ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಾತಂತ್ರ್ಯ ದಿನ ಸಂಭ್ರಮದಲ್ಲಿ ಗಾಂಧೀಜಿ ಗೈರಾಗಿದ್ದರು, ಯಾಕೆ ಗೊತ್ತಾ?

|
Google Oneindia Kannada News

Recommended Video

ಸ್ವಾತಂತ್ರ್ಯ ದಿನ ಸಂಭ್ರಮದಲ್ಲಿ ಗೈರಾಗಿದ್ದ ಗಾಂಧೀಜಿ...! | Oneindia Kannada

ಭಾರತದ ಸ್ವಾತಂತ್ರ್ಯ ಸಂಗ್ರಾಮ ಎಂದೊಡನೆ ನೆನಪಾಗುವ ಹೆಸರುಗಳಲ್ಲಿ ಮಹಾತ್ಮಾ ಗಾಂಧೀಜಿ ಅವರ ಹೆಸರು ಅಗ್ರ ಪಂಕ್ತಿಯಲ್ಲಿ ಕಾಣಿಸುತ್ತದೆ. 'ನನ್ನ ಬದುಕೇ ನನ್ನ ಸಂದೇಶ' ಎಂದು ತಮ್ಮ ಬದುಕನ್ನೇ ಪ್ರಯೋಗಕ್ಕೊಡ್ಡಿಕೊಂಡ ಮಹಾನ್ ನಾಯಕ ಮಹಾತ್ಮಾ ಗಾಂಧೀಜಿಯವರು ಆಗಸ್ಟ್ 15, 1947 ರಂದು ಸ್ವಾತಂತ್ರ್ಯ ದಿನದ ಸಂಭ್ರಮದಲ್ಲಿ ಭಾಗವಹಿಸಿಯೇ ಇರಲಿಲ್ಲವಂತೆ!

72ನೇ ಸ್ವಾತಂತ್ರ್ಯ ದಿನಾಚರಣೆ 2018

ಇತ್ತ ಇಡೀ ದೇಶವೂ ಸ್ವಾತಂತ್ರ್ಯ ಸಿಕ್ಕ ಸಂಭ್ರಮದಲ್ಲಿದ್ದರೆ ಮಹಾತ್ಮಾ ಗಾಂಧೀಜಿಯವರು ಕೋಲ್ಕತ್ತಾದಲ್ಲಿ ಉಪವಾಸ ಆಚರಿಸುತ್ತಿದ್ದರಂತೆ! ದೇಶ ವಿಭಜನೆಯ ಕಾವು ಹೆಚ್ಚಿದ್ದರಿಂದ ಪಶ್ಚಿಮ ಬಂಗಾಳ(ಈಗಿನ ಬಾಂಗ್ಲಾದೇಶವೂ ಸೇರಿ)ದಲ್ಲಿ ಮುಸ್ಲಿಂ ಮತ್ತು ಹಿಂದುಗಳ ನಡುವೆ ಕೋಮು ಗಲಭೆ ಎದ್ದಿತ್ತು. ಹಿಂಸೆಯನ್ನು ನಿಯಂತ್ರಿಸುವ, ಶಾಂತಿಯ ಸಂದೇಶ ನೀಡುವ ಸಲುವಾಗಿ ಗಾಂಧೀಜಿ ಪಶ್ಚಿಮ ಬಂಗಾಳದಲ್ಲಿ ಮುಸ್ಲಿಮರೇ ಬಹುಸಂಖ್ಯೆಯಲ್ಲಿದ್ದ ಹೈದೇರಿ ಮಂಜಿಲ್ ಎಂಬಲ್ಲಿ ಕೆಲ ದಿನ ತಂಗಿದ್ದರು.

ಕೆಂಪುಕೋಟೆಯ ಮೋದಿ ಭಾಷಣ ಗೂಗಲ್ ಹೋಂಪೇಜ್ ನಲ್ಲಿ ಲೈವ್!ಕೆಂಪುಕೋಟೆಯ ಮೋದಿ ಭಾಷಣ ಗೂಗಲ್ ಹೋಂಪೇಜ್ ನಲ್ಲಿ ಲೈವ್!

ಈ ಸಂದರ್ಭದಲ್ಲಿ, ನೀವು ಸ್ವಾತಂತ್ರ್ಯ ದಿನದ ಸಂಭ್ರಮದಲ್ಲಿ ಭಾಗವಹಿಸುತ್ತಿಲ್ಲವಲ್ಲ ಏಕೆ ಎಂದು ಪ್ರಶ್ನಿಸಿದ ಜನರ ಬಳಿ ಗಾಂಧಿ ನೀಡುತ್ತಿದ್ದ ಉತ್ತರ ಒಂದೇ. 'ಇದು ಸಂಭ್ರಮ ಎಂದು ನನಗನ್ನಿಸುತ್ತಿಲ್ಲ. ಭವಿಷ್ಯದಲ್ಲಿ ದೇಶ ಎದುರಿಸಬಹುದಾದ ಸಂಘರ್ಷಗಳನ್ನು ನೆನೆದರೆ ಸಂಭ್ರಮಿಸುವ ಮನಸ್ಸಾಗುವುದಿಲ್ಲ. ಕೋಮು ಗಲಭೆಗೆ ಸಾಕ್ಷಿಯಾಗಿ ನಾನಿಲ್ಲಿದ್ದೇನೆ. ಈ ದಿನ ಪೂರ್ತಿ ನಾನು ಉಪವಾಸವಿದ್ದು, ಚರಕದಲ್ಲಿ ನೂಲು ನೇಯ್ದು ಸ್ವಾತಂತ್ರ್ಯ ದಿನವನ್ನು ಆಚರಿಸುತ್ತೇನೆ. ಈ ಮಹಾನ್ ಘಳಿಗೆಯನ್ನು ನಾನು ಸಂಭ್ರಮಿಸುವ ರೀತಿ ಇದು' ಎಂದು ಅವರು ಹೇಳಿದ್ದರು.

Do you know why Mahatma Gandhi was not attended Independence day celebration?

"ಇಂದಿನ ಸ್ವಾತಂತ್ರ್ಯದ ದಿನವೇ ಭವಿಷ್ಯದಲ್ಲಿ ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಸಂಘರ್ಷದ ಬೀಜವನ್ನೂ ಬಿತ್ತುತ್ತಿದೆ. ಹೀಗಿರುವಾಗ ಇದನ್ನು ಹಬ್ಬ ಎಂದು ಕರೆಯುವುದು ಹೇಗೆ? ಸಂಭ್ರಮಿಸುವುದು ಹೇಗೆ" ಎಂದು ತಮ್ಮ ಆಪ್ತರ ಬಳಿ ಗಾಂಧೀಜಿ ಅಳಲು ತೋಡಿಕೊಂಡಿದ್ದರು.

English summary
The great freedom fighter of India, Mahatma Gandhiji was not attended Indian Independence day celebration. He was fasting in West Bengal's Kolkatta for opposing Communali riots in Kolkatta between Hindu and Muslims.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X