• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತೀಯ ಕಮಾಂಡರ್ಸ್ ಗಳಿಗೆ ಸೇನೆಯ ಗೌಪ್ಯ ಸಂದೇಶ

|

ನವದೆಹಲಿ, ಸಪ್ಟೆಂಬರ್.09: ಭಾರತ-ಚೀನಾದ ನಿಗದಿತ ಗಡಿ ರೇಖೆಯಲ್ಲಿ ಯಾವುದೇ ಕಾರಣಕ್ಕೂ ಅತಿಕ್ರಮಣವಾಗದಂತೆ ಕಟ್ಟೆಚ್ಚರ ವಹಿಸಲು ಭಾರತೀಯ ಸೇನಾ ಫೀಲ್ಡ್ ಕಮಾಂಡರ್ಸ್ ಗಳಿಗೆ ಕಟ್ಟುನಿಟ್ಟಿನ ಸಂದೇಶ ರವಾನಿಸಲಾಗಿದೆ.

"ಭಾರತೀಯ ಗಡಿ ಪ್ರದೇಶವನ್ನು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಶಿಸ್ತುಕ್ರಮಗಳನ್ನು ಪಾಲನೆ ಮಾಡುವಂತೆ ಸೂಚಿಸಲಾಗಿದೆ. ನಿಗದಿತ ಪ್ರದೇಶದಲ್ಲಿ ಗಸ್ತು ತಿರುಗುವಾಗ ಅಥವಾ ಯಾವುದೇ ಕಾರ್ಯ ಸಾಧನೆ ಸಂದರ್ಭದಲ್ಲಿ ಯಾವುದೇ ರೀತಿ ಹೆಚ್ಚುವರಿ ಶಕ್ತಿ ಅಥವಾ ಅತಿಯಾದ ಬಲ ಪ್ರದರ್ಶಿಸಬಾರದು" ಎಂದು ಕ್ಷೇತ್ರ ಕಮಾಂಡರ್‌ಗಳಿಗೆ ಸೂಚಿಸಲಾಗಿದೆ.

ಭಾರತೀಯ ಸೇನೆಗೆ ಮೈಕೊರೆಯುವ ಚಳಿಯಲ್ಲಿ ಸಿಯಾಚಿನ್ ಸವಾಲು!

ಚೀನಾದ ಗಡಿ ನಿಯಂತ್ರಣ ರೇಖೆಯ ಬಳಿ ಚೀನಾ ಯೋಧರು ಫೈರಿಂಗ್ ಪ್ರಯೋಗವನ್ನು ನಡೆಸುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಗಡಿಯಲ್ಲಿ ಚೀನಾ ನಡೆಸುತ್ತಿರುವ ಗುಂಡಿನ ದಾಳಿಯ ಪ್ರಯೋಗದ ಸದ್ದು ಭಾರತದ ಗಡಿ ಪ್ರದೇಶಗಳವರೆಗೂ ಕೇಳಿಸುತ್ತಿದೆ. ಲಡಾಖ್ ನಿಂದ ಅರುಣಾಚಲ ಪ್ರದೇಶದ ಗಡಿಯಲ್ಲಿ ಗುಂಡಿನ ಮೊರೆತ ಕೇಳಿ ಬರುತ್ತಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಲಡಾಖ್ ಪೂರ್ವ ಭಾಗದಲ್ಲಿರುವ ಪ್ಯಾಂಗಾಂಗ್ ತ್ಸೋ ಸರೋವರದ ಬಳಿ ಭಾರತ ಕೂಡಾ ಸೇನೆಯ ಪ್ರಮಾಣವನ್ನು ಹೆಚ್ಚಿಸಿತು. ಸಪ್ಟೆಂಬರ್.07ರಂದು ರಾಚಿನ್ ಲಾ- ರೆಂಜಂಗ್ಲಾ-ಮುಖ್ಪರಿ ಮತ್ತು ಮಗರ್ ಪರ್ವತ ಶ್ರೇಣಿಯ ಬಳಿ ಚೀನಾ ಯೋಧರು ಮಧ್ಯಕಾಲೀನ ಶೈಲಿಯ ಯುದ್ಧ ಶಸ್ತ್ರಾಸ್ತ್ರ ಮತ್ತು ದೊಣ್ಣೆಗಳನ್ನು ಹಿಡಿದು ನಿಂತಿದ್ದರು. ಇದರ ಜೊತೆಗೆ ಗಡಿ ಪ್ರದೇಶಗಳಲ್ಲಿ ಚೀನಾದ 50000 ಯೋಧರ ಜೊತೆಗೆ ಭಾರಿ ಪ್ರಮಾಣದ ಟ್ಯಾಂಕರ್ ಗಳು ನಿಂತಿರುವುದು ಕಂಡು ಬಂದಿತ್ತು.

English summary
Don’t Allow Transgressions In Border And Maintain Discipline: Army instructs Ground Commanders.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X