• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರಧಾನಿ ಎಂದಾದರೂ ಚಹಾ ತೋಟಕ್ಕೆ ಹೋಗಿದ್ದೀರಾ?: ಪ್ರಿಯಾಂಕಾ ಪ್ರಶ್ನೆ

|

ಜೋರ್ಹತ್‌ನಲ್ಲಿ ಕಾಂಗ್ರೆಸ್ ಪರ ಇಂದು ಪ್ರಚಾರದಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಪ್ರಧಾನಿ ಮೋದಿ ಅವರಿಗೆ ಪ್ರಶ್ನೆ ಎಸೆದಿದ್ದಾರೆ.

ಎಲ್ಲಾ ಪಕ್ಷಗಳು ಅಸ್ಸಾಂ ವಿಧಾನಸಭಾ ಚುನಾವಣೆ ಪ್ರಚಾರ ನಿರತರಾಗಿದ್ದು, ಪರಸ್ಪರ ಕೆಸರೆರಚಾರ ಇಲ್ಲೂ ಮುಂದುವರೆದಿದೆ. ''ಒಬ್ಬ ಚಾಯ್ ವಾಲ ಮಾತ್ರ ಅಸ್ಸಾಂ ಚಹಾ ಬೆಳೆಗಾರರು, ಕಾರ್ಮಿಕರ ಕಷ್ಟ ತಿಳಿಯಲು ಸಾಧ್ಯ'' ಎಂದು ಪ್ರಧಾನಿ ನೀಡಿರುವ ಹೇಳಿಕೆಗೆ ಪ್ರಿಯಾಂಕಾ ಗಾಂಧಿ ಇಂದು ತಿರುಗೇಟು ನೀಡಿದ್ದಾರೆ. ಪ್ರಧಾನಿ ಮೋದಿಯವರೇ ನೀವು ಎಂದಾದರೂ ಚಹಾ ತೋಟಕ್ಕೆ ಭೇಟಿ ನೀಡಿದ್ದೀರಾ? ಅಲ್ಲಿನ ಮಹಿಳಾ ಕಾರ್ಮಿಕರನ್ನು ಭೇಟಿ ಮಾಡಿದ್ದೀರಾ? ದಿನಗೂಲಿ 350 ರು ಘೋಷಣೆ ಮಾಡಿ ಭರವಸೆ ನೀಡಿದರೆ ಅವರ ನೋವು, ನಿತ್ಯ ಸಂಕಷ್ಟದ ಬದುಕಿನ ಅರಿವು ಹೇಗೆ ಆಗಲು ಸಾಧ್ಯ ಎಂದು ಪ್ರಿಯಾಂಕಾ ಪ್ರಶ್ನಿಸಿದ್ದಾರೆ.

ಕಳೆದ ಬಾರಿ ನಾನು ಅಸ್ಸಾಂಗೆ ಬಂದಾಗ ಚಹಾ ತೋಟದಲ್ಲಿ ಕೆಲಸ ಮಾಡುವ ನನ್ನ ಸಹೋದರಿಯರನ್ನು ಭೇಟಿಯಾಗಲು ಅವಕಾಶ ನನಗೆ ಸಿಕ್ಕಿತು. ನಾನು ಚಹಾ ತೋಟದಲ್ಲಿ ನನ್ನ ಸಹೋದರಿಯರೊಂದಿಗೆ ಮಾತನಾಡಿದಾಗ, ಬಹಳಷ್ಟು ವಿಷಯಗಳನ್ನು ತಿಳಿದುಕೊಂಡೆ ಎಂದು ತಮ್ಮ ಭಾಷಣಾದಲ್ಲಿ ಹೇಳಿದರು. ಅಸ್ಸಾಂನ ಸಂಸ್ಕೃತಿ ಹೇಳಿದರು. ನಿತ್ಯ ಬದುಕು, ಚಹಾ ತೋಟದ ಸುಂದರ ವಾತಾವರಣದಲ್ಲಿನ ಕಹಿ ಬದುಕಿನ ಬಗ್ಗೆ ಹೇಳಿಕೊಂಡರು. ಕಾಂಗ್ರೆಸ್ ಪಕ್ಷದ ನಾಯಕರಾಗಲಿ, ಅವರು ಬಿಜೆಪಿಯ ನಾಯಕರಾಗಲಿ. ನಾವೆಲ್ಲರೂ ಇಲ್ಲಿಗೆ ಬಂದು ನಿಮಗೆ ದೊಡ್ಡ ಭಾಷಣಗಳನ್ನು ನೀಡುತ್ತೇವೆ. ಆಶ್ವಾಸನೆ ನೀಡುತ್ತೇವೆ, ಆದರೆ, ಚಹಾ ಸಂಸ್ಕೃತಿಯನ್ನು ಉಳಿಸುವವರು ಇಲ್ಲಿನ ಮಹಿಳೆಯರು, ಸ್ಥಳೀಯ ಕಾರ್ಮಿಕರು ಎಂದು ಹೇಳಿದರು.

ಚಹಾ ತೋಟಕ್ಕೆ ಹೋಗಿ, ನನ್ನ ಸಹೋದರಿಯರನ್ನು ಭೇಟಿಯಾದಾಗ, ನಿಮ್ಮ ಸಂಸ್ಕೃತಿಯ ರಕ್ಷಕ ನನ್ನ ಮುಂದೆ ಕುಳಿತಿದ್ದಾನೆ ಎಂದು ನನಗೆ ಅರಿವಾಯಿತು. ಚಹಾ ತೋಟಗಳಲ್ಲಿ ಕೆಲಸ ಮಾಡುವ ಮಹಿಳೆಯರು, ದಿನ ಕೆಲಸ ಮಾಡುವ ಮಹಿಳೆಯರು. ಮನೆಯವರನ್ನು ನಿಭಾಯಿಸುವವನು, ಮಹಿಳೆಯರು ಅಸ್ಸಾಂನ ತಾಯಿಯಂತೆ ರಕ್ಷಿಸುತ್ತಾ ಬಂದಿದ್ದಾರೆ ಎಂದರು.

ಟ್ವೀಟ್ ಬಗ್ಗೆ ಮೋದಿ ಆತಂಕ ದುಃಖ ವ್ಯಕ್ತಪಡಿಸಿರುವುದರ ಬಗ್ಗೆ ಉಲ್ಲೇಖಿಸಿದ ಪ್ರಿಯಾಂಕಾ, ಅಸ್ಸಾಂನಲ್ಲಿ ಪ್ರವಾಹ ಉಂಟಾದಾಗ ಯಾಕೆ ದುಃಖವಾಗಲಿಲ್ಲ, ಸಿಎಎ ಆಂದೋಲನ ಇಲ್ಲಿ ನಡೆದಾಗ, ಅಸ್ಸಾಂನಲ್ಲಿ ಬೆಂಕಿ ಕಾಣಿಸಿಕೊಂಡಿತು, ಆಗ ಪ್ರಧಾನಿಗೆ ಏಕೆ ದುಃಖವಾಗಲಿಲ್ಲ. ಅಸ್ಸಾಂನ ಜನರ ಮುಂದೆ ಏಕೆ ಬರಲಿಲ್ಲ ಎಂದು ಪ್ರಶ್ನಿಸಿದ್ದಾರೆ.

English summary
Addressing a public rally in Assam's Jorhat, Congress General Secretary Priyanka Gandhi Vadra asked if PM Narendra Modi "ever visited a tea garden" in the state and met "woman workers there". "Doesn't the PM feel their pain as his promise of giving ₹350/day as a daily wage to tea garden workers hasn't been fulfilled yet?" she added.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X