ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಶ್ಚಿಮ ಬಂಗಾಳ, ಆಂಧ್ರ ಹೊರತುಪಡಿಸಿ ದೇಶೀಯ ವಿಮಾನ ಸೇವೆ ಪುನರಾರಂಭ

|
Google Oneindia Kannada News

ನವದೆಹಲಿ, ಮೇ 25: ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ ಹೊರತುಪಡಿಸಿ ಇಂದಿನಿಂದ(ಮೇ 25)ದೇಶಾದ್ಯಂತ ವಿಮಾನ ಸೇವೆ ಪುನರಾರಂಭಗೊಳ್ಳಲಿದೆ.

ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳ ಕ್ರಮವಾಗಿ ಮೇ 26, ಮತ್ತು ಮೇ 28ರವರೆಗೂ ವಿಮಾನ ಸೇವೆಯನ್ನು ಮುಂದೂಡಲು ನಿರ್ಧರಿಸಿವೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಭಾನುವಾರ ನೀಡಿರುವ ಮಾಹಿತಿಯಂತೆ ದೇಶಾದ್ಯಂತ 3867 ಜನರು ಕೋವಿಡ್-19 ಸೋಂಕಿನಿಂದ ಮೃತಪಟ್ಟಿದ್ದು, ಸೋಂಕಿತರ ಸಂಖ್ಯೆ 1.31 ಲಕ್ಷಕ್ಕೆ ಏರಿಕೆ ಆಗಿದೆ.

flight

ದೇಶೀಯ ವಿಮಾನಗಳ ಕಾರ್ಯಾಚರಣೆಯನ್ನು ಪುನರಾರಂಭಿಸುವ ನಿರ್ಧಾರವನ್ನು ಘೋಷಿಸಿದ ಬೆನ್ನಲ್ಲೇ, ಆಗಸ್ಟ್ ಗೂ ಮುಂಚಿತವಾಗಿ ಕೆಲ ಅಂತಾರಾಷ್ಟ್ರೀಯ ಪ್ರಯಾಣಿಕ ವಿಮಾನಗಳ ಹಾರಾಟವನ್ನು ಆರಂಭಿಸಲು ಪ್ರಯತ್ನಿಸಲಾಗುವುದು ಎಂದು ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಶನಿವಾರ ಹೇಳಿಕೆ ನೀಡಿದ್ದರು.

ಮುಂಬೈ ಏರ್‌ಪೋರ್ಟ್‌ನಲ್ಲಿ 25 ವಿಮಾನಗಳ ಹಾರಾಟಕ್ಕೆ ಮಹಾ ಸರ್ಕಾರ ಅನುಮತಿಮುಂಬೈ ಏರ್‌ಪೋರ್ಟ್‌ನಲ್ಲಿ 25 ವಿಮಾನಗಳ ಹಾರಾಟಕ್ಕೆ ಮಹಾ ಸರ್ಕಾರ ಅನುಮತಿ

ಈ ಮೊದಲು ತಮಿಳುನಾಡು, ಮಹಾರಾಷ್ಟ್ರ ಸರ್ಕಾರವು ಕೂಡ ದೇಶೀಯ ವಿಮಾನಗಳ ಹಾರಾಟವನ್ನು ಆರಂಭಿಸದಂತೆ ಮನವಿ ಮಾಡಿದ್ದವು. ಬಳಿಕ ಮಹಾರಾಷ್ಟ್ರ ಸರ್ಕಾರ ಮುಂಬೈನಲ್ಲಿ25 ವಿಮಾನಗಳ ಆಗಮನ ಮತ್ತು ಹಾರಾಟಕ್ಕೆ ಅವಕಾಶಮಾಡಿಕೊಟ್ಟಿತ್ತು.

English summary
States across the country will resume domestic flight services on Monday except Andhra Pradesh and West Bengal, said Union Minister for Civil Aviation Hardeep Singh Puri.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X