ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಟ್ರೋಲ್‌ ಮತ್ತೆ ಅಗ್ಗ, ಡಿಸೇಲ್‌ಗೂ ಇಳಿಕೆ ಭಾಗ್ಯ

|
Google Oneindia Kannada News

ನವದೆಹಲಿ,ಸೆ. 30 : ಕೇಂದ್ರ ಸರ್ಕಾರ ಜನರಿಗೆ ಈಗಲೇ ದೀಪಾವಳಿ ಕೊಡುಗೆ ನೀಡಿದೆ. ಲೀಟರ್‌ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯನ್ನು ತಲಾ 1 ರೂ.ನಷ್ಟು ಇಳಿಕೆ ಮಾಡುವ ನಿರೀಕ್ಷೆಯಿದ್ದು ಜನರಿಗೆ ಹಬ್ಬದ ಗಿಫ್ಟ್‌ ದೊರೆತಂತಾಗಿದೆ.

ಐದು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಡಿಸೇಲ್ ಬೆಲೆ ಇಳಿಕೆಯಾಗುವ ಸಾಧ್ಯತೆಯಿದೆ. ಪೆಟ್ರೋಲ್ 1.75 ರೂ. ಮತ್ತು ಡಿಸೇಲ್ ಬೆಲೆಯಲ್ಲಿ 1 ರೂ. ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಸರ್ಕಾರದ ಮೂಲಗಳು ಹೇಳಿವೆ.[ಕೇವಲ ಹಣ ನೀಡಿದರೆ ಪೆಟ್ರೋಲ್‌ ಸಿಗದು!]

petrol

ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಯಲ್ಲಿ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ದೇಶದ ತೈಲ ಬೆಲೆಯಲ್ಲೂ ಇಳಿಕೆ ನಿರೀಕ್ಷಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಈ ಬಗ್ಗೆ ಅಧಿಕೃತ ಘೋಷಣೆ ಮಾಡುವುದೊಂದೆ ಬಾಕಿ ಇದೆ.

ಬೆಂಗಳೂರಿನಲ್ಲಿ ಬೆಲೆ ಎಷ್ಟಾಗುತ್ತೆ?
ಸದ್ಯ ಬೆಂಗಳೂರಿನಲ್ಲಿ ಲೀಟರ್ ಪಟ್ರೋಲ್‌ಗೆ 75.13 ರೂಪಾಯಿಗಳಿದೆ. ಅಂತೆಯೇ ಡಿಸೇಲ್‌ಗೆ 64.07 ರೂಪಾಯಿ ನೀಡಬೇಕಿದೆ. ಪೆಟ್ರೊಲ್‌ 1.75 ರೂ ಇಳಿದರೆ 73.38 ರೂ ಆಗುತ್ತದೆ. ಅಂತೆಯೇ ಡಿಸೇಲ್‌ 63 ರೂಪಾಯಿಗೆ ಲಭ್ಯವಾಗುತ್ತದೆ.

ಕಳೆದ ಐದು ವರ್ಷದಲ್ಲಿ ಇದೆ ಮೊದಲ ಬಾರಿಗೆ ಡಿಸೇಲ್‌ ಅಗ್ಗವಾಗುತ್ತಿದೆ. 2014ರ ಆಗಸ್ಟ್‌ ತಿಂಗಳೊಂದರಲ್ಲೇ ಪೆಟ್ರೋಲ್‌ ಬೆಲೆಯನ್ನು ಮೂರು ಸಾರಿ ಇಳಿಸಲಾಗಿತ್ತು. ಈಗ ಮತ್ತೆ ಇಳಿಕೆ ಕಾಣುತ್ತಿರುವುದರಿಂದ ಕಳೆದ ಮಾರ್ಚ್ ವೇಳೆ 80 ರೂ. ತಲುಪಿದ್ದ ಪೆಟ್ರೋಲ್‌ 7 ರೂ. ಅಗ್ಗವಾದಂತೆ ಆಗುತ್ತದೆ. ಕೊನೆಯದಾಗಿ ಡಿಸೇಲ್ ಬೆಲೆಯನ್ನು ಜನವರಿ 29, 2009ರಲ್ಲಿ ಇಳಿಸಲಾಗಿತ್ತು. ಅಲ್ಲಿಂದ ಏರಿಕೆ ಹಾದಿ ಹಿಡಿದಿದ್ದ ಡಿಸೇಲ್‌ ಇದೀಗ ಕೊಂಚ ಅಗ್ಗವಾಗುತ್ತಿದೆ.(ಪೆಟ್ರೋಲ್ 1.82 ರೂ. ಇಳಿಕೆ, ಡೀಸೆಲ್ ದರ ಏರಿಕೆ)

ಇಳಿಕೆಗೇನು ಕಾರಣ?
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿದಿರುವುದು, ಡಾಲರ್‌ ಎದುರು ಸ್ಥಿರತೆ ಕಾಯ್ದುಕೊಂಡ ರೂಪಾಯಿ, ಹೆಚ್ಚಿದ ಜಿಡಿಪಿ ದರ ಎಲ್ಲವೂ ತೈಲ ಬೆಲೆ ಇಳಿಕೆ ಮೇಲೆ ಪರಿಣಾಮ ಬೀರಿದೆ ಎಂದು ಹೇಳಬಹುದು.

English summary
Diesel price is likely to be cut by about Re 1 per litre, the first reduction in rates in over five years, while petrol price may be slashed by Rs 1.75. State-owned oil firms are likely to announce reduction in rates, made possible because of softening in international oil rates, this evening, government and industry sources said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X