ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸಿಡ್ ಸುರಿದ ಅತ್ತೆ, ಹೆರಿಗೆ ಮಾಡಿಸಲ್ಲ ಅಂದ ಆಸ್ಪತ್ರೆ

|
Google Oneindia Kannada News

ನೆಲ್ಲೂರು, ಸೆಪ್ಟೆಂಬರ್ 2: ನೆಲ್ಲೂರಿನ ಆ ಹೆಣ್ಣುಮಗಳ ಹೆಸರು ಗಿರಿಜಾ, ವಯಸ್ಸು 27. ಗರ್ಭಿಣಿಯಾಗಿದ್ದ ಆಕೆಗೆ ಯಾವ ಮಗು ಹುಟ್ಟುತ್ತದೆ ಅಂತ ತಿಳಿದುಕೊಳ್ಳೋಕೆ ಒಬ್ಬ ಜ್ಯೋತಿಷಿಯ ಹತ್ತಿರ ಹೋಗಿದ್ದಾರೆ. ಗಿರಿಜಾಗೆ ಹೆಣ್ಣುಮಗು ಆಗುತ್ತೆ ಎಂದು ಆ ಜ್ಯೋತಿಷಿ ಭವಿಷ್ಯ ನುಡಿದಿದ್ದಾರೆ. ಇದೇ ಕಾರಣಕ್ಕೆ ಆಕೆಯ ಅತ್ತೆ, ನಾದಿನಿ ಸೇರಿ ಮನೆಯ ಸೊಸೆ ಹೊಟ್ಟೆಯ ಮೇಲೆ ಆಸಿಡ್ ಸುರಿದಿದ್ದಾರೆ. ಗಿರಿಜಾಳ ದೇಹ ಶೇ 30ರಷ್ಟು ಸುಟ್ಟುಹೋಗಿದೆ.

ಆಕೆಯ ಅತ್ತೆ, ನಾದಿನಿಯ ಸಿಟ್ಟೇನು ಅಂದರೆ, ಗಿರಿಜಾಗೆ ಅದಾಗಲೇ ಒಂದು ಹೆಣ್ಣುಮಗುವಿತ್ತು. ಅದೊಂದೇ ಕಾರಣಕ್ಕೆ ಹೆಣ್ಣು ಮಗು ಹುಟ್ಟುತ್ತದೆ ಎಂಬ ಜ್ಯೋತಿಷಿಯ ಭವಿಷ್ಯ ನಂಬಿ ಇಂಥ ಕೃತ್ಯ ಎಸಗಿದ್ದಾರೆ. 'ನಾವು ರಾಸಾಯನಿಕದ ವರದಿ ಬರಲಿ ಅಂತ ಕಾಯ್ತಿದ್ದೀವಿ. ಸೀಮೆ ಎಣ್ಣೆಗೆ ರಾಸಾಯನಿಕ ಬಳಸಿ ಗಿರಿಜಾಳ ಮೇಲೆ ಸುರಿದಿದ್ದಾರೆ. ಆಕೆಯ ಅತ್ತೆಗಾಗಿ ಶೋಧ ನಡೆಸ್ತಿದೀವಿ' ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.[ವಾಹನಕ್ಕೆ ಹಣ ಹೊಂದಿಸಲಾಗದೆ ಹೆಂಡತಿ ಶವ ಹೊತ್ತು 10 ಕಿ.ಮೀ. ನಡೆದ]

ಗಿರಿಜಾಳ ಗಂಡ ಹಾಗೂ ಮಾವನನ್ನ ಬಂಧಿಸಲಾಗಿದೆ. ನಾದಿನಿ ವಿರುದ್ಧ ಕೊಲೆ ಯತ್ನದ ಕೇಸ್ ಹಾಕಲಾಗಿದೆ.

acid victim

ಇಲ್ಲಿ ಇನ್ನೊಂದು ಪ್ರಕರಣವಿದೆ. ಉತ್ತರಪ್ರದೇಶದಲ್ಲಿ ನಡೆದಿರುವುದು. ಎಚ್ ಐವಿ ಪಾಸಿಟಿವ್ ಆದ ಗರ್ಭಿಣಿಗೆ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸುವುದಕ್ಕೆ ನಿರಾಕರಿಸಿದ್ದಾರೆ. ಅಲ್ಲಿಂದ 50 ಕಿ.ಮೀ. ದೂರದ ಆಸ್ಪತ್ರೆಗೆ ಆಕೆಯನ್ನ ಕರೆದುಕೊಂಡು ಹೋಗುವಷ್ಟರಲ್ಲಿ ಆ ಮಗು ಹೊಟ್ಟೆಯಲ್ಲೇ ಸತ್ತುಹೋಗಿದೆ.[12ರ ಬಾಲಕನ ಪ್ರಾಣ ತಂದೆ ಹೆಗಲ ಮೇಲೆ ಹೋಯಿತು...]

ಉತ್ತರ ಪ್ರದೇಶದ ಬದೌನ್ ನಲ್ಲಿರುವ ಆಸ್ಪತ್ರೆಯಲ್ಲಿ ಆ ಹೆಣ್ಣುಮಗಳಿಗೆ ಚಿಕಿತ್ಸೆ ನೀಡಿಲ್ಲ. 'ಆ ತಾಯಿಗೆ ತಕ್ಷಣ ಚಿಕಿತ್ಸೆ ಸಿಕ್ಕಿದ್ದರೆ, ಮಗು ಬದುಕುವ ಅವಕಾಶಗಳಿದ್ದವು' ಎಂದು ವೈದ್ಯರೊಬ್ಬರು ತಿಳಿಸಿದ್ದಾರೆ. ಹೆಂಡತಿಯ ಶವ ಸಾಗಿಸುವುದಕ್ಕೆ ವಾಹನಕ್ಕೆ ಹಣ ಹೊಂದಿಸಲಾರದೆ, ಶವ ಹೊತ್ತು ಹತ್ತಾರು ಕಿ.ಮೀ. ನಡೆದ ಒಡಿಶಾದ ದಾನಾ ಮಾಝಿ, ವೈದ್ಯರು ಚಿಕಿತ್ಸೆ ನೀಡಲು ತಡ ಮಾಡಿದ್ದಕ್ಕೆ ಅಪ್ಪನ ಹೆಗಲ ಮೇಲೆ ಪ್ರಾಣ ಬಿಟ್ಟ ಕಾನ್ಪುರದ ಅಂಶ್..

ಈ ರೀತಿ ದಿನವೂ ಸಾಯುತ್ತಿರುವುದು ಮಾನವೀಯತೆ ಅನ್ನಿಸುವುದಿಲ್ವೆ?

English summary
Two different stories are here. One in nellore and other in Uttarpradesh both on pregnant woman. Mother in law and sister in law threw acid on Girija, because astrologer predicted that, she would give birth to girl baby. Other case hospital denied treatment for HIV positive pregnanat lady.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X