ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂದ್ರಯಾನ 2 ಲ್ಯಾಂಡರ್ ವಿಕ್ರಮ್ ವೈಫಲ್ಯಕ್ಕೆ ಏನು ಕಾರಣ?

By ವಿಕಾಸ್ ನಂಜಪ್ಪ
|
Google Oneindia Kannada News

Recommended Video

ರಾಹುಲ್ ಮಾತು ಕೇಳಿ ಮೋದಿಗೆ ಅಚ್ಚರಿ..? | Chandrayaan 2 | Oneindia Kannada

ಬೆಂಗಳೂರು, ಸೆ. 08: ಇಸ್ರೋದ ಮಹಾತ್ವಾಕಾಂಕ್ಷೆ ಯೋಜನೆ ಚಂದ್ರಯಾನ 2 ಲ್ಯಾಂಡರ್ ಸಂಪರ್ಕ ಕಡಿತಗೊಳ್ಳಲು ಏನು ಕಾರಣ ಎಂಬುದು ಈಗ ಬಹಿರಂಗಗೊಂಡಿದೆ.

ಶನಿವಾರ ಬೆಳಗ್ಗೆ 1.53ರ ಸುಮಾರಿಗೆ ಸಾಫ್ಟ್ ಲ್ಯಾಂಡಿಂಗ್ ಆಗಬೇಕಿದ್ದ ವಿಕ್ರಮ್ ಮೇಲೆ ಒತ್ತಡ ಹೆಚ್ಚಾಗಿ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಇಳಿಯಲು ಆರಂಭಿಸಿದ್ದು ಹಾಗೂ ಥ್ರಸ್ಟರ್ ಅಸಮರ್ಪಕ ನಿರ್ವಹಣೆಯಿಂದ ಲ್ಯಾಂಡರ್ ಹಾಗೂ ಬ್ಯಾಲಾಳುವಿನ ಟ್ರ್ಯಾಕರ್ ಕೇಂದ್ರದ ನಡುವಿನ ಸಂಪರ್ಕ ಕಡೆದುಕೊಂಡಿದೆ ಎಂದು ಬಲವಾಗಿ ಅಂದಾಜಿಸಲಾಗಿದೆ.

ಇದು ವೈಫಲ್ಯವಲ್ಲ, ಹಿನ್ನಡೆಯಷ್ಟೇ; ಚಂದ್ರಯಾನ ಕಳೆದುಕೊಂಡಿದ್ದು ಶೇ 5ರಷ್ಟು ಮಾತ್ರಇದು ವೈಫಲ್ಯವಲ್ಲ, ಹಿನ್ನಡೆಯಷ್ಟೇ; ಚಂದ್ರಯಾನ ಕಳೆದುಕೊಂಡಿದ್ದು ಶೇ 5ರಷ್ಟು ಮಾತ್ರ

ವಿಕ್ರಮ್ ರಫ್ ಬ್ರೇಕಿಂಗ್ ಹಂತ ಮುಗಿಸಿದ ಬಳಿಕ ಚಂದ್ರನ ದಕ್ಷಿಣ ವಲಯದ ಮೇಲೆ ಇಳಿಯಲು 2.1 ಕಿ.ಮೀ ಮಾತ್ರ ಬಾಕಿಯಿತ್ತು. ಲ್ಯಾಂಡರ್ ನಿಂದ ಕಮ್ಯೂನಿಕೇಷನ್ ಲಾಸ್ಟ್ ಎಂಬ ಸಿಗ್ನಲ್ ಬಂದಿದೆ. ಆದರೆ, ಲ್ಯಾಂಡರ್ ಗೆ ಯಾವುದೇ ಹಾನಿಯಾದ ಬಗ್ಗೆ ಮಾಹಿತಿಯಿಲ್ಲ. ಇನ್ನು 2 ವಾರಗಳ ಕಾಲ ಇಸ್ರೋದ ಟೆಲಿಮೆಟ್ರಿ ಟ್ರ್ಯಾಕಿಂಘ್ ಅಂಡ್ ಕಮ್ಯಾಂಡ್ ನೆಟ್ವರ್ಕ್ (ಇಸ್ಟ್ರಾಕ್), ಬ್ಯಾಲಾಳು ಉಪಗ್ರಹ ಕೇಂದ್ರ, ಮಾಸ್ಟರ್ ಕಂಟ್ರೋಲ್ ಕೇಂದ್ರದಿಂದ ಈ ಬಗ್ಗೆ ನಿರಂತರವಾಗಿ ಪರಿಶೀಲನೆ ನಡೆಯಲಿದೆ.

Did a thruster malfunction jeopardise Chandrayaan 2 lander

ಚಂದ್ರಯಾನ2 ಯೋಜನೆ ವೈಫಲ್ಯದ ಕಾರಣ ಬಿಚ್ಚಿಟ್ಟ ಖಾದರ್ಚಂದ್ರಯಾನ2 ಯೋಜನೆ ವೈಫಲ್ಯದ ಕಾರಣ ಬಿಚ್ಚಿಟ್ಟ ಖಾದರ್

ಚಂದ್ರನ ಸುತ್ತ ಸುತ್ತುತ್ತಿರುವ ಆರ್ಬಿಟರ್ ಇನ್ನೂ 7 ವರ್ಷ ಅಲ್ಲೇ ಇರಲಿದೆ. ಅದರಿಂದ ಫೋಟೋಗಳನ್ನು ತೆಗೆದು ಪರಿಸ್ಥಿತಿ ವಿಶ್ಲೇಷಣೆ ಮಾಡಬಹುದು. ಸ್ವಯಂ ಚಾಲಿತವಾಗಿ ಪುನರಾರಂಭ ಗೊಂಡು ಭೂಮಿಯೊಂದಿಗೆ ಸಂಪರ್ಕ ಬರುವ ನಿರೀಕ್ಷೆ ಇಟ್ಟುಕೊಳ್ಳಬಹುದು.

ಚಂದ್ರಯಾನ ಯೋಜನೆಗಳಲ್ಲಿ ಯಶಸ್ವಿಯಾಗಿರುವುದು ಎಷ್ಟು ಗೊತ್ತೇ?ಚಂದ್ರಯಾನ ಯೋಜನೆಗಳಲ್ಲಿ ಯಶಸ್ವಿಯಾಗಿರುವುದು ಎಷ್ಟು ಗೊತ್ತೇ?

ಸುಮಾರು 6,048 ಕಿ.ಮೀ ಪ್ರತಿ ಗಂಟೆ ವೇಗವನ್ನು 7 ಕಿ.ಮೀ ಪ್ರತಿ ಗಂಟೆ ವೇಗಕ್ಕೆ ತಗ್ಗಿಸಿ ಸಾಫ್ಟ್ ಲ್ಯಾಂಡಿಂಗ್ ಮಾಡುವ ಯೋಜನೆ ಹಾಕಿಕೊಳ್ಳಲಾಗಿತ್ತು. ಆದರೆ, ಕೊನೆ ಹಂತದಲ್ಲಿ ವಿಕ್ರಮ ಅಟೋನೋಮಸ್ ಮೋಡ್ ನಲ್ಲಿ ಕಾರ್ಯ ನಿರ್ವಹಿಸಿ ತಾನೇ ಲ್ಯಾಂಡಿಂಗ್ ಮಾಡುವ ಸಾಮರ್ಥ್ಯ ಹೊಂದಿತ್ತು. ಆದರೆ, ಪ್ರತಿಕೂಲ ಹವಾಮಾನದ ನಡುವೆ ಲ್ಯಾಂಡಿಂಗ್ ತುಂಬಾ ಕಷ್ಟದ ಹಂತವಾಗಿತ್ತು.

English summary
The Chandrayaan 2 lander could have crash landed as it may have hit the lunar surface faster than planned.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X