ. ಅಪಾಚೆ ಎಂಎಚ್‌-60 ರೋಮಿಯೋ ಹೆಲಿಕಾಪ್ಟರ್ ಖರೀದಿಗೆ ಒಪ್ಪಂದ
   1:38 PM, 25 Feb
   ಭಾರತಕ್ಕೆ ಭೇಟಿ ನೀಡಿದ್ದು ತುಂಬಾ ಖುಷಿಯಾಗಿದೆ. ನನಗೆ ಹಾಗೂ ಮೆಲಾನಿಯಾಗೆ ಭಾರತದ ಆತಿಥ್ಯ ಸಂತಸ ತಂದಿದೆ. ರಕ್ಷಣಾ ವಿಚಾರವಾಗಿ ಮೋದಿ ಜೊತೆಗೆ ಚರ್ಚೆ ನಡೆಸಿದ್ದೇವೆ- ಟ್ರಂಪ್
   1:37 PM, 25 Feb
   ಮುಕ್ತ-ಪಾರದರ್ಶಕ ವ್ಯಾಪಾರಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಡ್ರಗ್ಸ್ ಕಳ್ಳಸಾಗಣೆ ತಡೆಗಟ್ಟುವ ಕುರಿತು ಮಾತುಕತೆ ನಡೆಸಿದ್ದೇವೆ-ಮೋದಿ
   1:36 PM, 25 Feb
   ನಮ್ಮ ಈ ಸಂಬಂಧವನ್ನು ಇನ್ನಷ್ಟು ಬಲಗೊಳಿಸಲು ನಿಇರ್ಧರಿಸಿದ್ದೇವೆ, ಭಯೋತ್ಪಾದನೆ ವಿರುದ್ಧದ ಜಂಟಿ ಹೋರಾಟ ಮುಂದುವರೆಯಲಿದೆ. ವ್ಯಾಪಾರ ಒಪ್ಪಂದದ ಬಗ್ಗೆ ಮಾತುಕತೆ ಮುಂದುವರೆಯಲಿದೆ-ಮೋದಿ
   12:37 PM, 25 Feb
   ಸರ್ವೋದಯ ಶಾಲೆಯ ಮಕ್ಕಳೊಂದಿಗೆ ಮೆಲಾನಿಯಾ ಟ್ರಂಪ್ ಸಂವಾದ ನಡೆಸುತ್ತಿದ್ದಾರೆ.
   12:00 PM, 25 Feb
   ದೆಹಲಿಯ ಸರ್ಕಾರಿ ಶಾಲೆಗೆ ಮೆಲಾನಿಯಾ ಭೇಟಿ , ಮಕ್ಕಳೊಂದಿಗೆ ಸಂವಾದ
   11:44 AM, 25 Feb
   ಹೈದರಾಬಾದ್‌ ಹೌಸ್‌ನಲ್ಲಿ ಪ್ರಧಾನಿ ಮೋದಿ, ಟ್ರಂಪ್ ಮಾತುಕತೆ.
   10:56 AM, 25 Feb
   ರಾಜ್‌ಘಾಟ್‌ನಲ್ಲಿ ಸಂದರ್ಶಕರ ಪುಸ್ತಕದಲ್ಲಿ ಡೊನಾಲ್ಡ್ ಟ್ರಂಪ್ ಸಹಿ ಹಾಕಿ ಬಳಿಕ ಗಾಂಧೀಜಿ ಮೆಮೊರಿಯಲ್ ಮ್ಯೂಸಿಯಂಗೆ ತೆರಳಿ, ನಂತರ ರಾಜ್‌ಘಾಟ್‌ನಲ್ಲಿ ಗಿಡ ನೆಟ್ಟು ಸಂತಸ ಪಟ್ಟರು.
   10:52 AM, 25 Feb
   ರಾಜ್‌ಘಾಟ್‌ನಲ್ಲಿ ಡೊನಾಲ್ಡ್ ಟ್ರಂಪ್ ದಂಪತಿಗೆ ಗಾಂಧಿ ಪ್ರತಿಮೆ ನೀಡಿ ಗೌರವ ಸಲ್ಲಿಸಿದರು.
   10:30 AM, 25 Feb
   ರಾಷ್ಟ್ರಪತಿ ಭವನದಿಂದ ರಾಜ್‌ಘಾಟ್‌ಗೆ ತೆರಳಿದ ಟ್ರಂಪ್ ದಂಪತಿ
   10:10 AM, 25 Feb
   ಅಶ್ವಪಡೆ, ಭಾರತೀಯ ಸೇನೆಯಿಂದ ಟ್ರಂಪ್‌ಗೆ ರಾಷ್ಟ್ರಪತಿ ಭವನದಲ್ಲಿ ಗೌರವ ವಂದನೆ
   10:02 AM, 25 Feb
   ರಾಷ್ಟ್ರಪತಿ ಭವನದಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್‌ಗೆ ರೆಡ್ ಕಾರ್ಪೆಟ್ ಸ್ವಾಗತ, ಕೇಂದ್ರ ಸಚಿವರು, ಇವಾಂಕಾ ಟ್ರಂಪ್ ಈಗಾಗಲೇ ರಾಷ್ಟ್ರಪತಿ ಭವನಕ್ಕೆ ಆಗಮಿಸಿದ್ದಾರೆ.
   9:29 AM, 25 Feb
   ಭಾರತದಲ್ಲಿ ಡೊನಾಲ್ಡ್ ಟ್ರಂಪ್: 2ನೇ ದಿನದ ಕಾರ್ಯಕ್ರಮಗಳ ವೇಳಾಪಟ್ಟಿ
   ಎರಡು ದಿನಗಳ ಭಾರತ ಪ್ರವಾಸಕ್ಕಾಗಿ ಸೋಮವಾರ ಆಗಮಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಗುಜರಾತ್‌ನ ಸಬರಮತಿ ಆಶ್ರಮ, ಮೊಟೆರಾ ಕ್ರೀಡಾಂಗಣ, ಆಗ್ರಾದ ತಾಜ್‌ ಮಹಲ್‌ಗೆ ಭೇಟಿ ನೀಡಿ ನವದೆಹಲಿಯ ಐಷಾರಾಮಿ ಹೋಟೆಲ್ ಐಟಿಸಿ ಮೌರ್ಯದಲ್ಲಿ ವಾಸ್ತವ್ಯ ಹೂಡಿದ್ದರು.
   9:26 AM, 25 Feb
   ಮಧ್ಯಾಹ್ನ 3 ಗಂಟೆಗೆ ಅಮೆರಿಕಾ ರಾಯಭಾರಿ ಕಚೇರಿಯಲ್ಲಿ ಟ್ರಂಪ್ ಮತ್ತು ಅವರ ನಿಯೋಗದಿಂದ ಭಾರತದ ಉದ್ಯಮಿಗಳೊಂದಿಗೆ ದುಂಡು ಮೇಜಿನ ಸಭೆ ನಡೆಯಲಿದೆ. ರಾತ್ರಿ 8 ಗಂಟೆಗೆ ಟ್ರಂಪ್ ಕುಟುಂಬಕ್ಕೆ ರಾಷ್ಟ್ರಪತಿ ಭವನದಲ್ಲಿ ಔತಣಕೂಟ ಏರ್ಪಡಿಸಲಾಗಿದೆ. ರಾತ್ರಿ 10 ಗಂಟೆಗೆ ಟ್ರಂಪ್ ಮತ್ತು ಅವರ ನಿಯೋಗ ಏರ್ ಫೋರ್ಸ್ ಒನ್ ಮೂಲಕ ಅಮೆರಿಕಾಕ್ಕೆ ಪ್ರಯಾಣಿಸಲಿದೆ.
   9:25 AM, 25 Feb
   ಬೆಳಿಗ್ಗೆ 11.30ರ ಸುಮಾರಿಗೆ ಹೈದರಾಬಾದ್ ಹೌಸ್'ಗೆ ತೆರಳಲಿರುವ ಟ್ರಂಪ್ ಅವರ ನಿಯೋಗ, ಅಧಿಕೃತ ಚರ್ಚೆ, ಒಪ್ಪಂದಗಳಿಗೆ ಸಹಿಹಾಕಲಿದ್ದಾರೆ. ಮೋದಿ-ಟ್ರಂಪ್ ನಡುವಿನ ಸಭೆ ಮುಕ್ತಾಯಗೊಂಡ ಬಳಿಕ ಉಭಯ ನಾಯಕರು ಜಂಟಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.
   9:25 AM, 25 Feb
   ಬೆಳಿಗ್ಗೆ 10ಗಂಟೆ ರಾಷ್ಟ್ರಪತಿ ಭವನಕ್ಕೆ ಟ್ರಂಪ್ ಆಗಮಿಸಲಿದ್ದು, ಬೆಳಿಗ್ಗೆ 10.45ರ ಸುಮಾರಿಗೆ ರಾಜಘಾಟ್ ನಲ್ಲಿ ಗಾಂಧಿ ಸಮಾಧಿಗೆ ನಮನ ಸಲ್ಲಿಸಲಿದ್ದಾರೆ.
   9:13 AM, 25 Feb
   ನೌಕಾಪಡೆ ಹೆಲಿಕಾಪ್ಟರ್ ಒಪ್ಪಂದಕ್ಕೆ ಇದು ಸಹಿ ಬೀಳಲಿದೆ. 2.6 ಡಾಲರ್ ಬಿಲಿಯನ್ ಮೊತ್ತದ ಒಪ್ಪಂದ ಇದಾಗಿದೆ.
   6:50 PM, 24 Feb
   ತಾಜ್ ಮಹಲ್ ನೋಡಿದ ನಂತರ ಡೊನಾಲ್ಡ್ ಟ್ರಂಪ್ ಮತ್ತು ಮಲನಿಯಾ ದಂಪತಿ ದೆಹಲಿಗೆ ಆಗಮಿಸಿದ್ದಾರೆ.
   5:33 PM, 24 Feb
   ತಾಜ್‌ಮಹಲ್ ಎದುರು ಟ್ರಂಪ್, ಮೆಲಾನಿಯಾ, ಇವಾಂಕಾ ಆಕೆಯ ಪತಿಯ ಫೋಟೊಶೂಟ್
   4:30 PM, 24 Feb
   ಆಗ್ರಾಕ್ಕೆ ಬಂದಿಳಿದ ಟ್ರಂಪ್ ಕುಟುಂಬ, ತಾಜ್ ಮಹಲ್ ವೀಕ್ಷಣೆ ಬಳಿಕ ದೆಹಲಿ ತೆರಳಲಿದ್ದಾರೆ.
   3:46 PM, 24 Feb
   ಟ್ರಂಪ್ ,ಮಲೆನಿಯಾ, ಇವಾಂಕಾ ಟ್ರಂಪ್ ಇದೀಗ ತಾಜ್ ಮಹಲ್ ವೀಕ್ಷಿಸಲು ಆಗ್ರಾ ಕಡೆಗೆ ಪ್ರಯಾಣ ಬೆಳೆಸಿದ್ದಾರೆ.
   2:35 PM, 24 Feb
   ''ಭಾರತ-ಅಮೆರಿಕ ಸ್ನೇಹ ಹೀಗೆ ಸಾಗಲಿ'' (ಇಂಡಿಯಾ-ಯುಎಸ್ ಫ್ರೆಂಡ್‌ಶಿಪ್; ಲಾಂಗ್ ಲಿವ್‌) ಎಂದು ಮೂರು ಭಾರಿ ಹೇಳಿ ಮೋದಿ ಭಾಷಣ ಮುಗಿಸಿದರು.
   2:35 PM, 24 Feb
   ಭಾರತ ಮತ್ತು ಅಮೆರಿಕ ಸ್ವಾಭಾವಿಕ (ನೈಸರ್ಗಿಕ) ಪಾಲುದಾರರಾಗಿದ್ದೇವೆ. ಟ್ರಂಪ್ ಅಂತಹಾ 'ವಿಲಕ್ಷಣ' ನಾಯಕರು 2020 ದಶಕದ ಆರಂಭದಲ್ಲಿಯೇ ಭಾರತಕ್ಕೆ ಬಂದಿರುವುದು ನಮ್ಮ ಸೌಭಾಗ್ಯ, ಇದು ಭಾರತದ ಮಟ್ಟಿಗೆ ಹಲವು ಅವಕಾಶಗಳನ್ನು ತೆರೆದಿಟ್ಟಿದೆ- ಮೋದಿ
   2:35 PM, 24 Feb
   ಟ್ರಂಪ್ ತಮ್ಮ ಕಠಿಣ ನಾಯಕತ್ವದ ಮೂಲಕ ಇಸ್ಲಾಮಿಕ್ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡುತ್ತಿದ್ದಾರೆ. ಭಯೋತ್ಪಾದನೆ ವಿರುದ್ಧ ಸಮರ ಸಾರಿರುವ ಭಾರತಕ್ಕೆ ಸಹ 'ಹೆಗಲಿಗೆ ಹೆಗಲು' ಕೊಟ್ಟಿದ್ದಾರೆ- ಮೋದಿ
   2:31 PM, 24 Feb
   ಭಾರತದಲ್ಲಿ ಬದಲಾದ ಡಿಜಿಟಲ್ ಎಕಾನಮಿ ಅಮೆರಿಕಕ್ಕೆ ಸಾಕಷ್ಟು ವ್ಯವಹಾರ ಅವಕಾಶ ಕಲ್ಪಿಸಿವೆ. ಭಾರತದ ಪ್ರತಿಭೆ, ಅಮೆರಿಕದ ತಂತ್ರಜ್ಞಾನ ಡಿಜಿಟಲ್ ಎಕಾನಮಿಯಲ್ಲಿ ನಮ್ಮನ್ನು ವಿಶ್ವ ಮಟ್ಟದಲ್ಲಿ ಮುಂಚೂಣಿಯಲ್ಲಿ ನಿಲ್ಲಿಸಿದೆ- ಮೋದಿ
   2:30 PM, 24 Feb
   ಭಾರತದ ಅತಿದೊಡ್ಡ ಟ್ರೇಡಿಂಗ್ ಪಾರ್ಟನರ್ ಅಮೆರಿಕ, ನಮ್ಮ ಸೈನ್ಯವು ಅತಿ ಹೆಚ್ಚು ಜಂಟಿ ತಾಲೀಮು ನಡೆಸಿರುವುದು ಅಮೆರಿಕದ ಸೇನೆಯೊಂದಿಗೆ. ಮಾಹಿತಿ ತಂತ್ರಜ್ಞಾನ, ಅಂತರಿಕ್ಷಯಾನ ಸೇರಿ ಇನ್ನೂ ಎಲ್ಲಾ ಕ್ಷೇತ್ರಗಳಲ್ಲಿ ಭಾರತ-ಅಮೆರಿಕ ಜೊತೆ-ಜೊತೆಯಾಗಿ ಸಾಗುತ್ತಿದೆ- ಮೋದಿ
   2:28 PM, 24 Feb
   ಅಮೆರಿಕದ ಅಧ್ಯಕ್ಷರ ಮುಂದೆ ತಮ್ಮ ಸರ್ಕಾರ ಮಾಡುತ್ತಿರುವ ಮಹತ್ವದ ಕಾರ್ಯಗಳ ಪಟ್ಟಿಯನ್ನು ಮೋದಿ ಭಾಷಣದಲ್ಲಿ ಹೇಳಿದರು.
   2:27 PM, 24 Feb
   ಅಮೆರಿಕದಲ್ಲಿನ ಲಕ್ಷಾಂತರ ಭಾರತೀಯರು ಅಮೆರಿಕದ ಅಭಿವೃದ್ಧಿಗಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ವೈಟ್ ಹೌಸ್‌ನಲ್ಲಿ ದೀಪಾವಳಿ ಆಚರಿಸಿದಾಗ ಅವರು ಇದು ನಮ್ಮ ಮನೆ ಎಂದು ಸಂತೋಶ ಪಡುತ್ತಾರೆ- ಮೋದಿ
   READ MORE

   English summary
   Donald Trump India Visit Live Updates in Kannada :Check out the live updates, news, images and videos
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more