• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಹುಲ್ ಗಾಂಧಿಗೆ ತಿರುಗೇಟು ಕೊಟ್ಟ ಸ್ಮಿತಾಗೆ ರಮ್ಯಾ ಟ್ವಿಟ್ಟರೇಟು

|
   ರಾಹುಲ್ ಗಾಂಧಿನ ಟೀಕಿಸಿದ್ದವರಿಗೆ ಟ್ವಿಟ್ಟರೇಟು ನೀಡಿದ ರಮ್ಯಾ | Oneindia Kannada

   ಬೆಂಗಳೂರು, ಜನವರಿ 03: "ಪ್ರಧಾನಿಗೆ ಸಂಸತ್ ಗೆ ಬಂದು ರಫೇಲ್ ವಿಚಾರವಾಗಿ ಉತ್ತರ ನೀಡಲು ಧೈರ್ಯ ಇಲ್ಲ" ಎಂದು ಆರೋಪ ಮಾಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿ ಅವರನ್ನು ಸಂದರ್ಶಿಸಿದ ಎಎನ್ಐ ಸಂಪಾದಕಿ ಸ್ಮಿತಾ ಪ್ರಕಾಶ್ ವಿರುದ್ಧವೂ ಮಾತನಾಡಿದ್ದರು.

   ಇದಕ್ಕೆ ತಿರುಗೇಟು ನೀಡಿದ್ದ ಸ್ಮಿತಾ, ಟ್ವೀಟ್ ಮಾಡಿ, ನಾನು ನನ್ನ ಕೆಲಸ ನಿಷ್ಠೆಯಿಂದ ಮಾಡಿದ್ದೇನೆ ಎಂದಿದ್ದಾರೆ.

   ಮೋದಿ ಸಂದರ್ಶನ ಮಾಡಿದ ಸಂಪಾದಕಿಗೆ ರಾಹುಲ್ ಗಾಂಧಿ ಟಾಂಗ್‌

   ಸ್ಮಿತಾ ಅವರು ಸಂದರ್ಶನದ ವೇಳೆ ತಾವೇ ಪ್ರಶ್ನೆ ಉತ್ತರ ಎರಡನ್ನು ಹೇಳುತ್ತಿದ್ದರು. ಮೋದಿ ಅವರಿಗೆ ಅಲ್ಲಿ ಸಂದರ್ಶನ ನೀಡಲು ಸಮಯವಿರುತ್ತದೆ. ರಫೇಲ್ ಬಗ್ಗೆ ವಿವರಣೆ ನೀಡಲು ಸಮಯವಿಲ್ಲವೇಕೆ ಎಂದು ರಾಹುಲ್ ಪ್ರಶ್ನಿಸಿದ್ದರು.

   ಸ್ಮಿತಾ ಅವರ ಟ್ವೀಟ್ ಗೆ ಕಾಂಗ್ರೆಸ್ಸಿನ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ರಮ್ಯಾ ಅವರು ಪ್ರತಿಕ್ರಿಯಿಸಿದ್ದು, ಎಲ್ಲಾ ಪತ್ರಕರ್ತರು ಒಂದೇ ರೀತಿ ಇರುವುದಿಲ್ಲ ಎಂಬುದು ಗೊತ್ತಿದೆ. ಆದರೆ, ಸತ್ಯ ಕೆಲವು ಸಲ ಸಹಿಸಲು ಕಷ್ಟವಾಗುತ್ತದೆ ಎಂದಿದ್ದಾರೆ.

   ರಫೇಲ್ ಟೇಪ್ ಅಸಲಿಯೋ ನಕಲಿಯೋ? ಸವಾಲೇಕೆ ಸ್ವೀಕರಿಸಲಿಲ್ಲ ರಾಹುಲ್?

   ಕಾಂಗ್ರೆಸ್ ಜತೆ ಸ್ಮಿತಾ ಟ್ವೀಟ್ ವಾರ್

   ಕಾಂಗ್ರೆಸ್ ಜತೆ ಸ್ಮಿತಾ ಟ್ವೀಟ್ ವಾರ್

   ಸ್ಮಿತಾ ಅವರು ಸಂದರ್ಶನದ ವೇಳೆ ತಾವೇ ಪ್ರಶ್ನೆ ಉತ್ತರ ಎರಡನ್ನು ಹೇಳುತ್ತಿದ್ದರು. ಮೋದಿ ಅವರಿಗೆ ಅಲ್ಲಿ ಸಂದರ್ಶನ ನೀಡಲು ಸಮಯವಿರುತ್ತದೆ. ರಫೇಲ್ ಬಗ್ಗೆ ವಿವರಣೆ ನೀಡಲು ಸಮಯವಿಲ್ಲವೇಕೆ ಎಂದು ರಾಹುಲ್ ಪ್ರಶ್ನಿಸಿದ್ದರು. ರಾಹುಲ್ ಅವರಿಗೆ ತಿರುಗೇಟು ನೀಡಿ ಸ್ಮಿತಾ ಅವರು ಟ್ವೀಟ್ ಮಾಡಿದ್ದರು.

   ಸ್ಮಿತಾ ಅವರ ಟ್ವೀಟ್ ಗೆ ಕಾಂಗ್ರೆಸ್ಸಿನ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ರಮ್ಯಾ ಅವರು ಪ್ರತಿಕ್ರಿಯಿಸಿ, ಟ್ವೀಟ್ ನಲ್ಲೇ ಏಟು ನೀಡಿದ್ದಾರೆ.

   ಕನ್ನಡಿ ಕೂಡಾ ನಿಮಗೆ ಸಹಾಯ ಮಾಡುವುದಿಲ್ಲ

   ಕನ್ನಡಿ ಕೂಡಾ ನಿಮಗೆ ಸಹಾಯ ಮಾಡುವುದಿಲ್ಲ ಎಂದ ಸಾಮಾಜಿಕ ಜಾಲ ತಾಣ ವಿಭಾಗದ ಮುಖ್ಯಸ್ಥೆ ರಮ್ಯಾ, ಮಾಧ್ಯಮ ಲೋಕದ ನೈತಿಕತೆ ಬಗ್ಗೆ ಪ್ರಶ್ನೆ ಬಂದಾಗ, ರಮ್ಯಾ ಈ ರೀತಿ ಉತ್ತರಿಸಿದ್ದಾರೆ.

   ಸ್ಮಿತಾ ಪ್ರಕಾಶ್ ಮಾಡಿದ ಸಂದರ್ಶನ ಬಗ್ಗೆ ರಾಹುಲ್

   ಮೋದಿ ಅವರನ್ನು ಎಎನ್‌ಐ ಸುದ್ದಿ ಸಂಸ್ಥೆ ಸಂಪಾದಕಿ ಸ್ಮಿತಾ ಪ್ರಕಾಶ್ ಅವರು ಸಂದರ್ಶನ ಮಾಡಿದ್ದರು. ರಫೇಲ್, ರಾಮ ಮಂದಿರ, ಮಹಾಘಟಬಂಧನ್‌, ಸಾಲಮನ್ನಾ, ತ್ರಿವಳಿ ತಲಾಖ್, ಶಬರಿಮಲೆ ಇನ್ನೂ ಹಲವು ವಿಷಯಗಳ ಕುರಿತಾಗಿ ಪ್ರಶ್ನೆಗಳನ್ನು ಕೇಳಿದ್ದರು.

   ಸ್ಮಿತಾ ಪ್ರಕಾಶ್ ಮಾಡಿದ ಸಂದರ್ಶನದ ಬಗ್ಗೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದು, ಅವರು ಬಹು ಸೌಮ್ಯವಾಗಿ ಪ್ರಶ್ನೆಗಳನ್ನು ಕೇಳಿದ್ದಾರೆ ಎಂದಿದ್ದರು. ರಾಹುಲ್ ಗಾಂಧಿ ಕೂಡಾ ಸ್ಮಿತಾ ಅವರನ್ನು ಟೀಕಿಸಿದ್ದರು.

   ಸ್ಮಿತಾ ಟೀಕಿಸಿದ ರಾಹುಲ್ ವಿರುದ್ಧ ಜೇಟ್ಲಿ

   ಎಎನ್ಐ ಸುದ್ದಿ ಸಂಸ್ಥೆ ಸಂಪಾದಕಿ ಸ್ಮಿತಾ ಪ್ರಕಾಶ್ ಅವರ ಮಾಧ್ಯಮ ನೈತಿಕತೆ ಬಗ್ಗೆ ಪ್ರಶ್ನಿಸಿದ್, ಪಕ್ಷಪಾತ ಸಂದರ್ಶನ ಎಂದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಟೀಕಿಸಿದ್ದಾರೆ. ತುರ್ತು ಪರಿಸ್ಥಿತಿ ಹೇರಿದವರ ಮೊಮ್ಮಗನ ಡಿಎನ್ಎಯಲ್ಲೇ ಇಂಥ ನಡವಳಿಕೆ ಇದೆ ಎಂದಿದ್ದಾರೆ.

   English summary
   ANI's Editor Smita Prakash interviewed Prime Minister Narendra Modi in which the PM had spoken on several issues - from Demonetisation to Ram Mandir. Divya Spandana who handles Social Media and Digital Communications for the Congress continued the attack on the Editor.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X