ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ಪ್ರವಾಸ ಮುಗಿಸಿ ಡೊನಾಲ್ಡ್ ಟ್ರಂಪ್ ವಾಪಸ್

|
Google Oneindia Kannada News

ನವದೆಹಲಿ, ಫೆಬ್ರವರಿ 25 : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಪ್ರವಾಸ ಮುಗಿಸಿ ಅಮೆರಿಕಕ್ಕೆ ವಾಪಸ್ ಆದರು. ಎರಡು ದಿನದ ಪ್ರವಾಸಕ್ಕಾಗಿ ಅವರು ಸೋಮವಾರ ಅವರು ಭಾರತಕ್ಕೆ ಆಗಮಿಸಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.

Recommended Video

Donald Trump and Melania Trump left for the United States from New Delhi

ಮಂಗಳವಾರ ರಾತ್ರಿ 10.15ರ ಸುಮಾರಿಗೆ ನವದೆಹಲಿಯ ಪಾಲಂ ಏರ್ ಬೇಸ್‌ನಿಂದ ಡೊನಾಲ್ಡ್ ಟ್ರಂಪ್ ಮತ್ತು ಮೆಲಾನಿಯಾ ಟ್ರಂಪ್ ಅಮೆರಿಕಕ್ಕೆ ವಾಪಸ್ ಆದರು. ಏರ್ ಪೋರ್ಸ್ ಒನ್ ವಿಮಾನ ಹತ್ತಿ ಎಲ್ಲರತ್ತ ಕೈ ಬೀಸಿ ಪ್ರವಾಸ ಅಂತ್ಯಗೊಳಿಸಿದರು.

ಡೊನಾಲ್ಡ್ ಟ್ರಂಪ್ ದಂಪತಿ ಜೊತೆಗಿರುವ ಮಹಿಳೆ ಯಾರು? ಡೊನಾಲ್ಡ್ ಟ್ರಂಪ್ ದಂಪತಿ ಜೊತೆಗಿರುವ ಮಹಿಳೆ ಯಾರು?

ರಾಷ್ಟ್ರಪತಿ ಭವನದಲ್ಲಿ ಡೊನಾಲ್ಡ್ ಟ್ರಂಪ್ ದಂಪತಿಗೆ ಮಂಗಳವಾರ ರಾತ್ರಿ ಔತಣ ಕೂಟ ಆಯೋಜನೆ ಮಾಡಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ, ವಿವಿಧ ಕೇಂದ್ರ ಸಚಿವರು ಸೇರಿದಂತೆ ಹಲವಾಗು ಗಣ್ಯರು ಔತಣಕೂಟದಲ್ಲಿ ಪಾಲ್ಗೊಂಡಿದ್ದರು.

ಮೂರು ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ ಮೋದಿ-ಟ್ರಂಪ್ಮೂರು ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ ಮೋದಿ-ಟ್ರಂಪ್

ಮಂಗಳವಾರ ಡೊನಾಲ್ಡ್ ಟ್ರಂಪ್ ದಂಪತಿ ನವದೆಹಲಿಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಸೋಮವಾರ ಅಹಮದಾಬಾದ್‌ಗೆ ಆಗಮಿಸಿದ್ದ ಅವರು ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದ್ದರು. 'ನಮಸ್ತೆ ಟ್ರಂಪ್' ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಬಳಿಕ ತಾಜ್ ಮಹಲ್ ವೀಕ್ಷಣೆ ಮಾಡಿ, ದೆಹಲಿಯಲ್ಲಿ ವಾಸ್ತವ್ಯ ಹೂಡಿದ್ದರು.

ಭಾರತದಲ್ಲಿ ಒಂದು ದೇವಸ್ಥಾನ, ಅದರಲ್ಲಿ ಡೊನಾಲ್ಡ್ ಟ್ರಂಪ್ ದೇವರು ಭಾರತದಲ್ಲಿ ಒಂದು ದೇವಸ್ಥಾನ, ಅದರಲ್ಲಿ ಡೊನಾಲ್ಡ್ ಟ್ರಂಪ್ ದೇವರು

ರಾಷ್ಟ್ರಪತಿ ಭವನದಲ್ಲಿ ಭವ್ಯ ಸ್ವಾಗತ

ರಾಷ್ಟ್ರಪತಿ ಭವನದಲ್ಲಿ ಭವ್ಯ ಸ್ವಾಗತ

ಮಂಗಳವಾರ ಬೆಳಗ್ಗೆ 10 ಗಂಟೆಗೆ ರಾಷ್ಟ್ರಪತಿ ಭವನದಲ್ಲಿ ಡೊನಾಲ್ಡ್ ಟ್ರಂಪ್ ದಂಪತಿಗೆ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ದಂಪತಿ, ಪ್ರಧಾನಿ ನರೇಂದ್ರ ಮೋದಿ ಡೊನಾಲ್ಡ್ ಟ್ರಂಪ್ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು.

ವಿವಿಧ ಕಾರ್ಯಕ್ರಮಗಳು

ವಿವಿಧ ಕಾರ್ಯಕ್ರಮಗಳು

ರಾಷ್ಟ್ರಪತಿ ಭವನದಿಂದ ರಾಜ್‌ಘಾಟ್‌ಗೆ ತೆರಳಿ ಡೊನಾಲ್ಡ್ ಟ್ರಂಪ್ ದಂಪತಿ ನಮನ ಸಲ್ಲಿಸಿದರು. ಅಲ್ಲಿಂದ ಡೊನಾಲ್ಡ್ ಟ್ರಂಪ್ ಹೈದರಾಬಾದ್ ಹೌಸ್‌ಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಬಳಿಕ ಜಂಟಿ ಪತ್ರಿಕಾಗೋಷ್ಠಿ ನಡೆಯಿತು.

ಮೆಲಾನಿಯಾ ಟ್ರಂಪ್

ಮೆಲಾನಿಯಾ ಟ್ರಂಪ್

ಮೆಲಾನಿಯಾ ಟ್ರಂಪ್ ರಾಜ್‌ಘಾಟ್‌ನಿಂದ ನಾನಕ್‌ಪುರದಲ್ಲಿರುವ ಸರ್ವೋದಯ ಶಾಲೆಗೆ ಭೇಟಿ ನೀಡಿದರು. ಮಕ್ಕಳು ಆತ್ಮೀಯವಾಗಿ ಅವರನ್ನು ಬರಮಾಡಿಕೊಂಡರು. ಹ್ಯಾಪಿನೆಸ್ ತರಗತಿಗೆ ಹಾಜರಾದ ಮೆಲಾನಿಯಾ ಮಕ್ಕಳ ಜೊತೆ ಕುಳಿತು ಪಾಠ ಕೇಳಿದರು. ಜನಪದ ಗೀತೆಗೆ ಮಕ್ಕಳ ಜೊತೆ ಹೆಜ್ಜೆ ಹಾಕಿದರು.

ಉದ್ಯಮಿಗಳ ಜೊತೆ ಸಂವಾದ

ಉದ್ಯಮಿಗಳ ಜೊತೆ ಸಂವಾದ

ಮೆಲಾನಿಯಾ ಟ್ರಂಪ್ ಶಾಲೆಗೆ ಭೇಟಿ ನೀಡಿದರೆ ಡೊನಾಲ್ಡ್ ಟ್ರಂಪ್ ಭಾರತೀಯ ಉದ್ಯಮಿಗಳ ಜೊತೆ ಸಂವಾದ ನಡೆಸಿದರು. ಅಮೆರಿಕ ಮತ್ತು ಭಾರತದ ನಡುವಿನ ವ್ಯಾಪಾರ ವಹಿವಾಟಿನ ಕುರಿತು ಉದ್ಯಮಿಗಳ ಜೊತೆ ಸಮಾಲೋಚನೆ ನಡೆಸಿದರು.

ಟ್ರಂಪ್ ಪತ್ರಿಕಾಗೋಷ್ಠಿ

ಟ್ರಂಪ್ ಪತ್ರಿಕಾಗೋಷ್ಠಿ

ಭಾರತ ಪ್ರವಾಸದ ಕುರಿತು ಡೊನಾಲ್ಡ್ ಟ್ರಂಪ್ ಪತ್ರಿಕಾಗೋಷ್ಠಿ ನಡೆಸಿದರು. ಭಾರತ ಮತ್ತು ಅಮೆರಿಕ ನಡುವಿನ ಸಂಬಂಧ, ಕಾಶ್ಮೀರ ವಿಚಾರ ಸೇರಿದಂತೆ ಹಲವು ವಿಚಾರಗಳ ಕುರಿತು ಮಾತನಾಡಿದರು. ಭಾರತ ಭೇಟಿಗೆ ಸಿಕ್ಕ ಪ್ರತಿಕ್ರಿಯೆಗಾಗಿ ಸಂತಸವಾಗಿದೆ ಎಂಮದರು ಹೇಳಿದರು.

English summary
America president Donald Trump and first lady Melania Trump depart from Delhi on February 25, 2020 night following the conclusion of their two-day visit to India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X