ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ಬಲಪಡಿಸುವ ರಾಹುಲ್, ಪ್ರಿಯಾಂಕ ಪ್ರಯತ್ನವೆಲ್ಲಾ ನೀರಲ್ಲಿ ಹೋಮ!

|
Google Oneindia Kannada News

ನವದೆಹಲಿ, ಮಾರ್ಚ್ 1:ಸುಮಾರು ಆರು ದಶಕಗಳಿಂದ ದೇಶದ ಆಡಳಿತದ ಚುಕ್ಕಾಣಿಯನ್ನು ತಮ್ಮ ಕೈಯಲ್ಲೇ ಹಿಡಿದುಕೊಂಡಿದ್ದ ಕಾಂಗ್ರೆಸ್ಸಿಗೆ, ಕಳೆದ ಒಂದು ದಶಕಗಳಿಂದ (ಕೆಲವೊಂದು ಚುನಾವಣೆ ಹೊರತು ಪಡಿಸಿ) ಹಿನ್ನಡೆಯ ಮೇಲೆ ಹಿನ್ನಡೆಯಾಗುತ್ತಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿನ ಹೀನಾಯ ಸೋಲಿನ ವೇಳೆ ಎಐಸಿಸಿ ಅಧ್ಯಕ್ಷ ಹುದ್ದೆಗೆ ರಾಹುಲ್ ಗಾಂಧಿ ರಾಜೀನಾಮೆ ನೀಡಿದ ನಂತರ, ಆ ಹುದ್ದೆಯಲ್ಲಿ ಹಂಗಾಮಿಯಾಗಿ ಸೋನಿಯಾ ಗಾಂಧಿ ಮುಂದುವರಿದಿದ್ದಾರೆ.

ಚುನಾವಣಾ ತಯಾರಿ; ಕುರುಡುಮಲೆ ದೇಗುಲದಲ್ಲಿ ಡಿಕೆಶಿ ವಿಶೇಷ ಪೂಜೆ!ಚುನಾವಣಾ ತಯಾರಿ; ಕುರುಡುಮಲೆ ದೇಗುಲದಲ್ಲಿ ಡಿಕೆಶಿ ವಿಶೇಷ ಪೂಜೆ!

ಅಲ್ಲಿಂದ ಇಲ್ಲಿಯವರೆಗೆ ಪಕ್ಷದಲ್ಲಿ ಆಮೂಲಾಗ್ರ ಬದಲಾವಣೆಯಾಗಬೇಕೆಂದು ಪಕ್ಷದ ಹಿರಿಯ ಮುಖಂಡರು ಒತ್ತಡವನ್ನು ಹೇರುತ್ತಿದ್ದರೂ, ಕಾಂಗ್ರೆಸ್ಸಿನಲ್ಲಿ ಅಂತಹ ಯಾವುದೇ ಬೆಳವಣಿಗೆಗಳು ನಡೆಯುತ್ತಿಲ್ಲ.

 ಮೈಸೂರು ಪಾಲಿಕೆ ಚುನಾವಣೆ ಮೈತ್ರಿ ಗೊಂದಲಕ್ಕೆ ಸಿದ್ದರಾಮಯ್ಯ ಕಾರಣ! ಮೈಸೂರು ಪಾಲಿಕೆ ಚುನಾವಣೆ ಮೈತ್ರಿ ಗೊಂದಲಕ್ಕೆ ಸಿದ್ದರಾಮಯ್ಯ ಕಾರಣ!

ಈಗ, ಮತ್ತೆ ಐದು ರಾಜ್ಯಗಳ ಚುನಾವಣೆಗೆ ಮಹೂರ್ತ ನಿಗದಿಯಾಗಿದೆ. ರಾಹುಲ್ ಗಾಂಧಿ ಚುನಾವಣೆ ನಡೆಯುವ ರಾಜ್ಯಗಳಲ್ಲಿ ಈಗಾಗಲೇ ಪ್ರವಾಸ ಆರಂಭಿಸಿದ್ದಾರೆ. ಆದರೆ, ಈ ಹೊತಿನಲ್ಲೇ ಪ್ರಮುಖವಾದ ಬೆಳವಣಿಗೆ ನಡೆದಿದ್ದು, ಪಕ್ಷ ಬಲ ಪಡಿಸುವ ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ವಾಧ್ರಾ ಅವರ ಪ್ರಯತ್ನವೆಲ್ಲಾ ನೀರಿನಲ್ಲಿ ಹೋಮ ಮಾಡಿದಂತಾಗುತ್ತಿದೆಯೇ ಎನ್ನುವ ಪ್ರಶ್ನೆ ಕಾಡಲಾರಂಭಿಸಿದೆ.

 ರಾಹುಲ್ ಗಾಂಧಿ ಸತತ ಪ್ರವಾಸ

ರಾಹುಲ್ ಗಾಂಧಿ ಸತತ ಪ್ರವಾಸ

ಒಂದು ಕಡೆ ರಾಹುಲ್ ಗಾಂಧಿ ಕಾಲಿನಲ್ಲಿ ಚಕ್ರ ಹಾಕಿಕೊಂಡಂತೆ ಪಕ್ಷದ ಪರವಾಗಿ ಪ್ರಚಾರ ನಡೆಸುತ್ತಿದ್ದರೆ, ಇನ್ನೊಂದೆಡೆ ಪಕ್ಷದ ನಾಯಕತ್ವವನ್ನೇ ಪ್ರಶ್ನಿಸುವ ಬೆಳವಣಿಗೆ ನಡೆಯುತ್ತಿರುವುದು ಕಾಂಗ್ರೆಸ್ಸಿಗೆ ತಲೆನೋವಾಗಿ ಪರಿಣಮಿಸುತ್ತಿದೆ. ಕೆಲವು ತಿಂಗಳ ಹಿಂದೆ ನಡೆದಿದ್ದ ವಿದ್ಯಮಾನಗಳು ಈಗ ವೇಗವನ್ನು ಪಡೆದುಕೊಳ್ಳುತ್ತಿದೆ.

 23 ಹಿರಿಯ ಕಾಂಗ್ರೆಸ್ ಮುಖಂಡರು

23 ಹಿರಿಯ ಕಾಂಗ್ರೆಸ್ ಮುಖಂಡರು

ಜಮ್ಮುವಿನಲ್ಲಿ ಎರಡು ದಿನಗಳ ಹಿಂದೆ ಸಮ್ಮೇಳನವೊಂದನ್ನು ಆಯೋಜಿಸಲಾಗಿತ್ತು. ಇದರಲ್ಲಿ ಪಕ್ಷದಲ್ಲಿ ಬದಲಾವಣೆ ಆಗಬೇಕೆಂದು ಧ್ವನಿ ಎತ್ತಿದ್ದ 23 ಹಿರಿಯ ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು. ವಿಚಾರ ಏನಂದರೆ, ಈ ಎಲ್ಲಾ ನಾಯಕರು ಪಕ್ಷದ ನಾಯಕರ ವಿರುದ್ದ ಅಸಮಾಧಾನವನ್ನು ಬಹಿರಂಗವಾಗಿ ವ್ಯಕ್ತ ಪಡಿಸಿದ್ದಾರೆ.

 ಕೇಸರಿ ಪೇಟ ಹಾಕಿಕೊಂಡು ಬಂದ ಕಾಂಗ್ರೆಸ್ ಮುಖಂಡರು

ಕೇಸರಿ ಪೇಟ ಹಾಕಿಕೊಂಡು ಬಂದ ಕಾಂಗ್ರೆಸ್ ಮುಖಂಡರು

"ಪಕ್ಷ ಇತ್ತೀಚಿನ ದಿನಗಳಲ್ಲಿ ದುರ್ಬಲವಾಗುತ್ತಿರುವುದು ನಮಗೆಲ್ಲಾ ನೋವಾಗುತ್ತಿದೆ. ನಾವೆಲ್ಲಾ, ಕಾಂಗ್ರೆಸ್ಸಿನ ಏಳಿಗೆಯನ್ನು ನೋಡಿಕೊಂಡು ಬೆಳೆದವರು, ಇಂದಿನ ಪಕ್ಷದ ಪರಿಸ್ಥಿತಿಗೆ ಕಾರಣ ಯಾರೇ ಇರಬಹುದು. ಅದನ್ನು ನೋಡಿಕೊಂಡು ಸುಮ್ಮನೇ ಕೂತಿರಲು ಸಾಧ್ಯವಿಲ್ಲ"ಎಂದು ಈ ಮುಖಂಡರು ಪರೋಕ್ಷವಾಗಿ ರಾಹುಲ್ ಗಾಂಧಿಯ ವಿರುದ್ದ ಸಿಟ್ಟನ್ನು ಹೊರಹಾಕಿದ್ದಾರೆ.

 ಗುಲಾಂನಬಿ ಆಜಾದ್ ಅವರು ಮೋದಿಯನ್ಜು ಹೊಗಳಿದ್ದಾರೆ

ಗುಲಾಂನಬಿ ಆಜಾದ್ ಅವರು ಮೋದಿಯನ್ಜು ಹೊಗಳಿದ್ದಾರೆ

ಈ ಎಲ್ಲಾ ಕಾಂಗ್ರೆಸ್ಸಿನ ಹಿರಿಯ ಮುಖಂಡರು ಕೇಸರಿ ಪೇಟ ಹಾಕಿಕೊಂಡು ಬಂದಿದ್ದು ವಿಶೇಷವಾಗಿತ್ತು. ಈ ಸಮ್ಮೇಳನದ ಬೆನ್ನಲ್ಲೇ ರಾಹುಲ್ ವಿರುದ್ದ ತಿರುಗಿಬಿದ್ದಿರುವ ಈ 23 ಮುಖಂಡರ ಪೈಕಿ ಒಬ್ಬರಾದ ಗುಲಾಂನಬಿ ಆಜಾದ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ಜು ಮುಕ್ತಕಂಠದಿಂದ ಹೊಗಳಿದ್ದಾರೆ. ಈ ಎಲ್ಲಾ ಬೆಳವಣಿಗೆಗಳು, ಕಾಂಗ್ರೆಸ್ ತನ್ನ ಉಚ್ಚ್ರಾಯ ಸ್ಥಿತಿಗೆ ಮತ್ತೆ ಮರುಳಲಿದೆಯಾ ಎನ್ನುವ ಪ್ರಶ್ನೆ ಮೂಡುವಂತೆ ಮಾಡುತ್ತಿದೆ.

English summary
Dissident Activities Increasing In Congress Over The Party Leadership From Party Seniors.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X