• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

15 ಲಕ್ಷ ರು. ನೀಡುತ್ತೇನೆಂದು ಮೋದಿ ನಿಜಕ್ಕೂ ಪ್ರಾಮಿಸ್ ಮಾಡಿದ್ದರೆ?

|

ನವದೆಹಲಿ, ಮಾರ್ಚ್ 29: ಪ್ರಧಾನಿ ನರೇಂದ್ರ ಮೋದಿ ಆಡಳಿತವನ್ನು ಟೀಕೆ ಮಾಡುವ ಪ್ರತಿಯೊಬ್ಬರು ಸಹ ಒಂದು ವಿಷಯವನ್ನು ಮರೆಯದೇ ಹೇಳುತ್ತಾರೆ ಅದು 'ಖಾತೆಗೆ 15 ಲಕ್ಷ ಹಾಕುತ್ತೇನೆ ಎಂದಿದ್ದರು ಏಕೆ ಹಾಕಲಿಲ್ಲ' ಎಂದು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಮೋದಿ ಅವರು 2014 ರಲ್ಲಿ ಪ್ರಧಾನಿಯಾಗಿ ಆಡಳಿತ ಪ್ರಾರಂಭಿಸಿದಾಗಿನಿಂದ ಹಿಡಿದು ಅವರ ಐದು ವರ್ಷದ ಅವಧಿ ಮುಗಿಯುವವರೆಗೂ ಈ ಟೀಕೆ ಮೋದಿ ಅವರ ಬೆನ್ನು ಬಿಡುತ್ತಲೇ ಇಲ್ಲ, ಮೋದಿ ವಿರೋಧಿ ಭಾಷಣಗಳೆಲ್ಲವಲ್ಲೂ ಸಾಮಾನ್ಯವಾಗಿ 15 ಲಕ್ಷದ ಉಲ್ಲೇಖ ಇದ್ದೇ ಇರುತ್ತದೆ.

15 ಲಕ್ಷ ರೂಪಾಯಿ ನಿಮ್ಮ ಖಾತೆಗೆ ಜಮೆ ಆಗಿದೆಯಾ?: ಪ್ರಿಯಾಂಕಾ ಪ್ರಶ್ನೆ

ಇಲ್ಲಿ ಪ್ರಶ್ನೆ ಏನೆಂದರೆ ಮೋದಿ ಅವರು ನಿಜವಾಗಿಯೂ ಎಲ್ಲರ ಖಾತೆಗೆ 15 ಲಕ್ಷ ಹಾಕುತ್ತೇನೆ ಎಂದು ಹೇಳಿದ್ದರೆ? ಆದರೆ ಸತ್ಯವನ್ನು ಹುಡುಕು ಹೊರಟರೆ, ಅವರು ಹಾಗೆಂದೂ ಹೇಳಿಯೇ ಇಲ್ಲ ಎನ್ನುವುದು ಗೊತ್ತಾಗುತ್ತದೆ. ಆದರೆ ಅವರು ಹಾಗೆ ಹೇಳಿದ್ದಾರೆ ಎಂದು ನಿರೂಪಿಸಲು ವಿಡಿಯೋ ಒಂದನ್ನು ಮುಖಕ್ಕೆ ಹಿಡಿಯಲಾಗುತ್ತದೆ.

ಮೋದಿ ಅಂದು ಏನು ಹೇಳಿದ್ದರು?

ಮೋದಿ ಅಂದು ಏನು ಹೇಳಿದ್ದರು?

ಅದು ನವೆಂಬರ್ 7, 2013 ರಲ್ಲಿ ಚತ್ತೀಸ್‌ಗಡದಲ್ಲಿ ಮೋದಿ ಅವರು ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ ವಿಡಿಯೋ, ಆ ವಿಡಿಯೋದಲ್ಲಿ ಮೋದಿ ಅವರು ಹೀಗೆ ಹೇಳಿದ್ದಾರೆ 'ದೇಶದ ಭ್ರಷ್ಟ್ರರು ತಮ್ಮ ಕಪ್ಪು ಹಣವನ್ನು ವಿದೇಶದ ಬ್ಯಾಂಕುಗಳಲ್ಲಿ ಅಡಗಿಸಿಟ್ಟಿದ್ದಾರೆ, ಆ ಹಣವನ್ನು ವಾಪಸ್ ತರಬೇಕೆ ಬೇಡವೆ ನೀವೆ ಹೇಳಿ? ನಿಮ್ಮಿಂದ ಕದ್ದ ಆ ಹಣ ವಾಪಸ್ ಬರಬೇಕೆ ಬೇಡವೆ? ಆ ಹಣವನ್ನು ಭಾರತಕ್ಕೆ ಮರಳಿ ತಂದರೆ ಪ್ರತಿಯೊಬ್ಬ ಭಾರತೀಯನಿಗೂ 15-20 ಲಕ್ಷ ನೀಡಬಹುದು' ಇದು ಮೋದಿ ಅವರು ಅಂದಿನ ಸಮಾವೇಶದಲ್ಲಿ ಹೇಳಿದ್ದ ಮಾತುಗಳು.

ನೀತಿ ಸಂಹಿತೆ ಉಲ್ಲಂಘನೆ: ಮೋದಿಗೆ ಕ್ಲೀನ್‌ಚಿಟ್ ನೀಡಿದ ಆಯೋಗ

ಕಪ್ಪು ಹಣದ ಪ್ರಮಾಣ ಹೇಳಲು ಉದಾಹರಣೆಯಾಗಿ ಬಳಕೆ

ಕಪ್ಪು ಹಣದ ಪ್ರಮಾಣ ಹೇಳಲು ಉದಾಹರಣೆಯಾಗಿ ಬಳಕೆ

ವಿದೇಶದಲ್ಲಿ ನಮ್ಮ ದೇಶದ ಕಪ್ಪು ಹಣ ಎಷ್ಟು ಅಡಗಿದೆ ಎಂದು ಹೇಳುವ ಸಲುವಾಗಿ 'ಒಬ್ಬೊಬ್ಬರ ಖಾತೆಗೆ 15-20 ಲಕ್ಷ ಹಾಕಬಹುದಾದಷ್ಟು ಹಣ ವಿದೇಶಿ ಬ್ಯಾಂಕುಗಳಲ್ಲಿದೆ' ಎಂದು ಹೇಳಿದ್ದರು. ಆದರೆ ಅದನ್ನು ಮೋದಿ ಅವರು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಣ ಹಾಕುತ್ತೇನೆ ಎಂದಿದ್ದಾರೆ ಎಂದು ಅರ್ಥೈಸಲಾಯಿತು.

ಮೋದಿ ಹವಾ: ಉತ್ತರದಲ್ಲಿ ಜೋರು, ದಕ್ಷಿಣ ಭಾರತದಲ್ಲಿ ಚೂರೇ ಚೂರು!

ವಿದೇಶದಿಂದ ಕಪ್ಪು ಹಣ ತರುವ ಭರವಸೆ ನೀಡಿದ್ದರು

ವಿದೇಶದಿಂದ ಕಪ್ಪು ಹಣ ತರುವ ಭರವಸೆ ನೀಡಿದ್ದರು

ಆದರೆ ಮತ್ತೊಂದು ವಿಷಯವನ್ನು ಅಂದಿನ ಭಾಷಣದ ಸಂಬಂಧ ಗಮಿಸಲೇಬೇಕು, ಮೋದಿ ಅವರು ಅಂದು ವಿದೇಶದಲ್ಲಿನ ಕಪ್ಪು ಹಣವನ್ನು ವಾಪಸ್ ತರುವ ಭರವಸೆಯನ್ನು ನೀಡಿದ್ದರು ಎಂಬುದಂತೂ ಸತ್ಯವೇ. ಮೋದಿ ಅವರು ಆ ನಂತರದ ತಮ್ಮ ಭಾಷಣಗಳಲ್ಲಿ ಸಹ ಅದನ್ನು ಉಲ್ಲೇಖಿಸಿದ್ದರು. ಆದರೆ ಆ ಕಾರ್ಯವಿನ್ನೂ ಆಗಿಲ್ಲವೆಂದೇ ಹೇಳಬಹುದು. ಆದರೆ ಮೋದಿ ಎಲ್ಲರ ಖಾತೆಗೆ 15 ಲಕ್ಷ ಹಾಕುತ್ತೇನೆ ಎಂಬ ಭರವಸೆಯನ್ನು ನೀಡಿರಲಿಲ್ಲ ಎಂಬುದಂತೂ ನಿಜ.

ಭಾಷಣದ ವಿಡಿಯೋ ಲಭ್ಯವಿದೆ

ಭಾಷಣದ ವಿಡಿಯೋ ಲಭ್ಯವಿದೆ

ಮೋದಿ ಅವರು 2013ರಲ್ಲಿ ಚತ್ತೀಸ್‌ಗಡದ ಕಾಂಕೇರ್‌ನಲ್ಲಿ ಮಾಡಿದ ಭಾಷಣದ ವಿಡಿಯೋ ತುಣುಕು ಯೂಟ್ಯೂಬ್‌ನಲ್ಲಿ ಲಭ್ಯವಿದೆ. 35 ನಿಮಿಷಕ್ಕೂ ಹೆಚ್ಚಿನ ಅವಧಿಯ ಈ ವಿಡಿಯೋದಲ್ಲಿ ಅವರು ಇನ್ನೂ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ.

English summary
Did Narendra Modi promises to deposit 15 lakh to every account if Indians. Here the fact check of the statement. He did not say anything like that.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X