ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದೇ ಮೊದಲ ಬಾರಿ, ಪೆಟ್ರೋಲ್‌ಗಿಂತಲೂ ಡೀಸೆಲ್‌ ದುಬಾರಿ!

|
Google Oneindia Kannada News

ಭುವನೇಶ್ವರ್‌, ಅಕ್ಟೋಬರ್ 22: ಬಹುಶಃ ಇದೇ ಮೊದಲ ಬಾರಿ ಪೆಟ್ರೋಲ್‌ಗಿಂತಲೂ ಡೀಸೆಲ್‌ ದುಬಾರಿಯಾಗಿದೆ. ಆದರೆ ಹೀಗೆ ಎಲ್ಲೆಡೆ ಆಗಿಲ್ಲ. ಆಗಿರುವುದು ಒಡಿಶಾ ರಾಜ್ಯದಲ್ಲಿ ಮಾತ್ರ.

ಒಡಿಶಾ ರಾಜ್ಯದಲ್ಲಿ ಪೆಟ್ರೋಲ್‌ಗಿಂತಲೂ ಡೀಸೆಲ್‌ 12 ಪೈಸೆ ತುಟ್ಟಿಯಾಗಿದೆ. ಇದಕ್ಕೆ ಕಾರಣ ರಾಜ್ಯ ಮತ್ತು ಕೇಂದ್ರಸರ್ಕಾರಗಳ ನೀತಿಗಳು.

ಒಡಿಶಾ ರಾಜ್ಯದಲ್ಲಿ ಪೆಟ್ರೋಲ್‌ ಲೀಟರ್‌ಗೆ 80.57 ಇದ್ದರೆ ಡೀಸೆಲ್‌ಗೆ 80.69 ರೂಪಾಯಿ ಇದೆ. ಡೀಸೆಲ್‌ ಬೆಲೆ ಹೆಚ್ಚಾಗಿರುವ ಕಾರಣ ಒಡಿಶಾದಲ್ಲಿ ಡೀಸೆಲ್‌ ಖರೀದಿಸುವವರ ಸಂಖ್ಯೆಯೂ ಕಡಿಮೆ ಆಗಿದೆಯಂತೆ.

ಸತತವಾಗಿ ನಾಲ್ಕನೇ ದಿನವೂ ಪೆಟ್ರೋಲ್, ಡೀಸೆಲ್ ದರ ಇಳಿಕೆ ಸತತವಾಗಿ ನಾಲ್ಕನೇ ದಿನವೂ ಪೆಟ್ರೋಲ್, ಡೀಸೆಲ್ ದರ ಇಳಿಕೆ

ಡೀಸೆಲ್‌ ಬೆಲೆ ಏರಿಕೆ ಆಗಿರುವ ಕಾರಣ ಅಗತ್ಯ ವಸ್ತುಗಳ ಬೆಲೆಯೂ ಏರಿಕೆ ಆಗುವ ಎಲ್ಲ ಸಾಧ್ಯತೆಯೂ ಇದೆ. ಇಂಧನ ಬೆಲೆಯ ಈ ಸ್ಥಿತಿಗೆ ಒಡಿಶಾದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಒಡಿಶಾದ ಈ ಸ್ಥಿತಿಯ ಬಗ್ಗೆ ಆಡಳಿತಾರೂಢ ಬಿಜು ಜನತಾದಳ ಪಕ್ಷ ಹಾಗೂ ವಿರೋಧ ಪಕ್ಷ ಕಾಂಗ್ರೆಸ್‌ ಕೇಂದ್ರವನ್ನು ದೂರಿದರೆ. ಬಿಜೆಪಿಯು ಆಡಿತಾರೂಢ ಬಿಜು ಜನತಾದಳ ಪಕ್ಷವನ್ನು ದೂರುತ್ತಿದೆ.

ಪೆಟ್ರೋಲ್-ಡೀಸೆಲ್‌ ಮೇಲೆ ಒಂದೇ ವ್ಯಾಟ್‌

ಪೆಟ್ರೋಲ್-ಡೀಸೆಲ್‌ ಮೇಲೆ ಒಂದೇ ವ್ಯಾಟ್‌

ದೇಶದ ಇತರ ರಾಜ್ಯಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್‌ ಮೇಲೆ ಬೇರೆ-ಬೇರೆ ವ್ಯಾಟ್‌ ಹೇರಲಾಗಿದೆ. ಆದರೆ ಒಡಿಶಾದಲ್ಲಿ ಡೀಸೆಲ್ ಹಾಗೂ ಪೆಟ್ರೋಲ್‌ ಮೇಲೆ ಒಟ್ಟಿಗೆ 24 ರೂಪಾಯಿಯ ಒಂದೇ ಸಮನಾದ ವ್ಯಾಟ್‌ ವಿಧಿಸಲಾಗಿದೆ.

ರುಪಾಯಿಯಲ್ಲಿ ಹಣ ಪಾವತಿ ಸ್ವೀಕರಿಸಲು ತೈಲ ಕಂಪನಿಗಳಿಗೆ ಮೋದಿ ಮನವಿ ರುಪಾಯಿಯಲ್ಲಿ ಹಣ ಪಾವತಿ ಸ್ವೀಕರಿಸಲು ತೈಲ ಕಂಪನಿಗಳಿಗೆ ಮೋದಿ ಮನವಿ

ಕೇಂದ್ರವು ಇತ್ತೀಚೆಗಷ್ಟೆ ಅಬಕಾರಿ ಸುಂಕು ಇಳಿಸಿತ್ತು

ಕೇಂದ್ರವು ಇತ್ತೀಚೆಗಷ್ಟೆ ಅಬಕಾರಿ ಸುಂಕು ಇಳಿಸಿತ್ತು

ಕೇಂದ್ರವು ಇತ್ತೀಚೆಗಷ್ಟೆ ಪೆಟ್ರೋಲ್ ಹಾಗೂ ಡೀಸೆಲ್‌ ಮೇಲಿನ ಅಬಕಾರಿ ಸಂಕುವನ್ನು ಇಳಿಸಿ 2.50 ರೂಪಾಯಿಗಳು ಕಡಿಮೆ ಆಗುವಂತೆ ಮಾಡಿತ್ತು. ಇದರಲ್ಲಿ ತೈಲ ಸಂಸ್ಥೆಗಳು ದರ ಕಡಿಮೆ ಮಾಡಿದ್ದೂ ಸಹ ಸೇರಿಕೆಯಾಗಿತ್ತು. ಒಡಿಶಾ ರಾಜ್ಯದಲ್ಲಿ ಏಕರೂಪ ವ್ಯಾಟ್ ವಿಧಿಸಿರುವ ಕಾರಣ ಸತತ ನಾಲ್ಕು ದಿನಗಳಿಂದ ಪೆಟ್ರೋಲ್ ಬೆಲೆಯಲ್ಲಿ ಆದ ಇಳಿಕೆಯಿಂದಾಗಿ ಡೀಸೆಲ್‌ ಬೆಲೆ ಪೆಟ್ರೋಲ್‌ಗಿಂತ ದುಬಾರಿ ಆಗಿಬಿಟ್ಟಿದೆ.

ಇರಾನ್‌ನಿಂದ ತೈಲ ಖರೀದಿಸಿದರೆ ನೆಟ್ಟಗಿರೊಲ್ಲ: ಟ್ರಂಪ್ ಬೆದರಿಕೆ, ಭಾರತಕ್ಕೂ ಸಂಕಷ್ಟ ಇರಾನ್‌ನಿಂದ ತೈಲ ಖರೀದಿಸಿದರೆ ನೆಟ್ಟಗಿರೊಲ್ಲ: ಟ್ರಂಪ್ ಬೆದರಿಕೆ, ಭಾರತಕ್ಕೂ ಸಂಕಷ್ಟ

'ಒಡಿಶಾ ಸ್ಥಿತಿಗೆ ಕೇಂದ್ರವೇ ಕಾರಣ'

'ಒಡಿಶಾ ಸ್ಥಿತಿಗೆ ಕೇಂದ್ರವೇ ಕಾರಣ'

ಪೆಟ್ರೋಲ್‌ಗಿಂತಲೂ ಡೀಸೆಲ್ ಬೆಲೆ ಏರಿಕೆ ಆಗಿರುವ ಬಗ್ಗೆ ಒಡಿಶಾದ ಹಣಕಾಸು ಸಚಿವ ಎಸ್‌.ಬಿ.ಬೆಹ್ರಾ ಅವರು ಕೇಂದ್ರವನ್ನು ದೂಷಿ ಮಾಡಿದ್ದು. ಕೇಂದ್ರ ಸರ್ಕಾರ ಹಾಗೂ ತೈಲ ಸಂಸ್ಥೆಗಳ ನಡುವೆ ಸರಿಯಾದ ಸಂವಹನ ಇಲ್ಲದೇ ಇರುವ ಕಾರಣಕ್ಕೆ ಹೀಗಾಗಿದೆ ಎಂದಿದ್ದಾರೆ.

ಕೇಂದ್ರ ಇಂಧನ ಸಚಿವ ಒಡಿಶಾದವರು

ಕೇಂದ್ರ ಇಂಧನ ಸಚಿವ ಒಡಿಶಾದವರು

ಕೇಂದ್ರದ ಇಂಧನ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಸಹ ಒಡಿಶಾ ರಾಜ್ಯದವರೇ ಆಗಿದ್ದು, ಒಡಿಶಾ ಸರ್ಕಾರವು ವ್ಯಾಟ್‌ ಅನ್ನು ಕಡಿಮೆ ಮಾಡಿ ರಾಜ್ಯದ ಜನಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ.

English summary
In Odisha state Diesel price is higher than Petrol price. Petrol is 80.57 rs per liter. Diesel is 80.69 rs per liter. Diesel costing 12 paise higher than petrol.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X