ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1984 ರ ಚುನಾವಣೆಗೂ ಮುನ್ನ ಆರೆಸ್ಸೆಸ್ ನೆರವು ಪಡೆದಿದ್ದರೇ ರಾಜೀವ್ ಗಾಂಧಿ..?!

|
Google Oneindia Kannada News

Recommended Video

ರಾಜೀವ್ ಗಾಂಧಿ ಬಗ್ಗೆ ಕೇಳಿ ಬಂದು ಈ ಸುದ್ದಿ ನಿಮಗೆ ಅಚ್ಚರಿ ಮೂಡಿಸುತ್ತೆ | Oneindia Kannada

ನವದೆಹಲಿ, ಏಪ್ರಿಲ್ 09: "1984 ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಅಂದಿನ ಕಾಂಗ್ರೆಸ್ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿದ್ದ ರಾಜೀವ್ ಗಾಂಧಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ನೆರವು ಪಡೆದಿದ್ದರು!" ಎಂದು ಪತ್ರಕರ್ತ ಮತ್ತು ಲೇಖಕ ರಷೀದ್ ಖಿದ್ವಾಯಿ ಅವರು ತಮ್ಮ ಪುಸ್ತಕವೊಂದರಲ್ಲಿ ಬರೆದುಕೊಂಡಿದ್ದಾರೆ!

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು

'24 Akbar Road: A Short History Of The People Behind The Fall And The Rise Of The Congress' ಎಂಬ ತಮ್ಮ ಪುಸ್ತಕದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆಯ ನಂತರ ನಡೆದ ಹಲವು ಅಚ್ಚರಿಯ ಬೆಳವಣಿಗೆಗಳ ಕುರಿತು ಬರೆದಿದ್ದಾರೆ.

ರಾಜೀವ್ ಹಂತಕರಿಗೆ ಕ್ಷಮೆ ಯಾಕೆ? ಅನುಮಾನ ಹುಟ್ಟಿಸುವ ಕಾಂಗ್ರೆಸ್ ನಡೆ: ಸ್ವಾಮಿರಾಜೀವ್ ಹಂತಕರಿಗೆ ಕ್ಷಮೆ ಯಾಕೆ? ಅನುಮಾನ ಹುಟ್ಟಿಸುವ ಕಾಂಗ್ರೆಸ್ ನಡೆ: ಸ್ವಾಮಿ

ಹಿಂದುಗಳ ಓಲೈಕೆಗಾಗಿ ಆರೆಸ್ಸೆಸ್ ಸಹಕಾರ ಅಗತ್ಯ ಎಂದು ಭಾವಿಸಿದ್ದ ರಾಜೀವ್ ಗಾಂಧಿ, ಆರೆಸ್ಸೆಸ್ಸಿನ ಅಂದಿನ ಸರಸಂಘಚಾಲಕರಾಗಿದ್ದ ಬಾಳಾಸಾಹೇಬ್ ದೇವರಸ್ ಅವರನ್ನು ಭೇಟಿ ಮಾಡಿದ್ದರು. ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ನೆರವು ನೀಡುವಂತೆ ಕೋರಿದ್ದರು ಎಂಬ ಅಚ್ಚರಿಯ ಸಂಗತಿಯನ್ನು ಈ ಪುಸ್ತಕದಲ್ಲಿ ಬರೆಯಲಾಗಿದೆ.

ಇಂದಿರಾ ಹತ್ಯೆಯ ನಂತರದ ಅಚ್ಚರಿಯ ಬೆಳವಣಿಗೆ

ಇಂದಿರಾ ಹತ್ಯೆಯ ನಂತರದ ಅಚ್ಚರಿಯ ಬೆಳವಣಿಗೆ

ಇಂದಿರಾ ಗಾಂಧಿ ಹತ್ಯೆಯ ನಂತರ, ಅವರ ಪ್ರಧಾನ ಕಾರ್ಯದರ್ಶಿಯಾಗಿದ್ದ ಪಿ ಸಿ ಅಲೆಕ್ಸಾಂಡರ್ ಮತ್ತು ಇನ್ನಿತರ ಕಾಂಗ್ರೆಸ್ ನಾಯಕರು ರಾಜೀವ್ ಗಾಂಧಿ ಅವರೇ ಮುಂದಿನ ಪ್ರಧಾನಿಯಾಗಬೇಕು ಎಂದು ಒತ್ತಾಯಿಸಿದ್ದರು. ರಾಜಕೀಯದ ಕುರಿತು ಹೆಚ್ಚೇನೂ ಅನುಭವವಿಲ್ಲದ ರಾಜೀವ್ ಗಾಂಧಿ ಅವರಿಗೆ ಒಪ್ಪಿಕೊಳ್ಳದೆ ಬೇರೆ ವಿಧಿ ಇರಲಿಲ್ಲ.

ಇಂದಿರಾ ಗಾಂಧಿ ಹತ್ಯೆಯಾಗಿದ್ದು ಅಕ್ಟೋಬರ್ 31, 1984 ಕ್ಕೆ. ಚುನಾವಣೆ ಘೋಷಣೆಯಾಗಿದ್ದು, ಡಿಸೆಂಬರ್ 24-27 ರ ಅವಧಿಯಲ್ಲಿ. ಅಂದರೆ ಸರಿಯಾಗಿ ಎರಡು ತಿಂಗಳೂ ಸಮಯವಿಲ್ಲದಿದ್ದರೂ ರಾಜೀವ್ ಗಾಂಧಿ ಸುಮಾರು 50,000 ಕಿ.ಮೀ. ದೂರ ಪ್ರಚಾರ ನಡೆಸಿದ್ದರು.

ದಣಿವರಿಯದೆ ಅವರು ಮಾಡಿದ ಪ್ರಚಾರ ಕಾರ್ಯದಲ್ಲಿ 'ಅಮ್ಮ ಸಾವಿನ ಅನುಕಂಪ ಗಿಟ್ಟಿಸುವ ಕೆಲಸವನ್ನು ಎಲ್ಲಿಯೂ ಮರೆಯಲಿಲ್ಲ.' ಇಂದಿರಾ ಸಾವಿನಿಂದಾಗಿ ಇಡೀ ದೇಶವೂ ಕಂಗಾಲಾಗಿತ್ತು. ನೆಹರೂ-ಗಾಂಧಿ ಕುಟುಂಬದ ಬಗ್ಗೆ ಅದಾಗಲೇ ಅನುಕಂಪದ ಅಲೆ ಸೃಷ್ಟಿಯಾಗಿತ್ತು. ಅದಕ್ಕೆ ಸರಿಯಾಗಿ ರಾಜೀವ್ ಗಾಂಧಿ ಸಹ ನಿರಂತರವಾಗಿ ಪ್ರಚಾರ ನಡೆಸಿದರು. ಅದರ ಫಲ ಎಂಬಂತೆ ದೇಶದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಪಕ್ಷವೊಂದು 543 ಕ್ಷೇತ್ರಗಳಲ್ಲಿ 415 ಕ್ಷೇತ್ರಗಳನ್ನು ಗೆದ್ದು ದಾಖಲೆ ಬರೆಯಿತು. ರಾಜೀವ್ ಗಾಂಧಿ ದೇಶದ ಪ್ರಧಾನಿಯಾದರು.

ಆರೆಸ್ಸೆಸ್ ನೆರವು ಕೇಳಲು ಕಾರಣವೇನು?

ಆರೆಸ್ಸೆಸ್ ನೆರವು ಕೇಳಲು ಕಾರಣವೇನು?

ಕಾಂಗ್ರೆಸ್ ನ 'ಹಿಂದು ವಿರೋಧಿ' ಹಣೆಪಟ್ಟಿಯನ್ನು ತೆಗೆದು ಹಾಕುವ ಸಲುವಾಗಿ, ಇಂದಿರಾ ಹತ್ಯೆಯ ನಂತರ ರಾಜೀವ್ ಗಾಂಧಿ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಕಾರ ಕೇಳಿದ್ದರು. ಅದಕ್ಕೆಂದೇ 1984 ರಲ್ಲಿ ಅಂದಿನ ಸರಸಂಘಚಾಲಕರಾಗಿದ್ದ ಬಾಳಾಸಾಹೇಬ್ ದೇವರಸ್ ಅವರನ್ನು ರಾಜೀವ್ ಗಾಂಧಿ ಭೇಟಿಯಾಗಿದ್ದರು. ಆದರೆ ಈ ಸಂಗತಿಯನ್ನು ಬಿಜೆಪಿ ಅಲ್ಲಗಳೆದಿತ್ತು. ಸೆಪ್ಟೆಂಬರ್ 1970 ರಲ್ಲಿ ಶಿವಸೇನೆಯ ಅಭೂತಪೂರ್ವ ಗೆಲುವಿಗೆ ಕಾರಣವಾಗಿದ್ದು ಸಹ ಆರೆಸ್ಸೆಸ್ ನೆರವು ಎಂಬುದನ್ನು ಬಲ್ಲವರಾಗಿದ್ದ ರಾಜೀವ್ ಗಾಂಧಿ ಸಂಘದ ಸಹಕಾರ ಕೇಳಿದ್ದರು ಎಂದು ಈ ಪುಸ್ತಕದಲ್ಲಿ ರಷೀದ್ ಬರೆದಿದ್ದಾರೆ.

ಅಪ್ಪ ಹತ್ಯೆಯಾಗುತ್ತಾರೆಂದು ಮೊದಲೇ ಗೊತ್ತಿತ್ತು : ರಾಹುಲ್ಅಪ್ಪ ಹತ್ಯೆಯಾಗುತ್ತಾರೆಂದು ಮೊದಲೇ ಗೊತ್ತಿತ್ತು : ರಾಹುಲ್

ರಾಮಮಂದಿರ ಶಿಲಾನ್ಯಾಸಕ್ಕೆ ಸಿದ್ಧ!

ರಾಮಮಂದಿರ ಶಿಲಾನ್ಯಾಸಕ್ಕೆ ಸಿದ್ಧ!

ರಾಜೀವ್ ಗಾಂಧಿ ಮತ್ತು ಆರೆಸ್ಸೆಸ್ ಸರಸಂಘಚಾಲಕರ ಭೇಟಿ ಕುರಿತು ಮಾತನಾಡಿದ್ದ ಕಾಂಗ್ರೆಸ್ ಮಾಜಿ ನಾಯಕ ಬನ್ವಾರಿಲಾಲ್ ಪುರೋಹಿತ್, 'ರಾಜೀವ್ ಜೀ ನನ್ನ ಬಳಿ ಕೇಳಿದ್ದರು, ಅಕಸ್ಮಾತ್ ಕಾಂಗ್ರೆಸ್, ರಾಮಜನ್ಮಭೂಮಿಯಲ್ಲಿ ರಾಮಮಂದಿರಕ್ಕೆ ಶಿಲಾನ್ಯಾಸ ಮಾಡಿದರೆ ಆರೆಸ್ಸೆಸ್ ನಮಗೆ ನೆರವು ನೀಡುತ್ತದೆಯೇ ಎಂದು ಅವರು ವಿಚಾರಿಸಿದ್ದರು' ಎಂದಿದ್ದರು. ಅಂದರೆ ಎಲ್ಲಾ ರೀತಿಯಿಂದಲೂ ಆರೆಸ್ಸೆಸ್ ನ ಸಹಕಾರ ಕಾಂಗ್ರೆಸ್ ಗೆ ಅಗತ್ಯ ಎಂದು ರಾಜೀವ್ ಗಾಂಧಿ ಭಾವಿಸಿದ್ದರು ಎಂದು ಈ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

ರಾಜೀವ್ ರಾಜಕೀಯ ಸೋನಿಯಾ ಗಾಂಧಿಗೆ ಇಷ್ಟವಿರಲಿಲ್ಲ!

ರಾಜೀವ್ ರಾಜಕೀಯ ಸೋನಿಯಾ ಗಾಂಧಿಗೆ ಇಷ್ಟವಿರಲಿಲ್ಲ!

ಇಂದಿರಾ ಗಾಂಧಿ ಹತ್ಯೆಯ ದುಃಖ ಮರೆಯುವ ಮೊದಲೇ ರಾಜೀವ್ ಗಾಂಧಿಯವರಿಗೆ ಪ್ರಧಾನಿ ಯಾಗುವಂತೆ ಒತ್ತಾಯಿಸಲಾಗಿತ್ತು. ರಾಜಕೀಯದ ಕುರಿತು ಹೆಚ್ಚು ಅನುಭವವಿಲ್ಲದ ರಾಜೀವ್ ಗಾಂಧಿ ಇದು ತಮ್ಮ ಕರ್ತವ್ಯ ಎಂದು ಒಪ್ಪಿಕೊಂಡರೂ, ಅವರು ರಾಜಕೀಯಕ್ಕೆ ಬರುವುದು ಅವರ ಪತ್ನಿ ಸೋನಿಯಾ ಗಾಂಧಿ ಅವರಿಗೆ ಬಿಲ್ ಕುಲ್ ಇಷ್ಟವಿರಲಿಲ್ಲ. ಅದನ್ನು ಅವರು ಹೇಳಿದ್ದರು ಸಹ. ಆದರೆ ದೇಶದ ಹಿತದೃಷ್ಟಿಯಿಂದ ಇದು ನನ್ನ ಕರ್ತವ್ಯ ಎಂದ ರಾಜೀವ್ ಗಾಂಧಿ ನಂತರ ಪ್ರಧಾನಿ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿ, ಅಭೂತಪೂರ್ವ ಯಶಸ್ಸು ಕಂಡಿದ್ದರು.

English summary
Former prime minister of India Rajiv Gandhi sought help of Rashtriya Swayamsevaka Sangh, popularly known as RSS, during 1984 elections. In a book named '24 Akbar Road: A Short History Of The People Behind The Fall And The Rise Of The Congress' written by Rasheed Kidwai, explains these things.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X