ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಣ್ಣಾಮಲೈ ಪಾದಯಾತ್ರೆ ರಾಹುಲ್ ಗಾಂಧಿಯವರ ಪಾದಯಾತ್ರೆಯ ಪ್ರಭಾವ ಎಂದು ವ್ಯಂಗ್ಯವಾಡಿದ ಡಿಎಂಕೆ

|
Google Oneindia Kannada News

ಚೆನ್ನೈ, ಜನವರಿ, 22: ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ರಾಜ್ಯಾದ್ಯಂತ ಪಾದಯಾತ್ರೆ ಮಾಡಲು ಯೋಜನೆ ರೂಪಿಸಿದ್ದು, ಇದಕ್ಕೆ ಆಡಳಿತರೂಢ ಡಿಎಂಕೆ ಭಾರತ್ ಜೋಡೋ ಯಾತ್ರೆಯ ನಕಲು ಎಂದು ವ್ಯಂಗ್ಯವಾಡಿದೆ.

ಅಣ್ಣಾಮಲೈ ರಾಜ್ಯಾದ್ಯಂತ ನಡೆಸಲಿರುವ ಪಾದಯಾತ್ರೆಯು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ನಡೆಸುತ್ತಿರುವ ಪಾದಯಾತ್ರೆಯ ಪರಿಣಾಮವಾಗಿದೆ ಎಂದು ಆಡಳಿತಾರೂಢ ಡಿಎಂಕೆ ಭಾನುವಾರ ಅಪಹಾಸ್ಯ ಮಾಡಿದೆ.

ರಾಹುಲ್ ಗಾಂಧಿ ದೇಶದ ಪ್ರಧಾನಿಯಾಗಲು ಸಮರ್ಥರು ಎಂದ ಶಿವಸೇನೆ ಸಂಸದ ಸಂಜಯ್ ರಾವತ್ರಾಹುಲ್ ಗಾಂಧಿ ದೇಶದ ಪ್ರಧಾನಿಯಾಗಲು ಸಮರ್ಥರು ಎಂದ ಶಿವಸೇನೆ ಸಂಸದ ಸಂಜಯ್ ರಾವತ್

ಅಣ್ಣಾಮಲೈ ಅವರ ಪಾದಯಾತ್ರೆಯು ದಕ್ಷಿಣ ತಮಿಳುನಾಡಿನ ಕಡಲತೀರದಲ್ಲಿರುವ ದೇವಾಲಯದ ಪಟ್ಟಣವಾದ ತಿರುಚೆಂದೂರ್‌ನಿಂದ ಏಪ್ರಿಲ್ 14 ರಿಂದ ಪ್ರಾರಂಭವಾಗಲಿದೆ ಎಂದು ಆಡಳಿತ ಪಕ್ಷದ ಮುಖವಾಣಿ 'ಮುರಸೋಲಿ'ಯಲ್ಲಿ ಉಲ್ಲೇಖಿಸಲಾಗಿದೆ. ಈ ಪಾದಯಾತ್ರೆಯು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯ ಪರಿಣಾಮ ಎಂದೆನಿಸುತ್ತಿದೆ ಎಂದು ವ್ಯಂಗ್ಯವಾಡಿದೆ.

DMK Teases BJP Tamil Nadu chief Annamalai padayatra

ಅಣ್ಣಾಮಲೈ ಅವರ ಪಾದಯಾತ್ರೆ ಕೇವಲ 'ಕಣ ಮಾಯಿಲಾದ' ಪದ್ಯವನ್ನು ನೆನಪಿಸುತ್ತದೆ ಎಂದು ದಿನಪತ್ರಿಕೆ ಹೇಳಿದೆ. ಇದು ನೀತಿಬೋಧಕವಾಗಿದ್ದು, ಹಳೆಯ ತಮಿಳು ಪದ್ಯವಾಗಿದೆ. ಇದರಲ್ಲಿ ಯಾರೊಬ್ಬರಿಂದ ಏನಾದರೂ ನಕಲು ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಹೇಳಲಾಗಿದೆ.

ಆಡಳಿತ ಪಕ್ಷ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ದಿನಪತ್ರಿಕೆಯು ಅಣ್ಣಾಮಲೈ ಅವರನ್ನು ಇಬ್ಬರು ಮಹಿಳೆಯರ ಸಂಭಾಷಣೆಯ ರೂಪದಲ್ಲಿ ಗೇಲಿ ಮಾಡಿದೆ.

2024 ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಚುನಾವಣಾ ಪ್ರಚಾರವನ್ನು ಪ್ರಾರಂಭಿಸುವ ಮೊದಲು ತಮಿಳುನಾಡು ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ ಎಲ್ಲಾ 234 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಪಾದಯಾತ್ರೆ ಮಾಡಲು ನಿರ್ಧರಿಸಿದ್ದಾರೆ.

DMK Teases BJP Tamil Nadu chief Annamalai padayatra

ಏಪ್ರಿಲ್ 14 ರಂದು ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಮತ್ತು ತಮಿಳು ಹೊಸ ವರ್ಷದ ದಿನವು ಬರರುವುದರಿಂದ ಈ ದಿನವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

English summary
Tamil Nadu ruling DMK teases BJP Tamil Nadu President K Annamalai's state-wide padayatra. it says that this is the impact of Congress leader Rahul Gandhi's Bharat Jodo Yatra. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X