ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

365 ದಿನಗಳಲ್ಲಿ 2000 ಮುಖಬೆಲೆಯ ಒಂದೇ ಒಂದು ನೋಟು ಮುದ್ರಿಸಿಲ್ಲ!

|
Google Oneindia Kannada News

ನವದೆಹಲಿ, ಆಗಸ್ಟ್.26: ಕೇಂದ್ರ ಸರ್ಕಾರವು ಚಾಲ್ತಿಗೆ ತಂದಿದ್ದ 2,000 ರೂಪಾಯಿ ಮೌಲ್ಯದ ನೋಟುಗಳ ಮುದ್ರಣವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ವಾರ್ಷಿಕ ವರದಿಯಲ್ಲಿ ತಿಳಿಸಿದೆ.

2019-20ನೇ ಸಾಲಿನಲ್ಲಿ 2,000 ರೂಪಾಯಿ ಮೌಲ್ಯದ ಒಂದೇ ಒಂದು ನೋಟನ್ನು ಮುದ್ರಿಸಿಲ್ಲ ಎಂದು ರಿಸರ್ವ್ ಬ್ಯಾಂಕ್ ಸ್ಪಷ್ಟಪಡಿಸಿದೆ. ನೋಟ್ ಬ್ಯಾನ್ ಸಂದರ್ಭದಲ್ಲಿ ಚಾಲ್ತಿಗೆ ಬಂದಿದ್ದ ಹೊಸ ನೋಟುಗಳ ಮುದ್ರಣವನ್ನು 2019ರಲ್ಲಿ ರಿಸರ್ವ್ ಬ್ಯಾಂಕ್ ತಗ್ಗಿಸಿತ್ತು.

ಸತ್ಯವಾಗ್ಲೂ ಹೌದು, 2000 ನೋಟು ಪ್ರಿಂಟ್ ಆಗ್ತಿಲ್ಲ... ಆತಂಕ ಹುಟ್ಟಿಸಿದ ಸರ್ಕಾರದ ನಡೆಸತ್ಯವಾಗ್ಲೂ ಹೌದು, 2000 ನೋಟು ಪ್ರಿಂಟ್ ಆಗ್ತಿಲ್ಲ... ಆತಂಕ ಹುಟ್ಟಿಸಿದ ಸರ್ಕಾರದ ನಡೆ

2016ರ ನವೆಂಬರ್ 8ರಂದು ಮಧ್ಯರಾತ್ರಿ ಪ್ರಧಾನಮಂತ್ರಿ ನರೇಂದ್ರ ಮೋದಿ, ದೇಶದಲ್ಲಿ 500 ಮತ್ತು 1000 ಮುಖಬೆಲೆಯ ನೋಟ್ ಗಳನ್ನು ಅಮಾನ್ಯಗೊಳಿಸಿ ಆದೇಶಿಸಿದ್ದರು. ಕಪ್ಪುಹಣಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರಣವು ಈ ಕ್ರಮವನ್ನು ತೆಗೆದುಕೊಂಡಿತ್ತು.

ಆರಂಭದಲ್ಲಿ ನೋಟುಗಳ ಮುದ್ರಣ ಪ್ರಮಾಣ

ಆರಂಭದಲ್ಲಿ ನೋಟುಗಳ ಮುದ್ರಣ ಪ್ರಮಾಣ

2018ರ ಆರಂಭದಲ್ಲಿ 2,000 ಮುಖಬೆಲೆಯ ನೋಟುಗಳ ಮುದ್ರಣ ಜೋರಾಗಿ ನಡೆದಿತ್ತು. 2018ರ ಮಾರ್ಚ್ ಅಂತ್ಯದ ವೇಳೆಗೆ 2,000 ಮುಖಬೆಲೆಯ 33,632 ಲಕ್ಷ ನೋಟುಗಳು ಚಲಾವಣೆಯಲ್ಲಿದ್ದವು. ಆದರೆ 2020ರ ಮಾರ್ಚ್ ತಿಂಗಳ ಅಂತ್ಯದ ವೇಳೆಗೆ ಈ ಪ್ರಮಾಣವು 27,398 ಲಕ್ಷಕ್ಕೆ ತಗ್ಗಿದೆ ಎಂದು ಆರ್ ಬಿಐ ತಿಳಿಸಿದೆ.

200, 500ರ ನೋಟುಗಳ ಮುದ್ರಣದಲ್ಲಿ ಹೆಚ್ಚಳ

200, 500ರ ನೋಟುಗಳ ಮುದ್ರಣದಲ್ಲಿ ಹೆಚ್ಚಳ

ದೇಶದಲ್ಲಿ 200 ಮತ್ತು 500 ಮುಖಬೆಲೆಯ ನೋಟುಗಳ ಮುದ್ರಣದ ಪ್ರಮಾಣವನ್ನು ಇದೀಗ ಹೆಚ್ಚಿಸಲಾಗುತ್ತಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ. ಅಧಿಕ ಮುಖಬೆಲೆಯ ನೋಟುಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಈ ಕ್ರಮವನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಆರ್ ಬಿಐ ಹೇಳಿದೆ.

ಕಪ್ಪುಹಣ ಸಾಗಾಣಿಕೆಗೆ ಅತಿಹೆಚ್ಚು ಬಳಕೆಯಾದ 2,000 ನೋಟು

ಕಪ್ಪುಹಣ ಸಾಗಾಣಿಕೆಗೆ ಅತಿಹೆಚ್ಚು ಬಳಕೆಯಾದ 2,000 ನೋಟು

ನೋಟ್ ಬ್ಯಾನ್ ಜಾರಿಗೊಳಿಸಿದ ಸಂದರ್ಭದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ 2,000 ಮುಖಬೆಲೆಯ ನೋಟುಗಳನ್ನು ಪರಿಚಯಿಸಲಾಗಿತ್ತು. ಬದಲಾದ ಕಾಲಘಟ್ಟದಲ್ಲಿ ಕಪ್ಪುಹಣ ಸಂಗ್ರಹ ಮತ್ತು ಸಾಗಾಣಿಕೆಗೆ ಈ 2,000 ರೂಪಾಯಿ ಮೌಲ್ಯದ ನೋಟುಗಳನ್ನೇ ಹೆಚ್ಚಾಗಿ ಬಳಸಿಕೊಳ್ಳುತ್ತಿರುವುದು ಬೆಳಕಿಗೆ ಬಂದಿತ್ತು. ಅಲ್ಲದೇ ಅತಿಹೆಚ್ಚು ಮುಖಬೆಲೆಯ ನೋಟುಗಳು ಕಳ್ಳ ಸಾಗಾಣಿಕೆಗೆ ಸುಲಭವೂ ಆಗಿದ್ದು, ಇದೀಗ ರಿಸರ್ವ್ ಬ್ಯಾಂಕ್ ಅದಕ್ಕೆ ಕಡಿವಾಣ ಹಾಕಲು ಈ ಕ್ರಮವನ್ನು ತೆಗೆದುಕೊಂಡಿದೆ.

ದೇಶದಲ್ಲಿ ಆಹಾರ ಪದಾರ್ಥಗಳ ಬೆಲೆ ಏರಿಕೆ ಸಾಧ್ಯತೆ

ದೇಶದಲ್ಲಿ ಆಹಾರ ಪದಾರ್ಥಗಳ ಬೆಲೆ ಏರಿಕೆ ಸಾಧ್ಯತೆ

ಭಾರತದಲ್ಲಿ ಹಣದುಬ್ಬರದ ಕಾರಣದಿಂದ ಆಹಾರ ಪದಾರ್ಥಗಳ ಬೆಲೆಯಲ್ಲಿ ಏರಿಕೆ ಕಂಡು ಬರುವ ಸಾಧ್ಯತೆಯಿದೆ. ಅಲ್ಪಾವಧಿಯ ಹಣದುಬ್ಬರ ಅಸ್ಥಿರವಾಗಿದ್ದು, ದೇಶದಲ್ಲಿನ ಆಹಾರ ಪದಾರ್ಥಗಳ ಬೆಲೆಯಲ್ಲಿ ಕೊಂಚ ಏರಿಕೆ ಕಂಡು ಬರುವ ಲಕ್ಷಣಗಳು ಕಾಣಿಸುತ್ತಿವೆ ಎಂದು ಆರ್ ಬಿಐ ವಾರ್ಷಿಕರ ವರದಿಯಲ್ಲಿ ಉಲ್ಲೇಖಿಸಿದೆ.

English summary
Did Not Print Even Single Rs 2,000 Note In 2019-20: RBI.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X