• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

2.5 ವರ್ಷಗಳಲ್ಲಿ 2.5 ಲಕ್ಷ ಗ್ರಾಮಗಳಿಗೆ ಬ್ರಾಡ್ ಬ್ಯಾಂಡ್ ಸಂಪರ್ಕ

By Mahesh
|

ನವದೆಹಲಿ, ಜುಲೈ 08: ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಗಳಲ್ಲಿ ಒಂದೆನಿಸಿರುವ 'ಡಿಜಿಟಲ್ ಇಂಡಿಯಾ' ಮೂಲಕ ದೇಶದ 2.5 ಲಕ್ಷಕ್ಕೂ ಅಧಿಕ ಗ್ರಾಮಗಳಿಗೆ ಬ್ರಾಡ್ ಬ್ಯಾಂಡ್ ಇಂಟರ್ನೆಟ್ ಸಂಪರ್ಕ ಒದಗಿಸಲಾಗುವುದು ಎಂದು ಟೆಲಿಕಾಂ ಖಾತೆ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

ಸಿ ಡಾಟ್ ಉತ್ಪಾದನೆಯ ನಾಲ್ಕು ಬ್ರಾಡ್ ಬ್ಯಾಂಡ್ ಉತ್ಪನ್ನಗಳನ್ನು ಲೋಕಾರ್ಪಣೆ ಮಾಡಿದ ನಂತರ ಸಚಿವ ರವಿಶಂಕರ್ ಪ್ರಸಾದ್ ಮಾತನಾಡಿ, 'ಭಾರತೀಯ ದೂರವಾಣಿ ಬಳಕೆದಾರರ ಸಂಖ್ಯೆ ನೂರು ಕೋಟಿ ದಾಟಿದ್ದು, ಇದರಲ್ಲಿ 97.8 ಕೋಟಿ ಜನರು ಮೊಬೈಲ್ ಬಳಕೆದಾರರಿದ್ದಾರೆ. ಮುಂದಿನ ಎರಡೂವರೆ ವರ್ಷಗಳಲ್ಲಿ 2.5 ಲಕ್ಷ ಗ್ರಾಮಗಳಿಗೆ ಇಂಟರ್ನೆಟ್ ಸಂಪರ್ಕ ಸಿಗಲಿದೆ. 500 ಮಿಲಿಯನ್ ತನಕ ಬಳಕೆದಾರರ ಸಂಖ್ಯೆ ಹೆಚ್ಚಿಸಲಾಗುವುದು ಎಂದರು.

ಸುಮಾರು 125 ಕೋಟಿ ಜನಸಂಖ್ಯೆ ಹೊಂದಿರುವ ದೇಶದಲ್ಲಿ 100 ಕೋಟಿ ಜನರು ದೂರವಾಣಿ ಸಂಪರ್ಕ ಹೊಂದಿರುವುದು ಉತ್ತಮ ಬೆಳವಣಿಗೆ. ಇದರಲ್ಲಿ 30 ಕೋಟಿ ಬಳಕೆದಾರರು ಇಂಟರ್ನೆಟ್ ಬಳಸಿಕೊಳ್ಳುತ್ತಿದ್ದು, ಮುಂದಿನ ಎರಡು ವರ್ಷಗಳ ಅವಧಿಯಲ್ಲಿ 50 ಕೋಟಿ ಜನರಿಗೆ ಇಂಟರ್ನೆಟ್ ಸೌಲಭ್ಯ ಸಿಗಲಿದೆ ಎಂದು ಹೇಳಿದರು.

Centre for Development of Telematics (ಸಿ-ಡಾಟ್) ಅಭಿವೃದ್ಧಿಪಡಿಸಿರುವ ದೂರವ್ಯಾಪಿ ವೈಫೈ ವ್ಯವಸ್ಥೆ, ಸೌರಶಕ್ತಿ ಆಧರಿತ ವೈ-ಫೈ ವ್ಯವಸ್ಥೆ , 100 ಜಿಬಿಪಿಎಸ್​ ಆಫ್ಟಿಕಲ್ ಕೇಬಲ್ ಲಿಂಕ್(ಸುತೀವ್ರ) ಮತ್ತು ಸಿ-ಡಾಟ್ ನೆಕ್ಸ್ಟ್ ಜನರೇಷನ್ ನೆಟ್​ವರ್ಕ್​ ಉದ್ಘಾಟಿಸಿದರು.ಐಟಿ ಪಾರ್ಕ್, ಕೈಗಾರಿಕಾ ಕಾಂಪ್ಲೆಕ್ಸ್, ನಗರದ ಆಂತರಿಕ ಇಂಟರ್ನೆಟ್ ಟ್ರಾಫಿಕ್ ಹಾಗೂ ಡಾಟಾ ಸೆಂಟರ್ ಗಳಿಗೆ ಈ ಉತ್ಪನ್ನಗಳು ಪ್ರಯೋಜನಕಾರಿ ಎಂದು ಸಚಿವರು ತಿಳಿಸಿದರು. (ಐಎಎನ್ ಎಸ್)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Digital India launched by Prime Minister Narendra Modi earlier this week is committed to bring all 2.5 lakh villages under broadband services and enhance Internet penetration from 300 million to 500 million within two-and-a-half years said Telecom Minister Ravi Shankar Prasad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more