ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರ್ ಇಂಡಿಯಾಗೆ 10 ಲಕ್ಷ ರೂ. ದಂಡ ವಿಧಿಸಿದ ಡಿಜಿಸಿಎ

|
Google Oneindia Kannada News

ನವದೆಹಲಿ, ಜೂನ್ 14: ಟಿಕೆಟ್ ಹೊಂದಿದ್ದರೂ ಪ್ರಯಾಣಕ್ಕೆ ಅನುಮತಿ ನಿರಾಕರಿಸಿದ ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾಗೆ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯವು 10 ಲಕ್ಷ ರೂಪಾಯಿ ದಂಡ ವಿಧಿಸಿದೆ.

ಪ್ರಯಾಣಿಕರಿಗೆ ಅನುಮತಿ ನಿರಾಕರಿಸುವುದಕ್ಕೆ ಸಂಬಂಧಿಸಿದ ನಿಯಂತ್ರಕ ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆ ಕ್ರಮ ತೆಗೆದುಕೊಳ್ಳಲಾಗಿದೆ. ಈ ವಿಷಯವು "ಗಂಭೀರ ಕಾಳಜಿ ಮತ್ತು ಸ್ವೀಕಾರಾರ್ಹವಲ್ಲ" ಎಂದು ವಾಯುಯಾನ ಸುರಕ್ಷತೆ ನಿಯಂತ್ರಕರು ಹೇಳಿದ್ದಾರೆ.

Breaking; ಏರ್ ಏಷ್ಯಾ ಸ್ವಾಧೀನಕ್ಕೆ ಮುಂದಾದ ಏರ್ ಇಂಡಿಯಾ Breaking; ಏರ್ ಏಷ್ಯಾ ಸ್ವಾಧೀನಕ್ಕೆ ಮುಂದಾದ ಏರ್ ಇಂಡಿಯಾ

"ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯದ ಸರಣಿ ತಪಾಸಣೆ ನಡೆಸಿದಾಗ ಈ ಅಂಶ ಬೆಳಕಿಗೆ ಬಂದಿದೆ. ಬೆಂಗಳೂರು, ಹೈದರಾಬಾದ್ ಮತ್ತು ದೆಹಲಿಯಲ್ಲಿ ನಮ್ಮ ಕಣ್ಗಾವಲಿನಲ್ಲೇ ನಿಯಮಗಳನ್ನು ಅನುಸರಿಸುತ್ತಿಲ್ಲ ಎನ್ನುವುದಕ್ಕೆ ಸಾಕಷ್ಟು ನಿದರ್ಶನಗಳು ಸಿಕ್ಕಿವೆ. ಆದ್ದರಿಂದ ಏರ್‌ಲೈನ್ಸ್‌ಗೆ ಶೋಕಾಸ್ ನೋಟಿಸ್ ನೀಡಲಾಯಿತು. ವೈಯಕ್ತಿಕ ವಿಚಾರಣೆಯನ್ನು ಸಹ ನೀಡಲಾಗಿದೆ," ಎಂದು ನಿಯಂತ್ರಕರು ಪತ್ರಿಕಾ ಟಿಪ್ಪಣಿಯಲ್ಲಿ ತಿಳಿಸಿದ್ದಾರೆ.

ಯಾವುದೇ ನಿಯಮಗಳನ್ನು ಅನುಸರಿಸದಿರುವುದಕ್ಕೆ ಬೇಸರ

ಯಾವುದೇ ನಿಯಮಗಳನ್ನು ಅನುಸರಿಸದಿರುವುದಕ್ಕೆ ಬೇಸರ

ವಿಮಾನಯಾನ ಸಂಸ್ಥೆಯು "ಈ ವಿಷಯದಲ್ಲಿ ಯಾವುದೇ ನೀತಿಯನ್ನು ಹೊಂದಿಲ್ಲ. ಅಸಹಾಯಕ ಪ್ರಯಾಣಿಕರಿಗೆ ಯಾವುದೇ ಪರಿಹಾರವನ್ನು ನೀಡುತ್ತಿಲ್ಲ. ಇಂಥ ಪ್ರಕರಣಗಳಿಗೆ ಲೆಕ್ಕವೇ ಇಲ್ಲ," ಎಂದು ಹೇಳಿದೆ. ಅಧಿಕೃತ ಟಿಕೆಟ್ ಹೊಂದಿರುವ ಪ್ರಯಾಣಿಕರು ತಮ್ಮ ವಿಮಾನವನ್ನು ತಪ್ಪಿಸಿಕೊಂಡಲ್ಲಿ ಪರ್ಯಾಯ ವ್ಯವಸ್ಥೆಗಳಿಲ್ಲದೇ ಪರದಾಡಿದ ಪ್ರಕರಣಗಳ ಸಂಖ್ಯೆಯು ಗಣನೀಯ ಮಟ್ಟದಲ್ಲಿ ಏರಿಕೆ ಆಗುತ್ತಿದೆ. ಈ ನಿಟ್ಟಿನಲ್ಲಿ ವಿಮಾನಯಾನ ಸಂಸ್ಥೆಗಳು ಯಾವುದೇ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ ಎಂದು ತನ್ನ ಹೇಳಿಕೆಯಲ್ಲಿ ಡಿಜಿಸಿಎ ಉಲ್ಲೇಖಿಸಿದೆ.

10 ಲಕ್ಷ ರೂಪಾಯಿ ದಂಡ ವಿಧಿಸಿದ ಡಿಜಿಸಿಎ

10 ಲಕ್ಷ ರೂಪಾಯಿ ದಂಡ ವಿಧಿಸಿದ ಡಿಜಿಸಿಎ

ಅಧಿಕೃತ ಟಿಕೆೆಟ್ ಹೊಂದಿರುವ ಪ್ರಯಾಣಿಕರು ವಿಮಾನ ಏರುವುದಕ್ಕೆ ಅನುಮತಿ ನೀಡದಿರುವುದು ಗಂಭೀರ ಮತ್ತು ಕಾಳಜಿ ವಹಿಸಬೇಕಾದ ಅಂಶವಾಗಿದೆ. ಇದನ್ನು ಒಪ್ಪಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಶೋಕಾಸ್ ನೋಟಿಸ್‌ನಲ್ಲಿ ವಿವರಿಸಿರುವ ನಿರ್ದಿಷ್ಟ ಪ್ರಕರಣಗಳಲ್ಲಿ, ಏರ್ ಇಂಡಿಯಾದ ಸಲ್ಲಿಕೆಗಳನ್ನು ಪರಿಶೀಲಿಸಿದ ನಂತರ, ಜಾರಿ ಕ್ರಮದ ಭಾಗವಾಗಿ, ಸಕ್ಷಮ ಪ್ರಾಧಿಕಾರವು 10 ಲಕ್ಷ ರೂಪಾಯಿಗಳ ದಂಡವನ್ನು ವಿಧಿಸಿದೆ ಎಂದು ಡಿಜಿಸಿಎ ಹೇಳಿದೆ. ಇದರ ಜೊತೆಗೆೆ ಸಮಸ್ಯೆಯನ್ನು ಪರಿಹರಿಸಲು ತಕ್ಷಣವೇ ವ್ಯವಸ್ಥೆಗಳನ್ನು ಹಾಕಲು ವಿಮಾನಯಾನ ಸಂಸ್ಥೆಗೆ ಸಲಹೆ ನೀಡಲಾಗಿದೆ. ವಿಫಲವಾದರೆ ವಾಯುಯಾನ ಸುರಕ್ಷತೆ ನಿಯಂತ್ರಕವು ಮುಂದಿನ ಕ್ರಮವನ್ನು ತೆಗೆದುಕೊಳ್ಳುತ್ತದೆ.

ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದಿದ್ದರೆ ದಂಡ

ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದಿದ್ದರೆ ದಂಡ

ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯದ ಪ್ರಕಾರ, ಅಧಿಕೃತ ಟಿಕೆಟ್ ಹೊಂದಿರುವ ಪ್ರಯಾಣಿಕರಿಗೆ ಬೋರ್ಡಿಂಗ್ ನಿರಾಕರಿಸಿದರೆ, ವಿಮಾನಯಾನ ಸಂಸ್ಥೆಯು ಪರ್ಯಾಯ ವ್ಯವಸ್ಥೆ ಅಥವಾ ಪರಿಹಾರವನ್ನು ಒದಗಿಸಬೇಕು. ಒಂದು ವೇಳೆ ವಿಮಾನಯಾನ ಸಂಸ್ಥೆಯು ಹೇಳಿದ ಪ್ರಯಾಣಿಕರಿಗೆ ಒಂದು ಗಂಟೆಯೊಳಗೆ ಪರ್ಯಾಯ ವಿಮಾನವನ್ನು ವ್ಯವಸ್ಥೆ ಮಾಡಲು ಸಾಧ್ಯವಾದರೆ, ಯಾವುದೇ ಪರಿಹಾರವನ್ನು ಪಾವತಿಸಬೇಕಾಗಿಲ್ಲ. ಆದಾಗ್ಯೂ, ಮುಂದಿನ 24 ಗಂಟೆಗಳಲ್ಲಿ ಏರ್‌ಲೈನ್ ಪರ್ಯಾಯ ವ್ಯವಸ್ಥೆಯನ್ನು ಒದಗಿಸಲು ಸಾಧ್ಯವಾದರೆ, 10,000 ರೂಪಾಯಿವರೆಗಿನ ಪರಿಹಾರ ನೀಡಬೇಕು ಎಂದು ನಿಯಮಗಳಲ್ಲಿ ಸೂಚಿಸಲಾಗುತ್ತದೆ. 24 ಗಂಟೆಗಳನ್ನೂ ಮೀರಿದರೆ 20,000 ರೂ.ವರೆಗೆ ಪರಿಹಾರವನ್ನು ನಿಗದಿಪಡಿಸಲಾಗಿದೆ.

ವಿಮಾನಯಾನ ಸಂಸ್ಥೆಗಳಿಗೆ ಡಿಜಿಸಿಎ ಎಚ್ಚರಿಕೆ

ವಿಮಾನಯಾನ ಸಂಸ್ಥೆಗಳಿಗೆ ಡಿಜಿಸಿಎ ಎಚ್ಚರಿಕೆ

ಕಳೆದ ತಿಂಗಳು, ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರಿಗೆ ಬೋರ್ಡಿಂಗ್ ನಿರಾಕರಿಸಿದ ಹಲವಾರು ಪ್ರಕರಣಗಳ ನಂತರ, ಡಿಜಿಸಿಎ ಎಲ್ಲಾ ವಿಮಾನಯಾನ ಸಂಸ್ಥೆಗಳಿಗೆ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲು ನಿರ್ದೇಶಿಸಿದೆ. ತನ್ನ ಪತ್ರದಲ್ಲಿ, ಯಾವುದೇ ಅನುಸರಣೆಯನ್ನು ಅನುಸರಿಸದಿದ್ದಲ್ಲಿ ಆರ್ಥಿಕ ದಂಡವನ್ನು ವಿಧಿಸುವುದು ಸೇರಿದಂತೆ ತಪ್ಪಾದ ವಿಮಾನಯಾನ ಸಂಸ್ಥೆಯ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ವಿಮಾನಯಾನ ಸಂಸ್ಥೆಗಳಿಗೆ ಎಚ್ಚರಿಕೆ ನೀಡಿತ್ತು.

English summary
Directorate General of Civil Aviation fines Air India 10 lakh rupees for denying boarding to passengers with valid tickets. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X