ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾಗತಿಕ ಹಸಿವು ಸೂಚ್ಯಂಕ: ಬಳಸಿದ ವಿಧಾನ ಅವೈಜ್ಞಾನಿಕವೆಂದ ಕೇಂದ್ರ

|
Google Oneindia Kannada News

ನವದೆಹಲಿ, ಅಕ್ಟೋಬರ್ 16: ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತ 94ರಿಂದ 101ನೇ ಸ್ಥಾನಕ್ಕೆ ಕುಸಿದಿರುವುದು ಆಘಾತಕಾರಿ ಎಂದು ಕೇಂದ್ರ ಸರ್ಕಾರ ಹೇಳಿದೆ. ಹಾಗೆಯೇ ಇದಕ್ಕೆ ಬಳಸಿರುವ ವಿಧಾನ ಅವೈಜ್ಞಾನಿಕ ಎಂದು ಕೇಂದ್ರ ಸರ್ಕಾರ ಹೇಳಿದೆ.

ಈ ವಿಧಾನದಲ್ಲಿ ಅಪೌಷ್ಠಿಕತೆಯನ್ನು, ಆಹಾರ ಪದಾರ್ಥಗಳ ಲಭ್ಯತೆಯನ್ನು ಅಳೆಯುವುದು ಅಸಾಧ್ಯ. ವೈಜ್ಞಾನಿಕವಾಗಿ ಅಪೌಷ್ಠಿಕತೆ ಮಟ್ಟ ಅಳತೆ ಮಾಡಲು ವ್ಯಕ್ತಿಯ ತೂಕ ಮತ್ತು ಎತ್ತರ ಇತ್ಯಾದಿ ವಿಧಾನ ಅಗತ್ಯ ಇರುತ್ತದೆ. ಟೆಲಿಫೋನ್ ಮೂಲಕ ನಡೆಸಿರುವ ಈ ಗಣತಿ ಸರಿಯಲ್ಲ ಎಂದು ಹೇಳಲಾಗಿದೆ.

ವಾರ್ಷಿಕ ವರದಿ ತಯಾರಿಸಲು ಮತ್ತು ಲೆಕ್ಕಿಸಲು ಬಳಸಿರುವ ವಿಧಾನ ಅವೈಜ್ಞಾನಿಕವಾಗಿದೆ. ಇದು ಎಫ್​ಎಒ (ಯುಎನ್​ನ ಆಹಾರ ಮತ್ತು ಕೃಷಿ ಸಂಸ್ಥೆ) ವರದಿ ತಯಾರಿಸಲು ಬಳಸಿರುವ ವಿಧಾನ ಅವೈಜ್ಞಾನಿಕವಾಗಿದೆ. ಅವರು ನಾಲ್ಕು ಪ್ರಶ್ನೆಯ ಒಪಿನಿಯನ್ ಪೋಲ್ ಮೂಲಕ ಈ ವರದಿ ತಯಾರಿಸಿದ್ದಾರೆ ಎಂದು ಕೇಂದ್ರ ಸರ್ಕಾರ ಹೇಳಿದೆ.

Global Hunger Index

ಈ ಗಣತಿಯಲ್ಲಿ ಕೇಳಿದ ಪ್ರಶ್ನಾವಳಿಯಲ್ಲಿ ಆಹಾರ ಸಹಾಯವನ್ನು ಜನರು ಸರ್ಕಾರದಿಂದ ಅಥವಾ ಯಾವುದೇ ಮೂಲಗಳಿಂದ ಪಡೆದುಕೊಂಡಿದ್ದಾರೆಯೇ ಎಂಬ ಬಗ್ಗೆ ಕೇಳಿಲ್ಲ. ಈ ಪೋಲ್ ನಡೆಸಿರುವವರು ಭಾರತ ಹಾಗೂ ಇತರ ದೇಶಗಳ ಬಗ್ಗೆ ಅನುಮಾನಿತರಾಗೇ ಇದ್ದಾರೆ ಎಂದು ತಿಳಿಸಲಾಗಿದೆ.

116 ದೇಶಗಳ ಜಾಗತಿಕ ಹಸಿವು ಸೂಚ್ಯಂಕ(ಜಿಎಚ್‌ಐ) 2020ರಲ್ಲಿ 94ನೇ ಸ್ಥಾನದಲ್ಲಿದ್ದ ಭಾರತವು 2021ರಲ್ಲಿ 101ನೇ ಸ್ಥಾನಕ್ಕೆ ಕುಸಿದಿದೆ. ಇದು ಈಗ ತನ್ನ ನೆರೆ ರಾಷ್ಟ್ರಗಳಾದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೇಪಾಳಕ್ಕಿಂತ ಹಿಂದಿದೆ.

ಕೋವಿಡ್ ಸಂಕಷ್ಟದ ಸಮಯದಲ್ಲಿ ಸಂಪೂರ್ಣ ಜನಸಂಖ್ಯೆಗೆ ಆಹಾರ ಭದ್ರತೆ ಒದಗಿಸಲು ಸರ್ಕಾರ ಕೈಗೊಂಡಿರುವ ಪ್ರಯತ್ನಗಳನ್ನು ಈ ವರದಿ ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಹೇಳಲಾಗಿದೆ.

ಜಾಗತಿಕ ಹಸಿವು ಸೂಚ್ಯಂಕ 2021 ಪಟ್ಟಿ ಪ್ರಕಟವಾಗಿದೆ. ಜಾಗತಿಕ ಹಸಿವು ಸೂಚ್ಯಂಕ 2021ರಲ್ಲಿ 116 ರಾಷ್ಟ್ರಗಳ ಪೈಕಿಯಲ್ಲಿ ಭಾರತ 94 ರಿಂದ 101ನೇ ಸ್ಥಾನಕ್ಕೆ ಇಳಿದಿದ್ದು, ನೆರೆಯ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೇಪಾಳ ರಾಷ್ಟ್ರಗಳಿಗಿಂತ ಕೆಳಸ್ಥಾನದಲ್ಲಿದೆ.

ಕಳೆದ ವರ್ಷ 107 ರಾಷ್ಟ್ರಗಳ ಪೈಕಿಯಲ್ಲಿ ಭಾರತ 94 ನೇ ಸ್ಥಾನದಲ್ಲಿತ್ತು. ಇದೀಗ 116 ರಾಷ್ಟ್ರಗಳ ಪೈಕಿಯಲ್ಲಿ 101ನೇ ಸ್ಥಾನಕ್ಕೆ ಕುಸಿದಿದೆ. ಭಾರತದ ಜಾಗತಿಕ ಹಸಿವು ಸೂಚ್ಯಂಕ ಸ್ಕೋರ್ 2012 ಮತ್ತು 2021 ರ ನಡುವೆ ಶೇ 28.5 ರಿಂದ ಶೇ. 27. 5ಕ್ಕೆ ಕುಸಿದಿದೆ.

ಪಾಕಿಸ್ತಾನ ಈ ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತಕ್ಕಿಂತ ಮೇಲಿನ ಸ್ಥಾನದಲ್ಲಿದೆ. ಪಾಕಿಸ್ತಾನ 92ನೇ ಸ್ಥಾನದಲಿದ್ದರೆ, ನೇಪಾಳ (76) ಬಾಂಗ್ಲಾದೇಶ (76) ಮತ್ತು ಮಾನ್ಮಾರ್ 71ನೇ ಸ್ಥಾನದಲ್ಲಿದೆ. ಆದರೆ, ಈ ರಾಷ್ಟ್ರಗಳಲ್ಲಿ ಭಾರತಕ್ಕಿಂತ ಕಡಿಮೆ ಪ್ರಮಾಣದ ಹಸಿವಿನ ಸಮಸ್ಯೆಯಿದೆ.

ಚೀನಾ, ಭ್ರಜಿಲ್ ಮತ್ತು ಕುವೈತ್ ಸೇರಿದಂತೆ 18 ರಾಷ್ಟ್ರಗಳು ಐದಕ್ಕಿಂತ ಕಡಿಮೆ ಅಂಕಗಳೊಂದಿಗೆ ಅಗ್ರ ಸ್ಥಾನವನ್ನು ಹಂಚಿಕೊಂಡಿವೆ ಎಂದು ಗ್ಲೋಬಲ್ ಹಂಗರ್ ಇಂಡೆಕ್ಸ್ ( ಜಿಹೆಚ್ ಐ) ವೆಬ್ ಸೈಟ್ ಗುರುವಾರ ಹೇಳಿದೆ.

ಐರಿಶ್ ನೆರವಿನ ಸಂಸ್ಥೆ ಕನ್ಸರ್ನ್ ವರ್ಲ್ಡ್ ವೈಡ್ ಮತ್ತು ಜರ್ಮನಿಯ ವೆಲ್ಟ್ ಹಂಗರ್ ಹಿಲ್ಫೆ ಸಂಸ್ಥೆ ಜಂಟಿಯಾಗಿ ತಯಾರಿಸಿದ ವರದಿಯಂತೆ ಭಾರತದಲ್ಲಿ ಹಸಿವಿನ ಮಟ್ಟ 'ಆತಂಕಕಾರಿ' ಎಂದು ಬಣ್ಣಿಸಲಾಗಿದೆ.

ಪಾಕಿಸ್ತಾನ ಈ ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತಕ್ಕಿಂತ ಮೇಲಿನ ಸ್ಥಾನದಲ್ಲಿದೆ. ಪಾಕಿಸ್ತಾನದ ಸ್ಥಾನ 92 ಆಗಿದ್ದರೆ, ನೆರೆಯ ನೇಪಾಳ 76, ಬಾಂಗ್ಲಾದೇಶ 76 ಭಾರತಕ್ಕಿಂತ ಮೇಲಿನ ಸ್ಥಾನಗಳಲ್ಲಿವೆ.

ಸೋಮಾಲಿಯಾದಲ್ಲಿ ಗರಿಷ್ಠ ಹಸಿವಿನ ಸಮಸ್ಯೆಯಿದೆಯೆಂದು ತಿಳಿದುಬಂದಿದ್ದು, ಈ ಪಟ್ಟಿಯಲ್ಲಿ ಈ ದೇಶ ಕೊನೆಯ ಸ್ಥಾನದಲ್ಲಿದೆ. 2000ರಿಂದ ಜಾಗತಿಕ ಹಸಿವಿನ ಪ್ರಮಾಣ ಕಡಿಮೆಯಾಗುತ್ತಿದ್ದರೂ ಪ್ರಗತಿ ನಿಧಾನಗತಿಯಲ್ಲಿದೆ ಎಂದು ವರದಿ ತಿಳಿಸಿದೆ.

ಜಾಗತಿಕ ಹಸಿವು ಸೂಚ್ಯಂಕ ಸ್ಕೋರ್ 2006 ಹಾಗೂ2012ರ ನಡುವೆ 25.1 ರಿಂದ 20.4ಕ್ಕೆ ಕುಸಿದಿದೆ. 2012ರಿಂದೀಚೆಗೆ ಈ ಪ್ರಮಾಣ 2.5 ಅಂಕಗಳಷ್ಟು ಮಾತ್ರ ಕಡಿಮೆಯಾಗಿದೆ.
ಈ ವರ್ಷ ಈ ಸೂಚ್ಯಂಕದಲ್ಲಿ ಭಾರತಕ್ಕಿಂತ ಕೆಳಗಿನ ಸ್ಥಾನಗಳಲ್ಲಿ ವಪುವಾ ನ್ಯೂ ಗಿನಿ, ಅಫ್ಘಾನಿಸ್ತಾನ, ನೈಜೀರಿಯಾ, ಕಾಂಗೊ,ಮೊಂಜಂಬಿಕ್, ಸಿಯೆರಾ ಲಿಯೋನ್, ಟಿಮೋರ್ ಲೆಸ್ಟೆ, ಹೈಟಿ, ಲೈಬೀರಿಯಾ, ಮಡಗಾಸ್ಕರ್, ಕಾಂಗೋ ಗಣರಾಜ್ಯ, ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್, ಯೆಮೆನ್ ಹಾಗೂ ಸೋಮಾಲಿಯಾ ಇವೆ.

ಕಳೆದ ವರ್ಷ ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತ 107 ದೇಶಗಳ ಪೈಕಿ 94ನೇ ಸ್ಥಾನದಲ್ಲಿತ್ತು. ವಿಶ್ವದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಎತ್ತರಕ್ಕೆ ಸಮಾನಾದ ತೂಕವನ್ನು ಹೊಂದಿರದ ಮಕ್ಕಳು ಭಾರತದಲ್ಲಿದ್ದಾರೆ.

2016-2020ರ ನಡುವೆ ಎತ್ತರಕ್ಕೆ ಸರಿಯಾದ ತೂಕ ಹೊಂದಿರದ ಮಕ್ಕಳ ಪ್ರಮಾಣ ಶೇ.17.3ರಷ್ಟಿದೆ. 1998-2002ರ ನಡುವೆ ಈ ಪ್ರಮಾಣ ಶೇ. 17.1ರಷ್ಟಿತ್ತು ಎಂದು ಜಿಎಚ್‌ಐ ವರದಿ ಹೇಳಿದೆ.

English summary
The Centre on Friday said it was shocking that India's rank was lowered on the Global Hunger Index, terming the methodology used for rankings ''unscientific''.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X