ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರೋಗ್ಯ ಇಲಾಖೆ ಸೈನಿಕರ ಸೇವೆ ಹಾಗೂ ಸಂಬಳ ನಡುವಿನ ವ್ಯತ್ಯಾಸ

|
Google Oneindia Kannada News

ಬೆಂಗಳೂರು, ಮೇ 12: ವೈದ್ಯರು, ನರ್ಸ್‌ಗಳನ್ನು ಕೊರೊನಾ ವಾರಿಯರ್ಸ್ ಎಂದೇ ಕರೆಯುತ್ತೇವೆ. ಕೇವಲ ಬಾಯಿಮಾತಲ್ಲಿ ಕರೆದರೆ ಸಾಕೇ ಅವರ ಶ್ರಮಕ್ಕೆ ಪ್ರತಿಯಾಗಿ ಏನು ನೀಡಿದ್ದೇವೆ ಎಂಬುದನ್ನು ಕೂಡ ಆಲೋಚಿಸಬೇಕಿದೆ.

ಹಗಲು ರಾತ್ರಿ ಎನ್ನದೆ ರೋಗಿಗಳ ಶುಶ್ರೂಶೆಯಲ್ಲಿ ತೊಡಗಿದ್ದಾರೆ. ಕೆಲವರು ಮನೆಯನ್ನು ನೋಡದೆ ತಿಂಗಳುಗಳೇ ಕಳೆದಿದೆ. ಹಾಗಿದ್ದರೂ ಅವರಿಗೆ ಪಿಪಿಇ ಕಿಟ್‌ಗಳಿಲ್ಲ, ಇನ್ಸೆಂಟೀವ್‌ಗಳಿಲ್ಲ, ಉದ್ಯೋಗಕ್ಕೆ ಖಾತರಿಯೂ ಇಲ್ಲ, ಎಂದಿನಂತೆ ಮಾಮೂಲಿ ತಿಂಗಳ ಸಂಬಳವನ್ನೇ ನಂಬಿ ಬದುಕು ಸಾಗಿಸುತ್ತಿದ್ದಾರೆ.

ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಯೋಜನೆ ಅಡಿಯಲ್ಲಿ ನರ್ಸ್‌ಗಳು , ವೈದ್ಯರು, ಆಶಾ ಕಾರ್ಯಕರ್ತೆಯರು, ಆಂಬ್ಯುಲೆನ್ಸ್ ಪೈಲಟ್‌ಗಳು ಬರುತ್ತಾರೆ.

ವಿಶ್ವ ದಾದಿಯರ ದಿನ: ಕೇವಲ ಕೊರೊನಾ ಯೋಧರು ಎಂದು ಕರೆದರೆ ಸಾಕೇ?ವಿಶ್ವ ದಾದಿಯರ ದಿನ: ಕೇವಲ ಕೊರೊನಾ ಯೋಧರು ಎಂದು ಕರೆದರೆ ಸಾಕೇ?

ಆರೋಗ್ಯ ಇಲಾಖೆಯಡಿಯಲ್ಲಿ ಕೇಂದ್ರ ಸರ್ಕಾರದ ಯೋಜನೆ ಯಾದ NRHM ಯೋಜನೆಯಲ್ಲಿ ಕಿರಿಯ ಆರೋಗ್ಯ ಸಹಾಯಕಿ ಸುಮಾರು 3000 ಸಾವಿರ ಮಹಿಳೆಯರು ದುಡಿಯುತ್ತಿದ್ದಾರೆ .

ಬೇಸರ ಇರೋದು ಕೇಂದ್ರ ಸರ್ಕಾರ ಕರೋನಾ ತಡೆಯ ಮುಂಜಾಗ್ರತೆ ವಿಚಾರ ಬಂದಕೂಡಲೇ ಖಾಯಂ ಆಗಿರುವ ವೈದ್ಯ ರಿಗೆ ಮತ್ತು ನರ್ಸ್ ಗಳಿಗೆ ಮತ್ತಿತರಿಗೆ ದಿನಕ್ಕೆ 100-300 ರೂಗಳ ಪ್ರೋತ್ಸಾಹ ಧನ ಕೊಡಬೇಕೆಂಬ ಸುತ್ತೋಲೆ ಬಂದಿದೆ ರಾಷ್ಟ್ರೀಯ ವಿಪತ್ತು ಅಂತ ಘೋಷಣೆ ಮಾಡಿದ ಮೇಲೆ ಕನಿಷ್ಠ ಇವರಿಗೆ ಕರೋನಾ ಕೆಲಸ ಮಾಡಲು ಮೂಲಬೊತ ಸೌಲಭ್ಯ ಗಳನ್ನದರೂ ಒದಗಿಸಬೇಡವೇ.

ಕರೋನಾ ತಡೆಗಟ್ಟಲು ಸಹಾಯದ ಹಣ ಹರಿದು ಬರುತ್ತಿದೆ ಈ ಹಣ ಸದ್ವಿನಿಯೋಗ ಆಗಬೇಕು ಮಾತ್ರವಲ್ಲದೆ ಈ ಕಾರ್ಯಕ್ರಮ ದಲ್ಲಿ ತೊಡಗಿರುವವರಿಗೆ ಈಗಿರುವ ವೇತನದಷ್ಟೇ ಹೆಚ್ಚವರಿ(ಡಬಲ್) ವೇತನ ಕೊಡಬೇಕು.

ಆರೋಗ್ಯ ವಿಮೆ ಯನ್ನು ಎಲ್ಲಾ ಉದ್ಯೋಗಸ್ಥ ರಿಗೊ ವಿಸ್ತರಿಸಬೇಕು. ಒಳ್ಳೆಯ ಗುಣಮಟ್ಟದ ಮಾಸ್ಕ್, ಮತ್ತು ಪಿಪಿಇ ಕಿಟ್ ಗಳನ್ನು ಕೊಡಬೇಕು. ಅವರ ಕೆಲಸಕ್ಕೆ ಭದ್ರತೆ ಮತ್ತು ರಕ್ಷಣೆ ಒದಗಿಸಬೇಕು.ಅಗತ್ಯ ವಾಹನ ಸೌಲಭ್ಯ, ಮತ್ತು ಊಟವನ್ನು ಒದಗಿಸಬೇಕು.

ಕೊರೊನಾ ವಾರಿಯರ್ಸ್ ಪರಿಸ್ಥಿತಿ ಹೇಗಿದೆ ಗೊತ್ತಾ?

ಕೊರೊನಾ ವಾರಿಯರ್ಸ್ ಪರಿಸ್ಥಿತಿ ಹೇಗಿದೆ ಗೊತ್ತಾ?

ಕರೋನಾ ನ ತಡೆಗಟ್ಟಲು ಇವರಿಗೆ ನಿಯಮದಂತೆ 5000 ಜನಸಂಖ್ಯೆ ಗೆ ಒಬ್ಬರು ಇರಬೇಕು ಆದರೆ ಇಂದು ಇವರು 5000 to 10000 ಜನರಿಗೆ ಒಬ್ಬರೇ ದುಡಿಯುವ ಸ್ಥಿತಿಯಿದೆ ,ದಿನದ 24ಗಂಟೆಯೂ ಇವರು ಕಣ್ಗಾವಾಲಾಗಿರಬೇಕು,ಇವರು ಮುಖ್ಯ ವಾಗಿ ಗರ್ಭಿಣಿ- ಬಾಣಂತಿಯ ರಿಗೆ ಗಮನ ಕೊಡಬೇಕು ಪ್ರತಿನಿತ್ಯ ಬೆಳಿಗ್ಗೆ 9ರಿಂದ 4-30 ತನಕ ಕ್ಷೇತ್ರ ಕಾರ್ಯ ನಡೆಸಿ ನಂತರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ರಬೇಕು ,ರಾತ್ರಿ ಹಗಲಿನ ವ್ಯತ್ಯಾಸ ವಿಲ್ಲ,PHCಗಳ ಬಳಿಯೇ ಉಳಿಯಲು ಕೆಲವರಿಗೆ ವಸತಿಗೃಹಗಳನ್ನು ಕೊಡಲಾಗಿದೆ ಆದರೆ ಆ ವಸತಿಗೃಹಗಳಲ್ಲಿ ನೀರೆ ಬರುವುದಿಲ್ಲ ,ಸ್ವಚ್ಛ ತೆ ಇಲ್ಲದಿರುವ ಕಾರಣ ಅಲ್ಲಿ ಭಯದಲ್ಲಿಯೇ ಉಳಿಯಬೇಕಾಗಿದೆ,ಇವರು ನೇರವಾಗಿ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮಗಳ ಅರಿವು ಮೂಡಿಸುವ ಕೆಸಗಳು,ಕೆಲವಡೆ ಕ್ವಾರಂಟೈನ್ ಗೆ ಒಳಪಡಿಸುವ ಕೆಲಸಗಳನ್ನು ಮಾಡಬೇಕು
ಇಷ್ಟೆಲ್ಲಾ ದುಡುದರೂ ಇವರು ಒಂದು ವರ್ಷದ ಗುತ್ತಿಗೆಯ ಮೇಲೇ ಆಯ್ಕೆ ಮಾಡಿ ಇವರಿಗೆ 11500ರು ಮಾತ್ರ P.F ಹೋಗಿ 10500ರೂ ಬರುತ್ತೆ ಆದರೆ ಇವರಿಗೆ ಒಂದೇ ಲೇಯರ್ ಇರುವ ಮಾಸ್ಕ್ ಗಳನ್ನು ಕೊಡಲಾಗಿದೆ

ಕೊರೊನಾ ವಾರಿಯರ್ಸ್ ವೇತನ ಎಷ್ಟು ಗೊತ್ತೇ?

ಕೊರೊನಾ ವಾರಿಯರ್ಸ್ ವೇತನ ಎಷ್ಟು ಗೊತ್ತೇ?

ರಾಜ್ಯದಲ್ಲಿ 435 team ಗಳು ಕರೋನಾ ನಿಯಂತ್ರಣ ಕ್ಕೆ ಕೆಲಸ ನಿರ್ವಹಿಸುತ್ತಿವೆ ಅದರಲ್ಲಿ ಈ ವೈದ್ಯರು ಪ್ರಮುಖ ಪಾತ್ರವಿರುತ್ತದೆ ಇವರು ಒಂದು ದಿನಕ್ಕೆ 520 ಜನರನ್ನು ಸ್ಕ್ಯಾನ್ ಮಾಡಬೇಕು ಅದು ಎಂಥಹುದೇ ಪ್ರದೇಶ ವಾಗಿದ್ದರೂ ಹೋಗಬೇಕು ,ಕೆಲಸಕ್ಕೆ ಸುತ್ತಾಡಲು ಸರ್ಕಾರಿ ವಾಹನವಿಲ್ಲ ಸ್ವಂತ ವಾಹನವನ್ನು ಬಳಸಬೇಕು ,ಇವರಿಗೂ ಮಾಸ್ಕ್ ಕೊಟ್ಟಿಲ್ಲ,ಆದರೆ ಜನಪ್ರತಿನಿದಿಗಳ ವಿಪರೀತ ಒತ್ತಡ ,ಪೀಲ್ಡ್ ಗೆ ಬರದೆಯಿರುವ ಮೇಲಾಧಿಕಾರಿಗಳು ಮೊಬೈಲ್ ನಲ್ಲಿ ಇವರನ್ನು ಫಾಲೋ ಮಾಡುವ ಕೆಟ್ಟ ಗುಣ ಬೆಳಸಿ ಕೊಂಡಿದ್ದಾರೆ ಮಾತ್ರವಲ್ಲದೆ ಎಲ್ಲಿ ಕೆಲಸದ ಕರೆ ಬಂದರೂ ಹೋಗುತ್ತಿರಬೇಕು ಇನ್ನು ಇವರ 14ವರ್ಷದ ಸೇವೆಗೆ ವೇತನ ಎಷ್ಟು ಅಂತೀರಾ ಕೇವಲ 19400 ರೂಗಳು ಮಾತ್ರ.

ಪಿಪಿಇ ಕಿಟ್, ಸ್ಯಾನಿಟೈಸರ್ ವ್ಯವಸ್ಥೆ ಇಲ್ಲ

ಪಿಪಿಇ ಕಿಟ್, ಸ್ಯಾನಿಟೈಸರ್ ವ್ಯವಸ್ಥೆ ಇಲ್ಲ

ರೋಗಿಗಳು ಜ್ವರ, ಹೊಟ್ಟೆನೋವು ಹೆಸರಿನಲ್ಲಿ ಆಂಬ್ಯುಲೆನ್ಸ್‌ನಲ್ಲಿ ಆಗಮಿಸುತ್ತಾರೆ. ಪ್ರತಿ ಆಂಬ್ಯುಲೆನ್ಸ್ನಲ್ಲಿ ಬಿಎಸ್‌ಇ ಓದಿದ ನರ್ಸ್ ಇದ್ದೇ ಇರುತ್ತಾರೆ. ರೋಗಿ ಆಸ್ಪತ್ರೆಗೆ ತೆರಳಿದ ಬಳಿಕ ಅವರಿಗೆ ಕೊವಿಡ್ 19 ಇರುವುದು ತಿಳಿಯುತ್ತದೆ. ಆದರೆ ನರ್ಸ್ ಹಾಗೂ ಆಂಬ್ಯುಲೆನ್ಸ್ ಸಿಬ್ಬಂದಿಗೆ ಕೇವಲ 100 ಎಂಎಲ್ ಸ್ಯಾನಿಟೈಜರ್ ಬಾಟಲಿ ನೀಡಲಾಗುತ್ತದೆ ಅದನ್ನು 20 ಲೀಟರ್‌ ನೀರಿಗೆ ಬೆರೆಸಿ ಬಳಿಕ ಬಳಕೆ ಮಾಡುವುದರಿಂದ ಅವರ ಆರೋಗ್ಯಕ್ಕೂ ಯಾವುದೇ ಖಾತರಿ ಇರುವುದಿಲ್ಲ.

ರಾಜ್ಯದಲ್ಲಿ 435 ಟೀಂಗಳಿವೆ

ರಾಜ್ಯದಲ್ಲಿ 435 ಟೀಂಗಳಿವೆ

ಕೊರೊನಾ ವಾರಿಯರ್ಸ್ ರೆಡ್, ಗ್ರೀನ್ ಝೋನ್ ಎಲ್ಲೆಡೆ ಇದ್ದಾರೆ. ಇವರು ಕೊವಿಡ್ ವಿರುದ್ಧ ಫ್ರಂಟ್ ಲೈನ್‌ ಅಲ್ಲಿ ಕೆಲಸ ಮಾಡುತ್ತಿದ್ದಾರೆ. ಒಂದೊಂದು ತಂಡವು ಸ್ಕ್ರೀನಿಂಗ್ ಸೇರಿದಂತೆ ನಿತ್ಯ ಸರಿ ಸುಮಾರು 520 ಜನರನ್ನು ಪರೀಕ್ಷೆಗೆ ಒಳಪಡಿಸುತ್ತಾರೆ. ಒಟ್ಟಿನಲ್ಲಿ ಸುಮಾರು 250000 ಮಂದಿಯನ್ನು ಅವರು ರೀಚ್ ಆಗುತ್ತಾರೆ.

ಕೇಂದ್ರ ಸರ್ಕಾರಿ ಕಾಯಂಯೇತರ ನೌಕರರ ಒಕ್ಕೂಟ ಪ್ರತಿಭಟನೆ

ಕೇಂದ್ರ ಸರ್ಕಾರಿ ಕಾಯಂಯೇತರ ನೌಕರರ ಒಕ್ಕೂಟ ಪ್ರತಿಭಟನೆ

ಕೇಂದ್ರ ಸರ್ಕಾರ ಕಾಯಂಯೇತರ ನೌಕರರ ಒಕ್ಕೂಟವು ಮೇ 14ರಂದು ಪ್ರತಿಭಟನೆ ನಡೆಸುತ್ತಿದ್ದಾರೆ. ಕಪ್ಪು ಪಟ್ಟಿ ಧರಿಸಿ ಕೆಲವರು ಕೆಲಸಕ್ಕೆ ಹಾಜರಾಗುತ್ತಿದ್ದಾರೆ. ಇನ್ನೂ ಕೆಲವರು ತಹಸೀಲ್ದಾರ್ ಅವರ ಬಳಿ ಮನವಿ ಸಲ್ಲಿಸಲಿದ್ದಾರೆ.

ಎಲ್ಲಾ ಆಸ್ಪತ್ರೆ ನರ್ಸ್‌ಗಳಿಗೆ ಪಿಪಿಇ ಕಿಟ್‌ಗಳನ್ನು ಕೊಡಬೇಕು. ಕ್ವಾಲಿಟಿ ಇರಬೇಕು. ಪ್ರತಿ ವಾರ ಕೊವಿಡ್ ಟೆಸ್ಟ್ ಮಾಡಿಸಬೇಕು. ಯಾವುದೇ ರೀತಿಯಲ್ಲಿ ಮರಣ ಹೊಂದಿದರೂ ಕೂಡ 50 ಲಕ್ಷ ವಿಮೆ ನೀಡಬೇಕು. ಕೊವಿಡ್ ಸಮಸ್ಯೆ ಇರುವವರಿಗೆ ಪ್ರತಿ ತಿಂಗಳು 25 ಸಾವಿರದಂತೆ ಇನ್ಸೆಂಟೀವ್ ನೀಡಬೇಕು. ಯಾರಿಗಾದರೂ ಕೊರೊನಾ ಸೋಂಕಿದೆ ಎಂದು ತಿಳಿದರೆ 5 ಲಕ್ಷ ರೂ ಪರಿಹಾರ ನೀಡಬೇಕು. ಪಡಿತರ ಉಚಿತ ನೀಡಬೇಕು ಎಂದು ಒತ್ತಾಯಿಸಲಾಗುತ್ತದೆ.

English summary
Every Indian giving their thumbs-up to the Corona warriors, but there are lot of difference between their salary and services. Government Is Not Recognizing There work.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X