ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

just in: ಡೊನಾಲ್ಡ್ ಟ್ರಂಪ್ ಭಾರತ ಭೇಟಿಗೆ ಖರ್ಚಾಗಿದ್ದು ಎಷ್ಟು ಗೊತ್ತೆ!?

|
Google Oneindia Kannada News

ನವದೆಹಲಿ, ಆಗಸ್ಟ್ 18: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 2020 ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು. ಅವರ 36 ಗಂಟೆಗಳ ಭೇಟಿಗೆ ಖರ್ಚಾಗಿದ್ದು ಎಷ್ಟು ಎಂಬುದನ್ನು ಆರ್‌ಟಿಐ ಬಹಿರಂಗಪಡಿಸಿದೆ.

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ 36 ಗಂಟೆಗಳ ಭೇಟಿಗೆ ವಸತಿ, ಊಟ, ಭದ್ರತೆ ಇತ್ಯಾದಿಗಳಿಗೆ ಕೇಂದ್ರ ಸರಕಾರವು ಅಂದಾಜು 38 ಲಕ್ಷ ರೂಪಾಯಿ ಖರ್ಚು ಮಾಡಿದೆ ಎಂದು ವಿದೇಶಾಂಗ ಸಚಿವಾಲಯ ಕೇಂದ್ರ ಮಾಹಿತಿ ಆಯೋಗಕ್ಕೆ ತಿಳಿಸಿದೆ.

ಬಿಜೆಪಿ ಸಂಸದೀಯ ಮಂಡಳಿ ಸದಸ್ಯರು, ಬಿಎಸ್‌ವೈಗೆ 5ನೇ ಸ್ಥಾನ!ಬಿಜೆಪಿ ಸಂಸದೀಯ ಮಂಡಳಿ ಸದಸ್ಯರು, ಬಿಎಸ್‌ವೈಗೆ 5ನೇ ಸ್ಥಾನ!

ಭಾರತಕ್ಕೆ ಮೊದಲ ಬಾರಿಗೆ ಬಂದಿದ್ದ, ಡೊನಾಲ್ಡ್ ಟ್ರಂಪ್ ಅವರ ಪತ್ನಿ ಮೆಲಾನಿಯಾ, ಮಗಳು ಇವಾಂಕಾ, ಅಳಿಯ ಜೇರೆಡ್ ಮತ್ತು ಹಲವಾರು ಉನ್ನತ ಅಧಿಕಾರಿಗಳೊಂದಿಗೆ ಫೆಬ್ರವರಿ 24-25, 2020 ರಂದು ಅಹಮದಾಬಾದ್, ಆಗ್ರಾ ಮತ್ತು ನವದೆಹಲಿಗೆ ಭೇಟಿ ನೀಡಿದ್ದರು.

Do you know how much central government spent on Donald Trumps visit to India !?

ಫೆಬ್ರವರಿ 24 ರಂದು ಅಹಮದಾಬಾದ್‌ನಲ್ಲಿ ಮೂರು ಗಂಟೆಗಳ ಕಾಲ ಕಳೆದ ಅವರು 22 ಕಿಮೀ ಉದ್ದದ ರೋಡ್‌ಶೋನಲ್ಲಿ ಭಾಗವಹಿಸಿದ್ದರು, ಸಬರಮತಿ ಆಶ್ರಮದಲ್ಲಿ ಮಹಾತ್ಮ ಗಾಂಧಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಹೊಸದಾಗಿ ನಿರ್ಮಿಸಲಾಗಿದ್ದ ಮೊಟೆರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ "ನಮಸ್ತೆ ಟ್ರಂಪ್" ಎಂಬ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ್ದರು. ಅದರ ಬಳಿಕ ತಾಜ್ ಮಹಲ್‌ಗೆ ಭೇಟಿ ನೀಡಿದ್ದರು.

ಫೆಬ್ರವರಿ 25 ರಂದು ರಾಷ್ಟ್ರ ರಾಜಧಾನಿಗೆ ಭೇಟಿ ನೀಡಿದ ಅವರು ಪ್ರಧಾನಿ ಮೋದಿಯವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.

Do you know how much central government spent on Donald Trumps visit to India !?

ಈ 36 ಗಂಟೆಗಳ ಭೇಟಿಗೆ ಸರಕಾರ ಎಷ್ಟು ಹಣ ಖರ್ಚು ಮಾಡಿದೆ ಎಂದು ಮಿಶಾಲ್ ಭಥೇನಾ ಎಂಬುವವರು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಮಾಹಿತಿ ಕೋರಿದ್ದರು. ಆದರೆ, ಅಕ್ಟೋಬರ್ 24, 2020 ರಲ್ಲಿ ಅರ್ಜಿ ಸಲ್ಲಿಸಿದ್ದರು ಯಾವುದೇ ಉತ್ತರ ದೊರಕಿರಲಿಲ್ಲ.

ಬಳಿಕ ಮಿಶಾಲ್ ಭಥೇನಾ ನಂತರ ಕೇಂದ್ರ ಮಾಹಿತಿ ಆಯೋಗಕ್ಕೆ ಮೇಲ್ಮನವಿಯನ್ನು ಸಲ್ಲಿಸಿದ್ದರು. "ಪ್ರತಿಕ್ರಿಯೆಯನ್ನು ಒದಗಿಸುವಲ್ಲಿನ ವಿಳಂಬಕ್ಕಾಗಿ ಕೊರೊನಾ ಅನ್ನು ಉಲ್ಲೇಖಿಸಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಆಗಸ್ಟ್ 4, 2022 ರಂದು ಕೇಂದ್ರ ಮಾಹಿತಿ ಆಯೋಗಕ್ಕೆ ಮಾಹಿತಿ ಸಲ್ಲಿಸಿದೆ.

ಇದರಲ್ಲಿ " ಭಾರತಕ್ಕೆ ಯುಎಸ್ ಅಧ್ಯಕ್ಷ ಡೊನಾಲ್ಡ್ ಜೆ ಟ್ರಂಪ್ ಅವರ ರಾಜ್ಯ ಭೇಟಿಗೆ ಸಂಬಂಧಿಸಿದಂತೆ ವಸತಿ, ಊಟ, ಭದ್ರತೆ ಮೇಲೆ ಭಾರತ ಸರ್ಕಾರವು ಫೆಬ್ರವರಿ 24-25 ರ ವೆಚ್ಚವು ಸರಿಸುಮಾರು 38,00,000 ಎಂದು ಅಂದಾಜಿಸಲಾಗಿದೆ" ಎಂದಿದೆ.

ಇನ್ನು, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಭಾರತಕ್ಕೆ ಭೇಟಿಯಾದ ಸಂದರ್ಭದಲ್ಲಿ ಎಲ್ಲವೂ ಸ್ವಚ್ಛ, ಸುಂದರವಾಗಿ ಕಾಣವಂತೆ ಮಾಡಬೇಕು ಎಂಬ ಉದ್ದೇಶದಿಂದ ಅಹಮದಾಬಾದ್ ನಗರಸಭೆ ಸ್ಮಂ ಕಾಣದಂತೆ ಗೋಡೆಯನ್ನು ನಿರ್ಮಾಣ ಮಾಡಿತ್ತು. ಇದು ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು.

English summary
Do you know how much central government spent on Donald Trump's visit to India!?. Centre spent approximately ₹ 38 lakh on the 36-hour. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X