ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಟಿಐ ಪ್ರವೇಶ ಪತ್ರದಲ್ಲಿ ನಾಯಿ ಫೋಟೋ!

|
Google Oneindia Kannada News

ಮಿಂದನಪುರ್, ಜೂನ್. 28: ಪ್ರವೇಶ ಪರೀಕ್ಷೆಗೆ ಹಾಜರಾಗಬೇಕಿದ್ದ ವಿದ್ಯಾರ್ಥಿ ತನ್ನ ಪ್ರವೇಶ ಪತ್ರವನ್ನು ಆನ್‌ ಲೈನ್ ನಿಂದ ಡೌನ್ ಲೋಡ್ ಮಾಡಿಕೊಳ್ಳುತ್ತಾರೆ. ಡೌನ್ ಲೋಡ್ ಮಾಡಿಕೊಂಡವರು ದಿಗಿಲು ಬೀಳುತ್ತಾರೆ ಯಾಕೆ ಅಂದರೆ ಅಲ್ಲಿ ಅವರ ಫೋಟೋದ ಬದಲಾಗಿ ನಾಯಿಯ ಫೋಟೋ ಇರುತ್ತದೆ!

ಹೌದು... ಪಶ್ವಿಮ ಬಂಗಾಳದ ಐಟಿಐ ವಿದ್ಯಾರ್ಥಿ ತನ್ನ ಅಡ್ಮಿಶನ್ ಕಾರ್ಡ್ ಡೌನ್ ಲೋಡ್ ಮಾಡಿಕೊಂಡಾಗ ನಿಜಕ್ಕೂ ಬೆಚ್ಚಿಬಿದ್ದಿದ್ದ. ಐಟಿಐ ಪ್ರವೇಶ ಪತ್ರವನ್ನು ಆನ್ ಲೈನ್ ನಿಂದ ಡೌನ್ ಲೋಡ್ ಮಾಡಿಕೊಂಡಾಗ ಬಂದಿದ್ದು ನಾಯಿಯ ಫೋಟೋ![ಡಿಕೆ ರವಿ ಮುದ್ದಿನ ನಾಯಿ ರೋನಿ ರೋದನಕ್ಕೆ ಸಿಕ್ಕಿಲ್ಲ ಉತ್ತರ]

dog

ಇಂಥದ್ದೊಂದು ಪ್ರಮಾದವನ್ನು ಸೌಮ್ಯದೀಪ್ ಮಹಾತೋ ಶನಿವಾರ (18) ಅನುಭವಿಸಿದ್ದಾರೆ. ದ್ವೀತಿಯ ಪಿಯುಸಿ ಮುಗಿಸಿದ್ದ ಸೌಮ್ಯದೀಪ ನೋಡಲ್ ಆಫಿಸರ್ ಒಬ್ಬರನ್ನು ಸಂಪರ್ಕಿಸಿ ಐಟಿಐ ಪ್ರವೇಶ ಪಡೆಯಲು ಬಯಸಿದ್ದರು.[ಶಂಭು, ಶ್ವಾನದ ಸ್ನೇಹ ಕಥೆ ದುರಂತ ಅಂತ್ಯ!]

ನಂತರ ಸಂಜೆ ನಾಯಿ ಫೋಟೋವನ್ನು ತೆಗೆಯಲಾಯಿತು. ನಂತರ ಸೌಮ್ಯದೀಪ ಈ ಬಾರಿಯ ಪಶ್ಚಿಮ ಬಂಗಾಳದ ವೃತ್ತಿ ತರಬೇತಿಯ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಭಾನುವಾರ ಹಾಜರಾದರು.

English summary
An ITI aspirant was in for a shock when he found a photo of a dog on his admit card. Soumyadip Mahato (18) downloaded the admit card for the ITI entrance exam from the official website to find the dog's photo on it with his address and other details yesterday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X