• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಲ್ಯ ಕೃಪೆಗೆ ಪಾತ್ರರಾಗಿದ್ದರೆ ಸೋನಿಯಾ, ಫಾರೂಕ್?

By Prasad
|

ಬೆಂಗಳೂರು, ಅಕ್ಟೋಬರ್ 06 : ಒಂದಾನೊಂದು ಕಾಲದಲ್ಲಿ ನೆಲದ ಮೇಲೆ ನಿಲ್ಲದೆ ಆಕಾಶದಲ್ಲಿ ಹಾರಾಡುತ್ತ ಮೆರೆದಾಡುತ್ತಿದ್ದ ಸಮಯದಲ್ಲಿ, ಭಾರತದಿಂದ ಪರಾರಿಯಾಗಿರುವ ಡಾ. ವಿಜಯ್ ಮಲ್ಯ ಅವರಿಂದ ಸೋನಿಯಾ ಗಾಂಧಿ ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲ ಸಾಕಷ್ಟು ಕೃಪೆಗೆ ಪಾತ್ರರಾಗಿದ್ದರೆ?

ಮಲ್ಯರಿಂದ ಅಕ್ರಮವಾಗಿ ಸಾಗರೋತ್ತರ ಖಾತೆಗೆ ಹಣ ವರ್ಗಾವಣೆ ಮೊತ್ತ ಬಹಿರಂಗ

ಸೀರಿಯಸ್ ಫ್ರಾಡ್ ಇನ್ವೆಸ್ಟಿಗೇಷನ್ ಆಫೀಸ್ (SFIO) 38 ದಿನಗಳ ಹಿಂದೆಯೇ ಸಲ್ಲಿಸಿರುವ ವರದಿಯಲ್ಲಿ ಈ ಸಂಗತಿ ಬಯಲಾಗಿದ್ದು, ಈ ವರದಿಯನ್ನು ಇಟ್ಟುಕೊಂಡು ರಿಪಬ್ಲಿಕ್ ಟಿವಿ ಸೋನಿಯಾ ಗಾಂಧಿ ಮತ್ತು ಫಾರೂಕ್ ಅಬ್ದುಲ್ಲ ಅವರ ವಿರುದ್ಧ #MallyaTicketGate ಟ್ವಿಟ್ಟರ್ ಅಭಿಯಾನ ಆರಂಭಿಸಿದೆ.

ವಿಜಯ್ ಮಲ್ಯ ಅವರ ಒಡೆತನದಲ್ಲಿದ್ದ ಕಿಂಗ್ ಫಿಷರ್ ವಿಮಾನದಲ್ಲಿ ಸೋನಿಯಾ ಗಾಂಧಿ ಮಾತ್ರವಲ್ಲ ಅವರ ಇಡೀ ಬಂಧುಬಳಗ ಸಂಚರಿಸುತ್ತಿದ್ದಾಗ, ಎಕಾನಾಮಿ ಕ್ಲಾಸ್ ಟಿಕೆಟ್ ತೆಗೆದುಕೊಂಡಿದ್ದರೂ ಅವರಿಗೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಮೊದಲ ದರ್ಜೆಯ ಸೀಟಿನಲ್ಲಿ ಪಯಣಿಸಲು ಅವಕಾಶ ಸಿಗುತ್ತಿತ್ತು.

ಕಿಂಗ್ ಫಿಷರ್ ಏರ್ ಲೈನ್ಸ್ ನ ಸೇಲ್ಸ್ ತಂಡ ವಿಜಯ್ ಆರೋರಾ ಎಂಬುವವರು ಮುಖ್ಯ ಹಣಕಾಸು ಅಧಿಕಾರಿಗೆ ಬರೆದ ಪತ್ರದಲ್ಲಿ ಈ ಸಂಗತಿ ಬಯಲಾಗಿದೆ. ಅಚ್ಚರಿಯ ಸಂಗತಿಯೆಂದರೆ, ಸ್ವತಃ ವಿಜಯ್ ಮಲ್ಯ ಅವರೇ ವೈಯಕ್ತಿಕವಾಗಿ ಈ ಸೂಚನೆಗಳನ್ನು ನೀಡಿದ್ದು.

ವಿಷಾದಕರ ಸಂಗತಿಯೆಂದರೆ, ಎರಡನೇ ಬಾರಿ ಯುಪಿಎ ಸರಕಾರ ಅಧಿಕಾರ ಚಲಾಯಿಸುತ್ತಿದ್ದಾಗ ಮತ್ತು ಹಲವಾರು ಹಗರಣಗಳಲ್ಲಿ ಮುಳುಗೇಳುತ್ತಿದ್ದಾಗ ಈ ವಿದ್ಯಮಾನಗಳು ಜರುಗಿವೆ. ಇದರ ಬಗ್ಗೆ ವಿವರಣೆ ನೀಡುವಿರಾ ಸೋನಿಯಾ ಗಾಂಧಿ ಅವರೆ ಎಂದು ಅವರನ್ನು ಪ್ರಶ್ನಿಸಲಾಗುತ್ತಿದೆ.

2008ರ ಜಮ್ಮು ಮತ್ತು ಕಾಶ್ಮೀರ ಚುನಾವಣೆಯ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲ ಅವರು ಕಿಂಗ್ ಫಿಷರ್ ಖಾಸಗಿ ವಿಮಾನದಲ್ಲಿ ಬಿಟ್ಟಿ ಹಾರಾಟ ನಡೆಸಿರುವುದು ಆ ವರದಿಯಲ್ಲಿ ಬಹಿರಂಗವಾಗಿದೆ. ಈ ಕುರಿತು ಬರೆದ ಪತ್ರದಲ್ಲಿ ಅಬ್ಬುಲ್ಲ ಅವರ ಏರ್ ಟಿಕೆಟ್ ಶುಲ್ಕವನ್ನು ಮಲ್ಯ ಅವರೇ ಭರಿಸಿದ್ದಾರೆ ಎಂದು ನಮೂದಿಸಲಾಗಿತ್ತು.

ಬ್ಯಾಂಕುಗಳಿಗೆ ಏಳು ಸಾವಿರ ಕೋಟಿಯಷ್ಟು ಪಂಗನಾಮ ಹಾಕಿ ಭಾರತದಿಂದ ಪರಾರಿಯಾಗಿರುವ ಹೆಂಡದ ದೊರೆ ವಿಜಯ್ ಮಲ್ಯ, ಕೆಲ ದಿನಗಳ ಹಿಂದೆ ಕೆಲವೇ ಕ್ಷಣಗಳ ಕಾಲ ಬ್ರಿಟಿಷ್ ಪೊಲೀಸರಿಂದ ಬಂಧಿತರಾಗಿದ್ದರು. ಮಲ್ಯನನ್ನು ತಮ್ಮ ಸುಪರ್ದಿಗೆ ಒಪ್ಪಿಸಬೇಕೆಂದು ಜಾರಿ ನಿರ್ದೇಶನಾಲಯ ಇಂಗ್ಲೆಂಡನ್ನು ಕೇಳಿಕೊಂಡಿದೆ.

ಬ್ಯಾಂಕುಗಳಿಗೆ ಏಳು ಸಾವಿರ ಕೋಟಿಯಷ್ಟು ಪಂಗನಾಮ ಹಾಕಿ ಭಾರತದಿಂದ ಪರಾರಿಯಾಗಿರುವ ಹೆಂಡದ ದೊರೆ ವಿಜಯ್ ಮಲ್ಯ, ಕೆಲ ದಿನಗಳ ಹಿಂದೆ ಕೆಲವೇ ಕ್ಷಣಗಳ ಕಾಲ ಬ್ರಿಟಿಷ್ ಪೊಲೀಸರಿಂದ ಬಂಧಿತರಾಗಿದ್ದರು. ಮಲ್ಯನನ್ನು ತಮ್ಮ ಸುಪರ್ದಿಗೆ ಒಪ್ಪಿಸಬೇಕೆಂದು ಜಾರಿ ನಿರ್ದೇಶನಾಲಯ ಇಂಗ್ಲೆಂಡನ್ನು ಕೇಳಿಕೊಂಡಿದೆ.

English summary
According to the secret report sent by Serious Fraud Investigation Office (SFIO) Sonia Gandhi and Farooq Abdullah had received favours from wanted criminal Vijay Mallya while using Kingfisher air service. Republic TV has revealed shocking incidents.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more