• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಗತ್ತಿನ ಇಂದಿನ ಸಮಸ್ಯೆಗಳಿಗೆ ಬುದ್ಧನ ತತ್ವವೇ ಪರಿಹಾರ: ಮೋದಿ

|

ನವದೆಹಲಿ, ಜುಲೈ 4: ಜಗತ್ತಿನ ಇಂದಿನ ಸಮಸ್ಯೆಗಳಿಗೆ ಬುದ್ಧನ ತತ್ವವೇ ಪರಿಹಾರ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

   Corona Updates : ಒಂದೇ ದಿನದಲ್ಲಿ 22 ಸಾವಿರಕ್ಕೂ ಅಧಿಕ ಪ್ರಕರಣ | Oneindia Kannada

   ಪ್ರಧಾನಿ ನರೇಂದ್ರ ಮೋದಿ ಅವರು ಇಂಟರ್​ನ್ಯಾಷನಲ್ ಬುದ್ಧಿಸ್ಟ್ ಕಾನ್ಫರೆನ್ಸ್​ ಆಯೋಜಿಸಿರುವ ಧರ್ಮಚಕ್ರ ದಿವಸ್ ಕಾರ್ಯಕ್ರಮದಲ್ಲಿ ಇಂದು ಭಾಗವಹಿಸಿದರು. ಬುದ್ಧನ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಯುವ ಜನತೆಯಲ್ಲಿ ಆತ್ಮಸ್ಥೈರ್ಯ ಹೆಚ್ಚುತ್ತದೆ ಎಂದರು.

   ಆಷಾಢ ಪೂರ್ಣಿಮೆ ದಿನದ ನಿಮಿತ್ತ ಆಯೋಜಿಸಿರುವ ವರ್ಚುವಲ್ ಕಾರ್ಯಕ್ರಮವಾಗಿದ್ದು, ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರೂ ಕೂಡ ಪಾಲ್ಗೊಂಡಿದ್ದರು.

   ಮೋದಿ ಮಾತು: ಎಲ್ಲರಿಗೂ ಆಷಾಢ ಪೂರ್ಣಿಮೆಯ ದಿನದ ಶುಭಾಶಯಗಳು ಎಂದು ಹೇಳುತ್ತಾ ಮಾತು ಆರಂಭಿಸಿದರು.

   ಈ ದಿನವನ್ನು ಗುರುಪೂರ್ಣಿಮೆ ಎಂದೂ ಹೇಳುತ್ತಾರೆ. ಈ ದಿನ ನಮಗೆ ತಿಳಿವಳಿಕೆಯನ್ನು ನೀಡುವ ಗುರುಗಳನ್ನು ಸ್ಮರಿಸುವ ದಿವಸ. ಈ ದೃಷ್ಟಿಯಿಂದಲೇ ನಾವು ಇವತ್ತು ಭಗವಾನ್​ ಬುದ್ಧನಿಗೂ ಗೌರವ ನಮನ ಸಲ್ಲಿಸುತ್ತಿದ್ದೇವೆ.

   ಭಗವಾನ್ ಬುದ್ಧನ ತತ್ತ್ವಾದರ್ಶಗಳು ಅನೇಕ ಸಮುದಾಯಗಳ ಮತ್ತು ರಾಷ್ಟ್ರಗಳ ಏಳಿಗೆಗೆ ದಾರಿ ತೋರಿಸಿವೆ. ಕರುಣೆ ಮತ್ತು ಸಹಾನುಭೂತಿಯ ಮಹತ್ವವನ್ನು ಇವುಗಳು ಸಾರುತ್ತವೆ. ಭಗವಾನ್ ಬುದ್ಧನ ಸರಳತೆ ಚಿಂತನೆಯಲ್ಲೂ ಮತ್ತು ಕ್ರಿಯೆಯಲ್ಲೂ ಅನುಷ್ಠಾನಗೊಂಡಿವೆ ಎಂದು ಹೇಳಿದರು.

   ಇಂದು ಜಗತ್ತು ಕಂಡು ಕೇಳಿ ಅರಿಯದ ಸವಾಲುಗಳನ್ನು ಎದುರಿಸುತ್ತಿದೆ. ಈ ಸವಾಲುಗಳಿಗೆ ಪರಿಹಾರವು ಭಗವಾನ್ ಬುದ್ಧ ಅವರ ತತ್ತ್ವಾದರ್ಶಗಳಿಂದಲೇ ಸಿಗಬಹುದು. ಹಿಂದಿನ ಕಾಲದಲ್ಲಿ ಅವುಗಳು ಸಕಾಲಿಕವಾಗಿದ್ದವು. ಈಗಲೂ ಸಕಾಲಿಕವೇ ಆಗಿವೆ. ಭವಿಷ್ಯದಲ್ಲೂ ಈ ಚಿಂತನೆಗಳು ಸಕಾಲಿಕವಾಗಿಯೇ ಉಳಿಯಲಿವೆ.

   ಸಾರಾನಾಥದ ರೂಪಪಟನಾದ ಜಿಂಕೆ ಉದ್ಯಾನದಲ್ಲಿ ತನ್ನ ಐವರು ಶಿಷ್ಯಂದಿರಿಗೆ ಭಗವಾನ್ ಬುದ್ಧ ಮೊದಲ ಬಾರಿ ಧರ್ಮೋಪದೇಶ ಮಾಡಿದ ದಿನ ಆಷಾಢ ಹುಣ್ಣಿಮೆ. ಈ ದಿನವನ್ನು ಸ್ಮರಿಸುವ ಸಲುವಾಗಿ ಧರ್ಮ ಚಕ್ರ ದಿವಸ್ ಆಚರಣೆ ಮಾಡಲಾಗುತ್ತಿದೆ. ಈ ದಿನವನ್ನು ಬೌದ್ಧರು ಮತ್ತು ಹಿಂದುಗಳು ಗುರುಪೂರ್ಣಿಮೆ ಎಂದು ಜಗತ್ತಿನಾದ್ಯಂತ ಆಚರಿಸುತ್ತಾರೆ.

   English summary
   PM Modi extended greetings to all on Ashadha Poornima, said "Today the world fights extra-ordinary challenges. To these challenges, lasting solutions can come from the ideals of Lord Buddha. They were relevant in the past. They are relevant in the present. And, they will remain relevant in the future.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more