• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೋದಿ ಸರ್ಕಾರದ ಕೈ ಬೆರಳಿಗೆ ಸಿಗಲಿದೆ ಪ್ರತಿ ಭಾರತೀಯನ ಹೆಜ್ಜೆ ಗುರುತು!

|

ನವದೆಹಲಿ, ಮಾರ್ಚ್ 2: ದೇಶದ 120 ಕೋಟಿಗೂ ಅಧಿಕ ಜನಸಂಖ್ಯೆಯ ಜೀವನದ ಪ್ರತಿ ಅಂಶವನ್ನೂ ಜಾಡು ಹಿಡಿಯುವಂತಹ ಸರ್ವವ್ಯಾಪಿ, ಸ್ವಯಂ ದಾಖಲಿತ, ಪತ್ತೆಹಚ್ಚಬಲ್ಲ ಡೇಟಾಬೇಸ್‌ಅನ್ನು ತಯಾರಿಸುವ ಯೋಜನೆಯಲ್ಲಿ ನರೇಂದ್ರ ಮೋದಿ ಸರ್ಕಾರ ಅಂತಿಮ ಹಂತ ತಲುಪಿದೆ. ಸರ್ಕಾರದ ಕೆಲವು ದಾಖಲೆಗಳನ್ನು ಅಧ್ಯಯನ ಮಾಡಿರುವ 'ಹಫ್ ಪೋಸ್ಟ್ ಇಂಡಿಯಾ' ವೆಬ್‌ಸೈಟ್ ಈ ವರದಿ ಮಾಡಿದೆ.

ಮೋದಿ ಸರ್ಕಾರದ ಆಲೋಚನೆಗಳು ಜಾರಿಯಾದರೆ, ಈ ವ್ಯವಸ್ಥೆಯು ನಗರಗಳ ನಡುವೆ ಓಡಾಡುವ ನಾಗರಿಕರ ಚಲನೆಗಳು, ಅವರ ಉದ್ಯೋಗ ಬದಲಾವಣೆ, ಹೊಸ ಆಸ್ತಿಯ ಖರೀದಿ, ಕುಟುಂಬದಲ್ಲಿ ಹೊಸ ಸದಸ್ಯರ ಜನನ, ಸಾವು ಅಥವಾ ಮದುವೆ, ಸಂಗಾತಿಯ ಮನೆಗೆ ಸ್ಥಳಾಂತರ ಹೊಂದುವುದು ಮುಂತಾದ ಪ್ರತಿ ಚಟುವಟಿಕೆಗಳನ್ನೂ ಟ್ರ್ಯಾಕ್ ಮಾಡಲಿದೆ.

ಪಿಎಫ್‌ ಖಾತೆಯನ್ನು ಆಧಾರ್‌ಗೆ ಲಿಂಕ್ ಮಾಡುವುದು ಹೇಗೆ? ತಿಳಿಯಿರಿ

ಆಧುನಿಕ ಡೇಟಾಬೇಸ್ ವ್ಯವಸ್ಥೆಯಲ್ಲಿ ದತ್ತಾಂಶ ಸಂಗ್ರಹಣೆಗೆ ಹಾಗೂ ಅವುಗಳ ದಾಖಲಾತಿಗೆ ಯಾವುದೇ ತಾಂತ್ರಿಕ ಮಿತಿ ಇಲ್ಲ. 2019ರ ಅಕ್ಟೋಬರ್ 4ರಂದು ನಡೆದ ನೀತಿ ಆಯೋಗದ ಸಭೆಯಲ್ಲಿ ವಿಶೇಷ ಕಾರ್ಯದರ್ಶಿಗಳು ಪ್ರತಿ ಮನೆಯನ್ನೂ ಜಿಯೋ-ಟ್ಯಾಗಿಂಗ್ ಮಾಡುವ ಮತ್ತು ಭುವನ್ (ಇಸ್ರೋ ಅಭಿವೃದ್ಧಿಪಡಿಸಿದ ವೆಬ್ ಆಧಾರಿತ ಜಿಯೋ ಸ್ಪೇಷಿಯಲ್ ಪೋರ್ಟಲ್) ಜತೆ ಸಂಯೋಜಿಸುವ ಪ್ರಸ್ತಾವವನ್ನು ಮುಂದಿರಿಸಿದ್ದರು. ಮುಂದೆ ಓದಿ.

ಜುಲೈ ಅಂತ್ಯಕ್ಕೆ 32.71 ಕೋಟಿ ಪ್ಯಾನ್- ಆಧಾರ್ ಜೋಡಣೆ: ಕೇಂದ್ರ

ಮಾಧ್ಯಮಗಳಿಗೆ ತಪ್ಪು ಮಾಹಿತಿ

ಮಾಧ್ಯಮಗಳಿಗೆ ತಪ್ಪು ಮಾಹಿತಿ

ಪ್ರಸ್ತಾವಿತ ರಾಷ್ಟ್ರೀಯ ಸಾಮಾಜಿಕ ನೋಂದಾವಣೆಯ ಕಾರ್ಯವು ಐದು ವರ್ಷಗಳಿಂದ ನಡೆಯುತ್ತಿದೆ. ಬಡವರ ಪರವಾದ ಸರ್ಕಾರದ ಯೋಜನೆಗಳು ದುರ್ಬಳಕೆಯಾಗದಂತೆ ತಡೆಯಲು, ಅದರ ಪ್ರಯೋಜನ ಮತ್ತು ಸೌಲಭ್ಯಗಳು ಸೂಕ್ತ ಜನರಿಗೆ ಸಿಗುವಂತೆ ಮಾಡಲು 2011ರ ಸಮಾಜೋ-ಆರ್ಥಿಕ ಜಾತಿ ಗಣತಿಯನ್ನು (ಎಸ್‌ಇಸಿಸಿ) ಉನ್ನತೀಕರಿಸುವ ನಿರಂತರ ಪ್ರಕ್ರಿಯೆಯ ಭಾಗ ಎಂದೇ ಮಾಧ್ಯಮಗಳ ಮುಂದೆ ವರ್ಣಿಸಲಾಗಿದೆ.

ಎಲ್ಲ ಮಾಹಿತಿಗಳೂ ಬೆರಳತುದಿಯಲ್ಲಿ

ಎಲ್ಲ ಮಾಹಿತಿಗಳೂ ಬೆರಳತುದಿಯಲ್ಲಿ

ಆದರೆ ದತ್ತಾಂಶ ಹಾಗೂ ಅಂತರ್ಜಾಲ ಆಡಳಿತ ಸಂಶೋಧಕ ಶ್ರೀನಿವಾಸ್ ಕೊಡಳಿ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದುಕೊಂಡಿರುವ ದಾಖಲೆಗಳು ಇದಕ್ಕೆ ತದ್ವಿರುದ್ಧ ಸಂಗತಿ ತೆರೆದಿಡುತ್ತವೆ. ಎಸ್‌ಇಸಿಸಿ ಸೃಷ್ಟಿಯ ನೆಪದಲ್ಲಿ, ಆಧಾರ್ ಮೂಲದಿಂದ ಪಡೆದ ದತ್ತಾಂಶ ಅಥವಾ ಪ್ರತಿಯೊಬ್ಬ ನಾಗರಿಕನ ಧರ್ಮ, ಜಾತಿ, ಆದಾಯ, ಆಸ್ತಿ, ಶಿಕ್ಷಣ, ವೈವಾಹಿಕ ಸ್ಥಿತಿ, ಉದ್ಯೋಗ, ಅಂಗವೈಕಲ್ಯ ಮತ್ತು ವಂಶಾವಳಿ ದತ್ತಾಂಶಗಳನ್ನು ಸಂಯೋಜಿಸುವ ವಿವರಗಳನ್ನು ಒಂದೇ ಕಿಟಕಿಯೊಳಗೆ ಸೇರಿಸಲಾಗುತ್ತಿದೆ.

ಪ್ರತಿ ಪ್ರಜೆಯ ವಿವರ

ಪ್ರತಿ ಪ್ರಜೆಯ ವಿವರ

ರಾಷ್ಟ್ರೀಯ ಸಾಮಾಜಿಕ ನೋಂದಣಿಯು ಸರ್ಕಾರದ ಬೆಂಬಲವನ್ನು ಅವಲಂಬಿಸಿರುವ ಬಡತನ ರೇಖೆಗಿಂತ ಕಡಿಮೆ ಇರುವ ಕುಟುಂಬಗಳ ದತ್ತಾಂಶಗಳನ್ನು ಪಡೆಯುವುದು ಮಾತ್ರವಲ್ಲ, ಭಾರತದ ಪ್ರತಿ ನಾಗರಿಕನ ಕುರಿತಾದ ಸಣ್ಣ ವಿವರಗಳನ್ನೂ ತನ್ನಲ್ಲಿ ಇರಿಸಿಕೊಳ್ಳುತ್ತಿದೆ.

ಜನಸಂಖ್ಯೆ ಗಣತಿ ಪ್ರಕ್ರಿಯೆಯ ಭಾರತೀಯ ಜನಗಣತಿ ಕಾಯ್ದೆ 1948, ದಾಖಲು ಮಾಡಿಕೊಂಡ ಜನರ ಮಾಹಿತಿಗಳ ಗೋಪ್ಯತೆ ಕಾಪಾಡುವುದನ್ನು ಕಡ್ಡಾಯಗೊಳಿಸಿದೆ. ಆದರೆ ಎಸ್‌ಇಸಿಸಿಯಲ್ಲಿ ಅಂತಹ ಸುರಕ್ಷತೆಗಳಿಲ್ಲ.

ತಜ್ಞರ ಸಮಿತಿ ಯೋಜನೆ

ತಜ್ಞರ ಸಮಿತಿ ಯೋಜನೆ

2021ರಲ್ಲಿ ಸಾಮಾಜಿಕ ನೋಂದಣಿ ಯೋಜನೆಯನ್ನು ಜಾರಿಗೊಳಿಸುವ ಸಲುವಾಗಿ ಪರಿಣತರ ಸಮಿತಿಯನ್ನು ರಚಿಸಲಾಗಿದೆ. ಈ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಮುನ್ನ ಪರೀಕ್ಷಾರ್ಥ ಪ್ರಯೋಗ ನಡೆಸುವ ಅಂತಿಮ ಹಂತದ ಯೋಜನೆಗಳನ್ನು ಸಮಿತಿ ರೂಪಿಸುತ್ತಿದೆ.

ಆಧಾರ್ ಕಾಯ್ದೆಗೆ ತಿದ್ದುಪಡಿ

ಆಧಾರ್ ಕಾಯ್ದೆಗೆ ತಿದ್ದುಪಡಿ

ಈ ತಜ್ಞರ ಸಮಿತಿಯು ಆಧಾರ್ ಕಾಯ್ದೆಗೆ ತಿದ್ದುಪಡಿಗಳನ್ನು ತರುವಂತೆ ಸರ್ಕಾರದ ಮುಂದೆ ಪ್ರಸ್ತಾಪ ಇರಿಸಿದೆ. ವೈಯಕ್ತಿಕ ಖಾಸಗಿತನವು ಪ್ರತಿಯೊಬ್ಬರ ಮೂಲಭೂತ ಹಕ್ಕು ಎಂದು 2018ರಲ್ಲಿ ಪುನರುಚ್ಚರಿಸಿದ್ದ ಸುಪ್ರೀಂಕೋರ್ಟ್, ಆಧಾರ್ ವಿವರಗಳ ಬಳಕೆಯನ್ನು ನಿರ್ಬಂಧಿಸಿತ್ತು. ಈ ಆದೇಶಕ್ಕೆ ಚ್ಯುತಿ ಬಾರದಂತೆ ಮಾಹಿತಿಗಳನ್ನು ಸಂಗ್ರಹಿಸಲು ಅನುವು ಮಾಡಿಕೊಡುವಂತೆ ಸರ್ಕಾರಕ್ಕೆ ಕೋರಲಾಗಿದೆ.

ಆಧಾರ್ ಸುರಕ್ಷತೆಯೇ ರದ್ದು

ಆಧಾರ್ ಸುರಕ್ಷತೆಯೇ ರದ್ದು

ವಿಶಿಷ್ಟ ಗುರುತಿನ ಪ್ರಾಧಿಕಾರವು (ಯುಐಡಿಎಐ) ಆಧಾರ್ ನಿಯಮಗಳನ್ನು ತಿದ್ದುಪಡಿ ಮಾಡಲು ನಿರ್ಧರಿಸಿದೆ. ಇದು ಜಾರಿಯಾದರೆ 2018ರ ಸುಪ್ರೀಂಕೋರ್ಟ್ ತೀರ್ಪು ಅರ್ಥಕಳೆದುಕೊಳ್ಳುತ್ತದೆ. ಏಕೆಂದರೆ ಈ ತಿದ್ದುಪಡಿಯು ಮೂಲ ಆಧಾರ್ ಕಾನೂನಿನ ಭಾಗವಾಗಿರುವ ಖಾಸಗಿತನದ ಸುರಕ್ಷತೆಯನ್ನೇ ತೆಗೆದುಹಾಕಲಿದೆ. ಮುಂದಿನ ದಿನಗಳಲ್ಲಿ ಸರ್ಕಾರದ ಬೆರಳಿನ ತುದಿಯಲ್ಲಿ ದೇಶದ ಪ್ರತಿಯೊಬ್ಬ ನಾಗರಿಕನ ಇಡೀ ಜೀವನದ ಮಾಹಿತಿಯೇ ಇರಲಿದೆ ಎಂದು ಹಫ್ ಪೋಸ್ಟ್ ವರದಿ ತಿಳಿಸಿದೆ.

English summary
Documents Show PM Modi Govt Building 360 Degree Database To Track Every Indian via national social registry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X