ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ಯಾಗೋರ್ ಖುರ್ಚಿ ಮೇಲೆ ಕುಳಿತಿರಲಿಲ್ಲ: ಅಮಿತ್ ಶಾ ಸ್ಪಷ್ಟನೆ

|
Google Oneindia Kannada News

ನವದೆಹಲಿ, ಫೆಬ್ರವರಿ 9: ಕಳೆದ ತಿಂಗಳು ಪಶ್ಚಿಮ ಬಂಗಾಳದ ಶಾಂತಿನಿಕೇತನಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ರವೀಂದ್ರನಾಥ್ ಟ್ಯಾಗೋರ್ ಅವರ ಖುರ್ಚಿಯ ಮೇಲೆ ತಾವು ಕುಳಿತುಕೊಂಡಿದ್ದಾಗಿ ಕಾಂಗ್ರೆಸ್ ಮಾಡಿರುವ ಆರೋಪವನ್ನು ಗೃಹ ಸಚಿವ ಅಮಿತ್ ಶಾ ತಳ್ಳಿಹಾಕಿದ್ದಾರೆ.

ಜನವರಿ 20ರಂದು ವಿಶ್ವಭಾರತಿಗೆ ತೆರಳಿದ್ದ ಅಮಿತ್ ಶಾ ಅವರು ಟ್ಯಾಗೋರ್ ಅವರಿಗೆ ಸೇರಿದ್ದ ಖುರ್ಚಿಯ ಮೇಲೆ ಕೂರುವ ಮೂಲಕ ಅವರನ್ನು ಅವಮಾನಿಸಿದ್ದಾರೆ ಎಂದು ಲೋಕಸಭೆಯಲ್ಲಿನ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧುರಿ ಆರೋಪಿಸಿದ್ದರು. ಇದು ತಪ್ಪು ಮಾಹಿತಿ. ಟ್ಯಾಗೋರ್ ಅವರೇ ಸ್ಥಾಪಿಸಿದ್ದ ವಿಶ್ವವಿದ್ಯಾಲಯದ ಉಪ ಕುಲಪತಿ ಈ ಬಗ್ಗ ಖಾತರಿಪಡಿಸಿದ್ದಾರೆ ಎಂದು ಅಮಿತ್ ಶಾ ಹೇಳಿದ್ದಾರೆ.

ಯಾವ ಷಡ್ಯಂತ್ರದಿಂದಲೂ ದೇಶದ ಏಕತೆಗೆ ಧಕ್ಕೆಯಾಗದು: ಅಮಿತ್ ಶಾ ಯಾವ ಷಡ್ಯಂತ್ರದಿಂದಲೂ ದೇಶದ ಏಕತೆಗೆ ಧಕ್ಕೆಯಾಗದು: ಅಮಿತ್ ಶಾ

'ಶಾಂತಿನಿಕೇತನಕ್ಕೆ ನನ್ನ ಭೇಟಿಯ ಸಂದರ್ಭದಲ್ಲಿ ನಾನು ರವೀಂದ್ರನಾಥ್ ಟ್ಯಾಗೋರ್ ಅವರ ಖುರ್ಚಿಯ ಮೇಲೆ ಕುಳಿತಿದ್ದುದಾಗಿ ಅಧೀರ್ ರಂಜನ್ ಚೌಧುರಿ ಅವರು ನಿನ್ನೆ ಆರೋಪಿಸಿದ್ದಾರೆ. ವಿಶ್ವ ಭಾರತಿಯ ಉಪ ಕುಲಪತಿಯ ಪತ್ರ ನನ್ನ ಬಳಿ ಇದೆ. ಅಲ್ಲಿಂದ ಅಂತಹ ಘಟನೆ ನಡೆದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ನಾನು ಕಿಟಕಿ ಸಮೀಪದಲ್ಲಿ ಕುಳಿತಿದ್ದೆ. ಅಲ್ಲಿ ಯಾರು ಬೇಕಾದರೂ ಕೂರಬಹುದು' ಎಂದು ಅವರು ತಿಳಿಸಿದ್ದಾರೆ.

'ಮಾಜಿ ರಾಷ್ಟ್ರಪತಿಗಳಾದ ಪ್ರತಿಭಾ ಪಾಟೀಲ್, ಪ್ರಣಬ್ ಮುಖರ್ಜಿ ಮತ್ತು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಕೂಡ ಅದೇ ಜಾಗದಲ್ಲಿ ಕುಳಿತಿದ್ದರು. ನಾನು ಟ್ಯಾಗೋರ್ ಖುರ್ಚಿಯ ಮೇಲೆ ಕುಳಿತಿರಲಿಲ್ಲ. ಆದರೆ ಪಂಡಿತ್ ನೆಹರೂ ಮತ್ತು ರಾಜೀವ್ ಗಾಂಧಿ ಅವರು ಟ್ಯಾಗೋರ್ ಖುರ್ಚಿಯ ಮೇಲೆ ಕುಳಿತ ಫೋಟೊಗಳಿವೆ' ಎನ್ನುವ ಮೂಲಕ ತಮ್ಮ ಮೇಲೆ ಮಾಡಿರುವ ಆರೋಪದ ಕೃತ್ಯವನ್ನು ವಾಸ್ತವವಾಗಿ ಕಾಂಗ್ರೆಸ್ ನಾಯಕರೇ ಮಾಡಿದ್ದರು ಎಂದು ತಿರುಗೇಟು ನೀಡಿದ್ದಾರೆ.

Didnt Sit On Rabindranath Tagores Seat: Amit Shah Denies Allegations

ರಾಜೀವ್ ಗಾಂಧಿ ಅವರು ಟ್ಯಾಗೋರ್ ಅವರ ಸೋಫಾ ಮೇಲೆ ಕುಳಿತು ಟೀ ಕುಡಿದಿದ್ದರು ಎಂದು ಫೋಟೊಗಳನ್ನು ಬಿಜೆಪಿ ಹಂಚಿಕೊಂಡಿದೆ.

English summary
Home Minister Amit Shah on Tuesday denied allegation by Congress leader Adhir Ranjan Chowdhury that he was sitting on Tagore's deat during a visit to Visva Bharti.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X