ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಹಣಕಾಸು ಸಚಿವರೇ, ಪ್ರಶ್ನೆಗೆ ಹೆದರಬೇಡಿ, ಉತ್ತರ ಕೊಡಿ ಸಾಕು'

|
Google Oneindia Kannada News

Recommended Video

Rahul gandhi asks Nirmala Sitharaman not to be afraid | Congress | BJP | Oneindia kannada

ನವದೆಹಲಿ, ಫೆಬ್ರವರಿ 3: ಕೇಂದ್ರ ಬಜೆಟ್ ಭಾಷಣ ಅತ್ಯಂತ ಸುದೀರ್ಘವಾಗಿತ್ತು. ಆದರೆ ಅದು ಸಂಪೂರ್ಣ ಟೊಳ್ಳು ಮತ್ತು ದೇಶದ ನಿರುದ್ಯೋಗದ ಮಟ್ಟದ ಕುರಿತು ಗಮನ ಹರಿಸುವಲ್ಲಿ ವಿಫಲವಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಸುದೀರ್ಘ ಬಜೆಟ್ ಭಾಷಣವನ್ನು ಟೀಕಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮತ್ತೊಂದು ಟೀಕಾಸ್ತ್ರ ಬಿಟ್ಟಿದ್ದಾರೆ.

'ಹೆದರಬೇಡಿ, ನನ್ನ ಪ್ರಶ್ನೆಗೆ ಉತ್ತರ ಕೊಡಿ ಸಾಕು' ಎನ್ನುವ ಮೂಲಕ ನಿರ್ಮಲಾ ಸೀತಾರಾಮನ್ ವಿರುದ್ಧ ಮತ್ತೊಮ್ಮೆ ಹರಿಹಾಯ್ದಿದ್ದಾರೆ.

ಇತಿಹಾಸದಲ್ಲೇ ಸುದೀರ್ಘ ಬಜೆಟ್ ಮಂಡನೆ, ಇದು ಹೊಗಳಿಕೆಯಲ್ಲ!ಇತಿಹಾಸದಲ್ಲೇ ಸುದೀರ್ಘ ಬಜೆಟ್ ಮಂಡನೆ, ಇದು ಹೊಗಳಿಕೆಯಲ್ಲ!

ದೇಶದ ಯುವಜನತೆಗೆ ಉದ್ಯೋಗ ಒದಗಿಸುವಲ್ಲಿ ಹೀನಾಯ ರೀತಿಯಲ್ಲಿ ವಿಫಲರಾಗಿದ್ದಾರೆ. ಅದರ ಬಗ್ಗೆ ಪ್ರಶ್ನೆ ಕೇಳುತ್ತಿದ್ದೇವೆ. ಅದಕ್ಕೆ ಪ್ರತಿಕ್ರಿಯೆ ನೀಡುವುದು ನಿಮ್ಮ ಜವಾಬ್ದಾರಿ ಎಂದು ರಾಹುಲ್ ಹೇಳಿದ್ದಾರೆ.

Dont Be Afraid of My Questions Rahul Gandhi Tore Into Nirmala Sitharaman

'ಹಣಕಾಸು ಸಚಿವರೇ, ನನ್ನ ಪ್ರಶ್ನೆಗಳಿಗೆ ಹೆದರಬೇಡಿ. ನಾನು ಅದನ್ನು ಯುವಜನರ ಪರವಾಗಿ ಕೇಳುತ್ತಿದ್ದೇನೆ. ಮತ್ತು ಅದಕ್ಕೆ ಪ್ರತಿಕ್ರಿಯಿಸುವುದು ನಿಮ್ಮ ಹೊಣೆಗಾರಿಕೆ. ದೇಶದ ಯುವಜನರಿಗೆ ಉದ್ಯೋಗದ ಅವಶ್ಯಕತೆ ಇದೆ. ನಿಮ್ಮ ಸರ್ಕಾರ ಉದ್ಯೋಗಗಳನ್ನು ಒದಗಿಸುವಲ್ಲಿ ತೀವ್ರವಾಗಿ ವಿಫಲವಾಗಿದೆ' ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.

ಶನಿವಾರ ಬಜೆಟ್ ಮಂಡನೆ ವೇಳೆ ನಿರ್ಮಲಾ ಸೀತಾರಾಮನ್ ಮಾಡಿದ್ದ ಭಾಷಣವನ್ನು ರಾಹುಲ್ ಲೇವಡಿ ಮಾಡಿದ್ದರು.

"ನರೇಂದ್ರ ಮೋದಿ ಬೇರೇಯಲ್ಲ, ನಾಥೂರಾಮ್ ಗೋಡ್ಸೆ ಬೇರೆಯಲ್ಲ"

'ಇದು ಇತಿಹಾಸದಲ್ಲಿ ಅತ್ಯಂತ ಉದ್ದನೆಯ ಬಜೆಟ್ ಆಗಿರಬಹುದು. ಆದರೆ ಅದರಲ್ಲಿ ಏನೂ ಇರಲಿಲ್ಲ. ಅದು ಟೊಳ್ಳಾಗಿತ್ತು. ಮುಂದೇನು ಮಾಡಬೇಕು ಎಂದು ಪ್ರಧಾನಿ ಮೋದಿ ಮತ್ತು ನಿರ್ಮಲಾ ಸೀತಾರಾಮನ್ ಇಬ್ಬರಿಗೂ ಯಾವುದೇ ಸುಳಿವೇ ಇಲ್ಲ ಎನಿಸುತ್ತದೆ. ದೇಶ ಪ್ರಮುಖವಾಗಿ ಎದುರಿಸುತ್ತಿರುವ ಸಮಸ್ಯೆ ನಿರುದ್ಯೋಗ. ನಮ್ಮ ಯುವಜನರು ಉದ್ಯೋಗ ಪಡೆದುಕೊಳ್ಳಲು ನೆರವಾಗುವ ಯಾವುದೇ ಕಾರ್ಯತಂತ್ರದ ಯೋಜನೆ ಕಾಣಿಸಲಿಲ್ಲ' ಎಂದು ರಾಹುಲ್ ಟೀಕಿಸಿದ್ದರು.

English summary
Congress leader Rahul Gandhi again slams Finance Minister Nirmala Sitharaman over unemployment and asked her don't be afraid of his questions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X