ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್ ಡೌನ್ ಮುಗಿಯುವ ಮುನ್ನವೇ ವಿಮಾನಯಾನ ಸೇವೆ ಆರಂಭ?

|
Google Oneindia Kannada News

ನವದೆಹಲಿ, ಮೇ 10: ಮೂರನೇ ಲಾಕ್ ಡೌನ್ ಇದೇ ಮೇ ಹದಿನೇಳರಂದು ಮುಕ್ತಾಯಗೊಳ್ಲಲಿದೆ. ಅದಕ್ಕಿಂತ, ಮುನ್ನವೇ ದೇಶೀಯ ವಿಮಾನಯಾನ ಸೇವೆ ಆರಂಭವಾಗುವ ಎಲ್ಲಾ ಸಾಧ್ಯತೆಗಳಿವೆ.

"ಸೇವೆ ಆರಂಭಿಸಲು ಪೂರಕ ವಾತಾವರಣವಿದ್ದರೆ, ವಿಮಾನಯಾನ ಸಂಚಾರವನ್ನು ಇನ್ನೊಂದು ವಾರದೊಳಗೆ ಆರಂಭಿಸುವ ಬಗ್ಗೆ ಚರ್ಚೆಗಳು ನಡೆದಿವೆ"ಎಂದು ನಾಗರಿಕ ವಿಮಾನಯಾನ ಖಾತೆಯ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.

ಕನ್ನಡಿಗರನ್ನು_ಕರೆತನ್ನಿ...ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ಕನ್ನಡಿಗರನ್ನು_ಕರೆತನ್ನಿ...ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್

"ಎಲ್ಲವೂ ಈಗಿನ ಯೋಜನೆಯ ಪ್ರಕಾರ ನಡೆದರೆ ದೇಶೀಯ ವಿಮಾನ ಕಾರ್ಯಾಚರಣೆಯನ್ನು ಮೇ 15ರ ಮೊದಲು ಪ್ರಾರಂಭಿಸಬಹುದು. ಆದಷ್ಟು ಬೇಗ ವಿಮಾನಯಾನ ಸೇವೆಯನ್ನು ಆರಂಭಿಸುವ ನಿಟ್ಟಿನತ್ತ ನಾವು ಸಾಗುತ್ತಿದ್ದೇವೆ" ಎಂದು ಸಚಿವ ಪುರಿ ಹೇಳಿದ್ದಾರೆ.

Domestic Flight Operations To Resume In India Within A Week: Civil Aviation Ministry Reveals

"ಇದೇ ದಿನದಿಂದ ವಿಮಾನಯಾನ ಆರಂಭಿಸುವುದಾಗಿ ಹೇಳಲು ಸಾಧ್ಯವಿಲ್ಲ. ಯಾಕೆಂದರೆ, ಈ ಸೇವೆ ಆರಂಭಿಸಲು ಆಯಾಯ ರಾಜ್ಯಗಳ ಸಹಕಾರ ನಮಗೆ ಬೇಕಾಗುತ್ತದೆ"ಎಂದು ಸಚಿವರು ಅಭಿಪ್ರಾಯ ಪಟ್ಟಿದ್ದಾರೆ.

"ಒಮ್ಮೆ ಈ ಸೇವೆ ಆರಂಭವಾದ ನಂತರ ಇದು ರಕ್ಷಣಾ ಕಾರ್ಯಾಚರಣೆಯಾಗಿರುವುದಿಲ್ಲ, ಬದಲಿಗೆ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಿರುತ್ತದೆ"ಎಂದು ಸಚಿವರು ಹೇಳಿದ್ದಾರೆ.

ಏರ್ ಇಂಡಿಯಾ ವಿಮಾನದಿಂದ ಬಂದಿಳಿದ ಇಬ್ಬರು ಕೊರೊನಾ ಸೋಂಕಿತರುಏರ್ ಇಂಡಿಯಾ ವಿಮಾನದಿಂದ ಬಂದಿಳಿದ ಇಬ್ಬರು ಕೊರೊನಾ ಸೋಂಕಿತರು

"ಹಸಿರು ವಲಯಗಳಲ್ಲಿ ಸೇವೆ ಆರಂಭಿಸುವುದು ಸುಲಭ. ಆದರೆ ಎಲ್ಲಾ ಮಹಾನಗರಗಳನ್ನು ನೋಡಿದಾಗ, ಅವು ಕೆಂಪು ವಲಯದಲ್ಲಿದೆ. ಆ ನಗರಗಳಿಗೆ ಸೇವೆಯನ್ನು ಸಂಪೂರ್ಣವಾಗಿ ಬಿಡಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು"ಎಂದು ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.

English summary
Domestic Flight Operations To Resume In India Within A Week: Civil Aviation Ministry Reveals.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X