ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧುಮೇಹದ ಔಷಧ ಕೊರೊನಾಗೆ ಮದ್ದಾಗಬಹುದೇ? ಹೀಗೊಂದು ಹೊಸ ಸಾಧ್ಯತೆ

|
Google Oneindia Kannada News

ನವದೆಹಲಿ, ಜೂನ್ 15: ಹಲವು ರೂಪಾಂತರಗಳನ್ನು ತಳೆಯುತ್ತಿರುವ ಕೊರೊನಾ ಸೋಂಕು ಇಡೀ ಜಗತ್ತಿಗೇ ಆತಂಕ ತಂದೊಡ್ಡಿದೆ. ಜೀವಕ್ಕೆ ಮಾರಕವಾಗಿರುವ ಈ ಸೋಂಕಿನ ನಿಯಂತ್ರಣಕ್ಕೆ ಔಷಧಗಳು, ಲಸಿಕೆಗಳ ಅಭಿವೃದ್ಧಿಯೂ ನಡೆಯುತ್ತಿದೆ. ಹೊಸ ಹೊಸ ಆವಿಷ್ಕಾರಗಳಲ್ಲಿ ಹಲವು ದೇಶಗಳು ತೊಡಗಿಕೊಂಡಿವೆ. ಕೊರೊನಾ ತಡೆಗೆ ಇದೀಗ ಮತ್ತೊಂದು ಹೊಸ ಸಾಧ್ಯತೆಯನ್ನು ಕಂಡುಕೊಳ್ಳಲಾಗಿದೆ.

ಕೊರೊನಾ ಸೋಂಕಿನಿಂದ ಉಂಟಾದ ಶ್ವಾಸಕೋಶದ ಸಮಸ್ಯೆಯನ್ನು ಮಧುಮೇಹಕ್ಕೆ ನೀಡುವ ಔಷಧ ಪರಿಣಾಮಕಾರಿಯಾಗಿ ನಿವಾರಿಸಬಲ್ಲ ಅಥವಾ ತಡೆಯಬಲ್ಲ ಸಾಧ್ಯತೆಯನ್ನು ಹೊಸ ಸಂಶೋಧನೆಯೊಂದು ಸಾಕ್ಷೀಕರಿಸಿದೆ. "ಇಮ್ಯುನಿಟಿ" ಎಂಬ ನಿಯತಕಾಲಿಕೆಯಲ್ಲಿ ಈ ಅಧ್ಯಯನವನ್ನು ಪ್ರಕಟಿಸಲಾಗಿದ್ದು, ಹಲವು ಸಂಸ್ಥೆಗಳ ತಜ್ಞರು ಒಗ್ಗೂಡಿ ಈ ಸಂಶೋಧನೆ ನಡೆಸಿದ್ದಾರೆ. ಸಂಶೋಧನೆಯಲ್ಲಿ ಏನೇನೆಲ್ಲಾ ಅಂಶಗಳು ಕಂಡುಬಂದಿವೆ? ಮುಂದೆ ಓದಿ...

ಕೋವಿಡ್‌ಗೆ ತುತ್ತಾಗದವರಿಗೂ ಕಾಡುತ್ತಾ ಬ್ಲ್ಯಾಕ್ ಫಂಗಸ್? ಇಲ್ಲಿದೆ ಉತ್ತರಕೋವಿಡ್‌ಗೆ ತುತ್ತಾಗದವರಿಗೂ ಕಾಡುತ್ತಾ ಬ್ಲ್ಯಾಕ್ ಫಂಗಸ್? ಇಲ್ಲಿದೆ ಉತ್ತರ

 ಮಧುಮೇಹಿಗಳಿಗೆ ಸೂಚಿಸುವ ಔಷಧ ಬಳಕೆ ಕುರಿತು ಅಧ್ಯಯನ

ಮಧುಮೇಹಿಗಳಿಗೆ ಸೂಚಿಸುವ ಔಷಧ ಬಳಕೆ ಕುರಿತು ಅಧ್ಯಯನ

ಮಧುಮೇಹಕ್ಕೆ ನೀಡಲಾಗುವ ಔಷಧವೊಂದು, ಕೊರೊನಾ ಸೋಂಕಿನಿಂದ ಉಂಟಾಗುವ ಶ್ವಾಸಕೋಶ ಸಮಸ್ಯೆಯನ್ನು ನಿವಾರಿಸಬಲ್ಲದು ಎಂಬ ಅಂಶವನ್ನು ಈ ಅಧ್ಯಯನ ಎತ್ತಿಹಿಡಿದಿದೆ. ರಕ್ತದಲ್ಲಿನ ಸಕ್ಕರೆ ಅಂಶವನ್ನು ತಗ್ಗಿಸಲು ಮೆಟ್‌ಫಾರ್ಮಿನ್ ಎಂಬ ಔಷಧ ತೆಗೆದುಕೊಳ್ಳಲು ಸಲಹೆ ನೀಡಲಾಗುತ್ತದೆ. ಟೈಪ್ 2 ಡಯಾಬಿಟಿಸ್‌ಗೆ ಆರಂಭಿಕ ಹಂತದ ಚಿಕಿತ್ಸೆಯಲ್ಲಿ ಈ ಔಷಧ ನೀಡಲಾಗುತ್ತದೆ. ಇದನ್ನು ಕೊರೊನಾ ಸೋಂಕಿನ ಚಿಕಿತ್ಸೆಗೆ ಬಳಸಬಹುದೇ ಎಂಬ ಕುರಿತು ಅಧ್ಯಯನ ನಡೆದಿದ್ದು, ಉತ್ತಮ ಫಲಿತಾಂಶ ಲಭ್ಯವಾಗಿದೆ.

"ಶ್ವಾಸಕೋಶದ ಮೇಲಿನ ಪರಿಣಾಮ ತಡೆಯುತ್ತದೆ"

"ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ ಸ್ಯಾನ್ ಡಿಯಾಗೊ ಸ್ಕೂಲ್ ಆಫ್ ಮೆಡಿಸಿನ್" ಸಂಶೋಧಕರ ನೇತೃತ್ವದ ತಂಡ ಈ ಸಂಶೋಧನೆ ಕೈಗೊಂಡಿತ್ತು. ಮೆಟ್‌ಫಾರ್ಮಿನ್ ಔಷಧದ ಕಾರ್ಯವಿಧಾನವನ್ನು ಗುರುತಿಸಿ ಈ ಔಷಧವನ್ನು ಸೋಂಕಿತ ಇಲಿಯ ಮೇಲೆ ಪ್ರಯೋಗಿಸಿದ್ದು, ಫಲಿತಾಂಶ ಪ್ರಯೋಜನಕಾರಿಯಾಗಿರುವುದು ಕಂಡುಬಂದಿದೆ.

ಇಬ್ಬರು ಕೊರೊನಾ ಸೋಂಕಿತರ ಮೇಲೆ ಪ್ರತಿಕಾಯ ಕಾಕ್‌ಟೈಲ್ ಚಿಕಿತ್ಸೆಇಬ್ಬರು ಕೊರೊನಾ ಸೋಂಕಿತರ ಮೇಲೆ ಪ್ರತಿಕಾಯ ಕಾಕ್‌ಟೈಲ್ ಚಿಕಿತ್ಸೆ

 ರೋಗದ ಗಂಭೀರತೆ ತಡೆಯುವ ಲಕ್ಷಣ

ರೋಗದ ಗಂಭೀರತೆ ತಡೆಯುವ ಲಕ್ಷಣ

ಬ್ಯಾಕ್ಟೀರಿಯಾದ ಎಂಡೊಟಾಕ್ಸಿನ್ ಸೋಂಕಿಗೆ ಒಡ್ಡಿಕೊಂಡ ಇಲಿಗಳಿಗೆ ಈ ಮೆಟ್‌ಫಾರ್ಮಿನ್ ಔಷಧವನ್ನು ನೀಡಲಾಗಿತ್ತು. ಆಗ ಶ್ವಾಸಕೋಶದ ಸಮಸ್ಯೆಯನ್ನು ನಿವಾರಿಸಿದ ಹಾಗೂ ಸೋಂಕಿನ ಗಂಭೀರತೆಯನ್ನು ತಡೆಯುವ ಲಕ್ಷಣಗಳು ಕಂಡುಬಂದಿವೆ. ಇಲಿಗಳಲ್ಲಿ ಇದು ಸಾಬೀತಾಗಿದ್ದು, ಮನುಷ್ಯರಲ್ಲಿನ ಸಾಧ್ಯತೆಗಳ ಕುರಿತು ಇನ್ನಷ್ಟು ಅಧ್ಯಯನ ನಡೆಯಬೇಕಿದೆ.

 ಕೊರೊನಾ ರೋಗಿಗಳಿಗೆ ಉಪಯೋಗವಾಗಬಲ್ಲದೇ?

ಕೊರೊನಾ ರೋಗಿಗಳಿಗೆ ಉಪಯೋಗವಾಗಬಲ್ಲದೇ?

ತೀವ್ರತರ ಉಸಿರಾಟ ತೊಂದರೆ (Acute respiratory distress syndrome) ಸಂದರ್ಭದಲ್ಲಿ ಶ್ವಾಸಕೋಶದಲ್ಲಿ ದ್ರವ ಸೋರಿಕೆಯಾಗಿ ಉಸಿರಾಟವನ್ನು ಕಷ್ಟಕರವಾಗಿಸುತ್ತದೆ ಮತ್ತು ಅಗತ್ಯ ಅಂಗಗಳಿಗೆ ಆಮ್ಲಜನಕ ಪೂರೈಕೆಯು ಕಷ್ಟಕರವಾಗುತ್ತದೆ. ಕೊರೊನಾ ಸೋಂಕಿನಿಂದ ಆಸ್ಪತ್ರೆಗೆ ಸೇರಿದ ರೋಗಿಗಳಲ್ಲಿಯೂ ಇದೇ ಸಮಸ್ಯೆ ಹೆಚ್ಚಾಗಿ ಕಂಡುಬಂದು ಮರಣಕ್ಕೆ ಕಾರಣವಾಗಿವೆ. ಹೀಗಾಗಿ ಮೆಟ್‌ಫಾರ್ಮಿನ್ ಔಷಧ ಬಳಕೆ ಮಾಡಬಹುದೇ ಎಂಬ ಕುರಿತು ವಿಶ್ಲೇಷಣೆ ನಡೆಸಲು ಅಧ್ಯಯನ ಬುನಾದಿ ಒದಗಿಸಿದೆ. ಮನುಷ್ಯರ ಮೇಲೆ ಈ ಔಷಧ ಬಳಕೆಯ ಪ್ರಭಾವವನ್ನು ಕಂಡುಕೊಳ್ಳಬೇಕಿದೆ. ಆನಂತರವಷ್ಟೇ ಔಷಧ ಬಳಕೆ ಕುರಿತು ದೃಢೀಕರಿಸಬಹುದಾಗಿದೆ.

English summary
Diabetes drug shows promise against Covid-19 lung effects says new research,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X