ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳದಲ್ಲಿ ತಗ್ಗಿದ ಕೊರೊನಾ; ದೇಶದ ವಾರದ ಸೋಂಕಿನ ಪ್ರಮಾಣ 13% ಇಳಿಕೆ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 13: ಕೇರಳದಲ್ಲಿ ಕಳೆದ ಒಂದು ವಾರದಿಂದ ಕೊರೊನಾ ಪ್ರಕರಣಗಳು ಕ್ರಮೇಣ ತಗ್ಗಿದ್ದು, ದೇಶದ ಕೊರೊನಾ ಪ್ರಕರಣಗಳ ವಾರದ ಸರಾಸರಿಯಲ್ಲಿಯೂ ಇಳಿಕೆ ಕಂಡುಬಂದಿದೆ.

ಭಾನುವಾರ ಕೊನೆಗೊಂಡಂತೆ ವಾರದ ಸರಾಸರಿ ಅಂದಾಜಿನಲ್ಲಿ ಕೇರಳ ಕೊರೊನಾ ಪ್ರಕರಣಗಳಲ್ಲಿ ಶೇ 17ರಷ್ಟು ಇಳಿಕೆಯಾಗಿದ್ದು, ದೇಶದ ಒಟ್ಟಾರೆ ಕೊರೊನಾ ಪ್ರಕರಣಗಳಲ್ಲಿ ಈ ಅವಧಿಯಲ್ಲಿ ಶೇ 13ರಷ್ಟು ಇಳಿಕೆಯಾಗಿದೆ.

 ಕೊರೊನಾ ಲಸಿಕೆ ಮೊದಲ ಡೋಸ್: 6 ರಾಜ್ಯಗಳಲ್ಲಿ ಶೇ.100ರಷ್ಟು ಸಾಧನೆ ಕೊರೊನಾ ಲಸಿಕೆ ಮೊದಲ ಡೋಸ್: 6 ರಾಜ್ಯಗಳಲ್ಲಿ ಶೇ.100ರಷ್ಟು ಸಾಧನೆ

24 ವಾರಗಳ ನಂತರ, ಸೋಂಕಿನಿಂದ ಸಂಭವಿಸಿದ ಮರಣ ಪ್ರಮಾಣದಲ್ಲಿಯೂ ಇಳಿಕೆಯಾಗಿದೆ. ಕಳೆದ ಒಂದು ವಾರದಲ್ಲಿ, ದೇಶದಲ್ಲಿ ಸೋಂಕಿನಿಂದ 2,104 ಮಂದಿ ಸಾವನ್ನಪ್ಪಿದ್ದು, ಮಾರ್ಚ್ 22-28ರ ಅವಧಿಯ ನಂತರ ದಾಖಲಾದ ಅತಿ ಕಡಿಮೆ ಮರಣ ಪ್ರಮಾಣ ಇದಾಗಿದೆ.

Dip In Kerala Corona Cases Leads To Decrease In Weekly Cases In India

ಸೆಪ್ಟೆಂಬರ್ 6-12ರವರೆಗಿನ ಅವಧಿಯಲ್ಲಿ ಕೇರಳ ಕೊರೊನಾ ಪ್ರಕರಣಗಳಲ್ಲಿ ಇಳಿಕೆ ಕಂಡುಬಂದಿದ್ದು, ದೇಶದಲ್ಲಿಯೂ ಒಟ್ಟಾರೆ ಪ್ರಕರಣಗಳ ಸಂಖ್ಯೆ ತಗ್ಗಿದೆ. ಈ ವಾರದಲ್ಲಿ ದೇಶದಲ್ಲಿ ಕೇವಲ 2.5ಲಕ್ಷ ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. ಮೂರು ವಾರಗಳ ನಂತರ ದಾಖಲಾದ ಕಡಿಮೆ ಪ್ರಕರಣ ಇದಾಗಿದೆ. ಅದಕ್ಕೂ ಹಿಂದಿನ ವಾರ ಈ ಸಂಖ್ಯೆ 2.8 ಲಕ್ಷ ಇತ್ತು.

ಭಾರತದಲ್ಲಿ ದಾಖಲಾಗುತ್ತಿದ್ದ ಕೊರೊನಾ ಪ್ರಕರಣಗಳ ಪೈಕಿ ಕೇರಳ ರಾಜ್ಯವೊಂದರ ಪಾಲು 66.6% ಇತ್ತು. ಇದೀಗ ಒಂದು ವಾರದ ಅವಧಿಯಲ್ಲಿ 1.6 ಲಕ್ಷ ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ.

ಭಾನುವಾರ ದೇಶದಲ್ಲಿ 31,400 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಸೋಂಕಿನಿಂದ 211 ಮಂದಿ ಸಾವನ್ನಪ್ಪಿದ್ದರು. ಅದರಲ್ಲಿ ಕೇರಳದಲ್ಲಿ ಅತಿ ಹೆಚ್ಚು ಮಂದಿ ಸೋಂಕಿನಿಂದ ಸಾವನ್ನಪ್ಪಿರುವ ವರದಿಯಾಗಿದೆ. ಕೇರಳ- 67, ಮಹಾರಾಷ್ಟ್ರ 46, ತಮಿಳುನಾಡು 22 ಹಾಗೂ ಕರ್ನಾಟಕದಲ್ಲಿ 17 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಕೇರಳದಲ್ಲಿ ಭಾನುವಾರ 20,240 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದವು.

ಕೇರಳದಲ್ಲಿ ಸೆ.30ರೊಳಗೆ 18 ವರ್ಷ ಮೇಲ್ಪಟ್ಟವರೆಲ್ಲರಿಗೂ ಕೊರೊನಾ ಲಸಿಕೆ: ಪಿಣರಾಯಿ ವಿಜಯನ್ಕೇರಳದಲ್ಲಿ ಸೆ.30ರೊಳಗೆ 18 ವರ್ಷ ಮೇಲ್ಪಟ್ಟವರೆಲ್ಲರಿಗೂ ಕೊರೊನಾ ಲಸಿಕೆ: ಪಿಣರಾಯಿ ವಿಜಯನ್

ಆಗಸ್ಟ್‌ ತಿಂಗಳ ಬಹುಪಾಲು ಕೇರಳದಲ್ಲಿ ದಿನನಿತ್ಯದ ಕೊರೊನಾ ಪ್ರಕರಣಗಳು 30 ಸಾವಿರದ ಅಂಚಿನಲ್ಲಿದ್ದವು. ರಾಜ್ಯ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದರೂ ಕೊರೊನಾ ನಿಯಂತ್ರಣ ಕಠಿಣ ಸವಾಲಾಗಿತ್ತು. ಹಲವು ನಿರ್ಬಂಧಗಳ ಹೊರತಾಗಿಯೂ ಮನೆಯಲ್ಲಿ ಕ್ವಾರಂಟೈನ್‌ನಲ್ಲಿದ್ದವರಿಂದಲೇ ಸೋಂಕಿನ ಹರಡುವಿಕೆ ಅಧಿಕವಾಗಿತ್ತು. ಇದೀಗ ಕಳೆದ ಒಂದು ವಾರದಿಂದ ಕೊಂಚ ಇಳಿಕೆ ಕಂಡುಬಂದಿದೆ.

Dip In Kerala Corona Cases Leads To Decrease In Weekly Cases In India

ಇದರೊಂದಿಗೆ, ಕೇರಳದಲ್ಲಿ ಸೆಪ್ಟೆಂಬರ್ 30ರೊಳಗೆ 18 ವರ್ಷ ಮೇಲ್ಪಟ್ಟವರೆಲ್ಲರಿಗೂ ಕೊರೊನಾ ಲಸಿಕೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದು, ಮುಂದಿನ ದಿನಗಳಲ್ಲಿ ಸೋಂಕಿನ ಪ್ರಮಾಣ ಇನ್ನಷ್ಟು ತಗ್ಗುವ ಭರವಸೆಯಿದೆ.

ದೇಶದಲ್ಲಿ ಲಸಿಕಾ ವೇಗಗತಿಯಲ್ಲಿ ಹೆಚ್ಚಳ: ಸಂಭಾವ್ಯ ಕೊರೊನಾ ಮೂರನೇ ಅಲೆ ಭೀತಿಯೊಂದಿಗೆ ದೇಶದಲ್ಲಿ ಕೊರೊನಾ ಲಸಿಕೆ ನೀಡುವಿಕೆಯನ್ನು ತ್ವರಿತಗೊಳಿಸಲಾಗಿದೆ. ದೇಶದಲ್ಲಿ ಇದುವರೆಗೂ ಲಸಿಕೆ ಪಡೆದವರ ಸಂಖ್ಯೆ 74 ಕೋಟಿ ಮೀರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

56.5 ಕೋಟಿ ಫಲಾನುಭವಿಗಳಿಗೆ ಒಂದು ಡೋಸ್ ಪೂರ್ಣಗೊಂಡಿದ್ದರೆ, 17.7 ಕೋಟಿ ಮಂದಿಗೆ ಎರಡೂ ಡೋಸ್‌ಗಳನ್ನು ನೀಡಲಾಗಿದೆ. ಮೂರು ರಾಜ್ಯಗಳು ಹಾಗೂ ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕನಿಷ್ಠ ಒಂದು ಡೋಸ್ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ದೇಶದಲ್ಲಿ ಕೊರೊನಾ ಸ್ಥಿತಿಗತಿ:
ಸೋಮವಾರ ದೇಶದಲ್ಲಿ 27,254 ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು, ಇದೇ ಅವಧಿಯಲ್ಲಿ 219 ಮಂದಿ ಸಾವನ್ನಪ್ಪಿದ್ದಾರೆ. ಸೋಮವಾರದ ಅಂಕಿ ಸಂಖ್ಯೆಯೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3,32,64,175ಕ್ಕೆ ತಲುಪಿದ್ದು, ಸಾವಿನ ಸಂಖ್ಯೆ 4,42,874ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಭಾರತದಲ್ಲಿ ಒಂದೇ 12,08,247 ಮಂದಿಯನ್ನು ಕೊರೊನಾ ಪರೀಕ್ಷೆಗೊಳಪಡಿಸಲಾಗಿದ್ದು, 54,30,14,076 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.

English summary
Weekly Covid cases in India dropped by 13% following a dip of 17% in the case count in Kerala,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X