• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಹೇಂದ್ರ ಸಿಂಗ್ ಧೋನಿ ಲುಂಗಿ ಲುಕ್ ನೋಡಿದ್ರಾ!

|

ನವದೆಹಲಿ, ಅ.2 : ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತೊಮ್ಮೆ ವಿಶಿಷ್ಟ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಹೊಸ ಹೇರ್ ಸ್ಟೈಲ್ ಮೂಲಕ ಮೋಡಿ ಮಾಡಿದ್ದ ಅವರು, ಸದ್ಯ ಲುಂಗಿ ತೊಟ್ಟು ಬಿಂದಾಸ್ ಫೋಸ್ ನೀಡಿದ್ದಾರೆ.

ಬಾಲಿವುಡ್ ಬಾದ್ ಷಾ ಶಾರುಕ್ ಖಾನ್ ಚೆನ್ನೈ ಎಕ್ಸ್ ಪ್ರೆಸ್ ಚಿತ್ರದಲ್ಲಿ ಲುಂಗಿ ಡ್ಯಾನ್ಸ್ ಮಾಡಿ ಪ್ರೇಕಕ್ಷರಿಗೆ ಮೋಡಿ ಮಾಡಿದ್ದರು. ಈಗ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರರು ಲುಂಗಿ ತೊಟ್ಟು, ಲುಂಗಿ ಮೇಲಿನ ತಮ್ಮ ಪ್ರೀತಿಯನ್ನು ಸಾಬೀತು ಮಾಡಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ಫೇಸ್ ಬುಕ್ ಪೇಜ್ ನಲ್ಲಿ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ತಂಡದ ಉಳಿದ ಆಟಗಾರರ ಲುಂಗಿ ಗೆಟಪ್ ಚಿತ್ರಗಳನ್ನು ಹಾಕಲಾಗಿದೆ. ರಾಂಚಿ ಮತ್ತು ನವದೆಹಲಿ ವಿಮಾನ ನಿಲ್ದಾಣಗಳಲ್ಲಿ ಧೋನಿ ಪತ್ನಿ ಸಾಕ್ಷಿ ಜೊತೆಗೆ ಲುಂಗಿ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಫ್ಯಾನ್ಸಿ ಪ್ಯಾಂಟ್ಸ್ ಡೇ ಅಂಗವಾಗಿ ಸಿಎಸ್ ಕೆ ಆಟಗಾರರು ಹೀಗೆ ಲುಂಗಿ ತೊಟ್ಟಿದ್ದಾರೆ ಎಂದು ತಂಡದ ಫೇಸ್ ಬುಕ್ ಪೇಜ್ ನಲ್ಲಿ ಹೇಳಲಾಗಿದೆ. ಚೆನ್ನೈ ತಂಡದ ಉಳಿದ ಆಟಗಾರರು ಡ್ರೆಸ್ಸಿಂಗ್ ರೂಂ ನಲ್ಲಿ ಬರ್ಮಡಾ ಚೆಡ್ಡಿ ತೊಟ್ಟು ಡಿಫೆರೆಂಟ್ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಗಳಲ್ಲಿ ಧೋನಿ ಲುಂಗಿ ಲುಕ್

ಲುಂಗಿ ಲುಕ್ ನಲ್ಲಿ ಧೋನಿ

ಲುಂಗಿ ಲುಕ್ ನಲ್ಲಿ ಧೋನಿ

ವಿಮಾನ ನಿಲ್ದಾಣದಲ್ಲಿ ಲುಂಗಿ ತೊಟ್ಟು ಎಂಎಸ್ ಧೋನಿ ಫೋಸ್ ಕೊಟ್ಟಿದ್ದು ನೋಡಿ.

ಲುಂಗಿ ಲುಕ್ ಗೆ ಸಾಕ್ಷಿ ಸಾಥ್

ಲುಂಗಿ ಲುಕ್ ಗೆ ಸಾಕ್ಷಿ ಸಾಥ್

ಮಹೇಂದ್ರ ಸಿಂಗ್ ಧೋನಿ ಲುಂಗಿ ಉಟ್ಟು ಕೊಟ್ಟ ಫೋಸ್ ಗೆ ಜೊತೆಯಾಗಿ ಪತ್ನಿ ಸಾಕ್ಷಿ ಸೇರಿಕೊಂಡಿದ್ದಾರೆ.

ಪೊಲೀಸರು ಲುಂಗಿಗೆ ಬೋಲ್ಡ್

ಪೊಲೀಸರು ಲುಂಗಿಗೆ ಬೋಲ್ಡ್

ಧೋನಿ ಲುಂಗಿ ಉಟ್ಟು ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಪೊಲೀಸರು ಧೋನಿ ಹೊಸ ವೇಷಕ್ಕೆ ಮಾರು ಹೋದರು.

ರೈನ್ ಡಿಫೆರೆಂಟ್ ಗೆಟಪ್

ರೈನ್ ಡಿಫೆರೆಂಟ್ ಗೆಟಪ್

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮತ್ತೊಬ್ಬ ಆಟಗಾರ ಸುರೇಶ್ ರೈನಾ ಡಿಫೆರೆಂಟ್ ಪೈಜಾಮಾ ತೊಟ್ಟು, ವಿಮಾನ ನಿಲ್ದಾಣದಲ್ಲಿ ಫೋಸ್ ಕೊಟ್ಟರು. ಪೊಲೀಸರು ರೈನಾ ಲುಕ್ ನೋಡುತ್ತಿದ್ದಾರೆ.

ಅಶ್ವಿನ್, ಹಸ್ಸಿ ಫ್ಯಾನ್ಸಿಡ್ರೆಸ್

ಅಶ್ವಿನ್, ಹಸ್ಸಿ ಫ್ಯಾನ್ಸಿಡ್ರೆಸ್

ಚೆನ್ನೈ ತಂಡದ ಆಟಗಾರರಾದ ಆರ್.ಅಶ್ವಿನ್ ಮತ್ತು ಮೈಕಲ್ ಹಸ್ಸಿ ಡಿಫೆರೆಂಟ್ ಪ್ಯಾಂಟ್ ತೊಟ್ಟು ಕಂಡಿದ್ದು ಹೀಗೆ.

ಮೊರ್ಕೆಲ್ ಮೋಡಿ ಮಾಡಿದ್ದು

ಮೊರ್ಕೆಲ್ ಮೋಡಿ ಮಾಡಿದ್ದು

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಲ್‌ರೌಂಡರ್ ಅಲ್ಬಿ ಮೊರ್ಕೆಲ್ ಪೈಜಾಮದಲ್ಲಿ ಕ್ಯಾಮರಾ ಕಣ್ಣಿಗೆ ಕಂಡು ಮೋಡಿ ಮಾಡಿದರು.

ಒಟ್ಟಾಗಿ ಬಂದ್ರು ನೋಡಿ

ಒಟ್ಟಾಗಿ ಬಂದ್ರು ನೋಡಿ

ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರಾದ ಎಸ್.ಬದರಿನಾಥ್, ಮುರಳಿ ವಿಜಯ್, ಆರ್. ಅಶ್ವಿನ್ ಜೊತೆಗಾಗಿ ಫೋಸ್ ಕೊಟ್ಟಿದ್ದು.

ಪೈಜಾಮಾ ಬಾಯ್ಸ್

ಪೈಜಾಮಾ ಬಾಯ್ಸ್

ಕ್ರಿಸ್ ಮೋರಿಸ್, ಬ್ರಾವೋ, ಟಾಮಿ ಪೈಜಾಮ ತೊಟ್ಟು ಕಾಣಿಸಿಕೊಂಡರು.

ಸರ್ ಸಹ ಲುಂಗಿ ತೊಟ್ರು

ಸರ್ ಸಹ ಲುಂಗಿ ತೊಟ್ರು

`ಸರ್` ಖ್ಯಾತಿಯ ರವೀಂದ್ರ ಜಡೇಜಾ ಸಹ ಲುಂಗಿ ತೊಟ್ಟರು. ಜೊತೆಯಲ್ಲಿ ರೈನಾ ಲುಂಗಿ ಉಡುತ್ತಿರುವ ಕಮಾಲ್ ಅನ್ನು ನೋಡಬಹುದು.

ಮೋಹಿತ್ ಪ್ಯಾಂಟ್ ಮೋಹ

ಮೋಹಿತ್ ಪ್ಯಾಂಟ್ ಮೋಹ

ಸಿಎಸ್ ಕೆ ತಂಡದ ವೇಗಿ ಮೋಹಿತ್ ಶರ್ಮಾ ವಿಶೇಷ ಪ್ಯಾಂಟ್ ತೊಟ್ಟು ತಮ್ಮ ಪೈಜಾಮಾ ಮೇಲಿನ ಮೋಹವನ್ನು ಪ್ರದರ್ಶಿಸಿದರು.

English summary
Forget the Mohawk hairdo, let us welcome MS Dhoni 's new look, that too in a "lungi"! Yes, Dhoni was seen at Ranchi and New Delhi airports sporting a blue colored "lungi". While the skipper was spotted in this attire and CSK team T-shirt along with his wife Sakshi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X