ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

DHFLನಿಂದ ಕೋಟ್ಯಂತರ ಮೊತ್ತದ ಸಾರ್ವಜನಿಕರ ಹಣ ಗುಳುಂ

|
Google Oneindia Kannada News

ನವದೆಹಲಿ,ಜನವರಿ 29: ಲಾಭ ರಹಿತ ಪತ್ರಿಕೋದ್ಯಮ ಸಂಸ್ಥೆ ಕೋಬ್ರಾಪೋಸ್ಟ್ ಮಂಗಳವಾರದಂದು(ಜನವರಿ 29) ಸುದ್ದಿಗೋಷ್ಠಿ ನಡೆಸಿ, ದೀವಾನ್ ಹೌಸಿಂಗ್ ಫೈನಾನ್ಸ್ ಕಾರ್ಪೋರೇಶನ್ (DHFL) ಸಂಸ್ಥೆಯು 31 ಸಾವಿರ ಕೋಟಿ ರೂ. ಸಾರ್ವಜನಿಕರ ಹಣವನ್ನು ದುರುಪಯೋಗಪಡಿಸಿದೆ ಎಂದು ಗಂಭೀರ ಆರೋಪ ಮಾಡಿದೆ.

ಕಪ್ಪು ಹಣವನ್ನು ಚಲಾವಣೆಗಾಗಿ ಇರುವ ಶೆಲ್ ಕಂಪೆನಿಗಳಿಗೆ ಸಾಲ ಮಂಜೂರು ಹಾಗೂ ಬಂಡವಾಳದ ಮೂಲಕ ಈ ಬೃಹತ್ ಮೊತ್ತದ ಅವ್ಯವಹಾರ ನಡೆದಿದೆ, ಭಾರತದಿಂದ ಹೊರಗಡೆ ಇರುವ ಸಂಸ್ಥೆಗಳಲ್ಲಿ ಅಪಾರ ಪ್ರಮಾಣ ಹೂಡಿಕೆ ಕಂಡು ಬಂದಿದ್ದು, ಇದನ್ನು ಪುನಃ ಭಾರತಕ್ಕೆ ಹೂಡಿಕೆ, ಪಕ್ಷಗಳಿಗೆ ದೇಣಿಗೆ ರೂಪದಲ್ಲಿ ಚಲಾವಣೆಗೆ ತರಲಾಗುತ್ತಿದೆ ಎಂದು ಕೋಬ್ರಾ ಪೋಸ್ಟ್ ವರದಿ ಮಾಡಿದೆ.

DHFL promoters of siphoning off Rs 31,000 crore public funds : Cobrapost

ಭಾರತವಷ್ಟೇ ಅಲ್ಲದೆ ಯುಕೆ, ದುಬೈ, ಶ್ರೀಲಂಕಾ ಹಾಗೂ ಮಾರಿಷಸ್ ನಲ್ಲಿರುವ ಸಂಸ್ಥೆಗಳ ಶೇರು / ಈಕ್ವಿಟಿ ಖರೀದಿಗೆ ಹಣವನ್ನು ಬಳಸಲಾಗಿದೆ.

ಸರಿ ಸುಮಾರು 21,477 ಕೋಟಿ ರು ಗಳನ್ನು ವಿವಿಧ ಶೆಲ್ ಕಂಪನಿಗಳಿಗೆ ಸಾಲ ಹಾಗೂ ಹೂಡಿಕೆ ಮೂಲಕ ವಾಧ್ವಾನ್ ಗಳು ನೀಡಿದ್ದಾರೆ.

ಈ ಬಗ್ಗೆ ಕಾರ್ಪೊರೇಟ್ ವ್ಯವಹಾರ ಖಾತೆ ಸಚಿವಾಲಯಕ್ಕೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಕೋಬ್ರಾ ಪೋಸ್ಟ್ ಆರೋಪಿಸಿದೆ.

ಕೋಬ್ರಾ ಪೋಸ್ಟ್ ಸಂಪಾದಕ ಅನಿರುದ್ಧ ಬಹಲ್ ಜೊತೆ, ಮಾಜಿ ವಿತ್ತ ಸಚಿವ ಯಶವಂತ ಸಿನ್ಹ ಹಾಗೂ ಹಿರಿಯ ಪತ್ರಕರ್ತ ಪ್ರೇಮ್ ಶಂಕರ್ ಝಾ ಅವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಬಿಜೆಪಿಗೆ ದೇಣಿಗೆ: ಆಡಳಿತಾರೂಢ ಬಿಜೆಪಿಗೆ 2014-15 ಹಾಗೂ 2016-17ರ ಅವಧಿಯಲ್ಲಿ 20 ಕೋಟಿ ರು ದೇಣಿಗೆ ಸಿಕ್ಕಿದೆ.

ಆರ್ ಕೆ ಡಬ್ಲ್ಯೂ ಡೆವಲಪರ್ಸ್ ಪ್ರೈ ಲಿಮಿಟೆಡ್ ಹಾಗೂ ದರ್ಶನ್ ಡೆವಲಪರ್ಸ್ ಪ್ರೈ ಲಿಮಿಟೆಡ್ ನಿಂದ ದೇಣಿಗೆ ನೀಡಲಾಗಿದ್ದು, ಈ ಕಂಪನಿಗಳು ಡಿಎಚ್ ಎಫ್ಎಲ್ ನ ವಾಧ್ವಾನ್ಸ್ ಜತೆ ಸಂಪರ್ಕ ಹೊಂದಿವೆ.

ಎರಡು ಕಂಪನಿಗಳು ಈ ದೇಣಿಗೆ ನೀಡಿದ್ದನ್ನು ತಮ್ಮ ಬ್ಯಾಲೆನ್ಸ್ ಶೀಟ್ ನಲ್ಲಿ ನಮೂದಿಸಿಲ್ಲ. ಸ್ಕಿಲ್ ರೀಟೇಲರ್ಸ್ 2 ಕೋಟಿ ರು ನೀಡಿದ ದೇಣಿಗೆ ಕೂಡಾ ಉಲ್ಲೇಖಿಸಿಲ್ಲ ಎಂದು ಕೋಬ್ರಾ ಪೋಸ್ಟ್ ಹೇಳಿದೆ.

English summary
Non-profit journalism company Cobrapost held a press conference on January 29 in New Delhi, making allegations against promoters of Dewan Housing Finance Corporation (DHFL).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X