ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಗೇಜ್ ಇಲ್ಲದಿದ್ದರೆ ಕಡಿಮೆಯಾಗಲಿದೆ ವಿಮಾನ ಪ್ರಯಾಣ ದರ; ಇಲ್ಲಿದೆ ಮಾಹಿತಿ...

|
Google Oneindia Kannada News

ನವದೆಹಲಿ, ಫೆಬ್ರವರಿ 26: ಲಗೇಜ್ ಇಲ್ಲದ ಅಥವಾ ಕೇವಲ ಕ್ಯಾಬಿನ್ ಬ್ಯಾಗೇಜ್ ಹೊಂದಿರುವ ಪ್ರಯಾಣಿಕರಿಗೆ ದೇಶೀಯ ವಿಮಾನ ಪ್ರಯಾಣ ದರದಲ್ಲಿ ರಿಯಾಯಿತಿ ನೀಡಲು ನಾಗರೀಕ ವಿಮಾನಯಾನ ನಿರ್ದೇಶನಾಲಯ ಅವಕಾಶ ಮಾಡಿಕೊಟ್ಟಿದೆ.

ಅತಿ ಕಡಿಮೆ ಲಗೇಜ್‌ನೊಂದಿಗೆ, ದೇಶದ ಒಳಗೆ ವಿಮಾನ ಯಾನ ಕೈಗೊಳ್ಳುವವರಿಗೆ ಶೀಘ್ರವೇ ವಿಮಾನ ಪ್ರಯಾಣ ದರದಲ್ಲಿ ರಿಯಾಯಿತಿ ದೊರೆಯುವ ಸೂಚನೆಗಳು ಸಿಕ್ಕಿವೆ. ಮುಂದೆ ಓದಿ...

ಭಾರತದಲ್ಲಿ ವಿಮಾನಗಳ ಟಿಕೆಟ್ ದರ ಏರಿಕೆಯಾಗಲಿದೆ: ಕಾರಣ ಏನು?ಭಾರತದಲ್ಲಿ ವಿಮಾನಗಳ ಟಿಕೆಟ್ ದರ ಏರಿಕೆಯಾಗಲಿದೆ: ಕಾರಣ ಏನು?

 ಏಳು ಕೆ.ಜಿ.ತೂಕದ ಲಗೇಜ್ ಕೊಂಡೊಯ್ಯಬಹುದು

ಏಳು ಕೆ.ಜಿ.ತೂಕದ ಲಗೇಜ್ ಕೊಂಡೊಯ್ಯಬಹುದು

ಪ್ರಯಾಣಿಕರು ಸುಮಾರು ಏಳು ಕೆ.ಜಿ ತೂಕದವರೆಗೂ ಕ್ಯಾಬಿನ್ ಬ್ಯಾಗೇಜ್ ಅನ್ನು ಉಚಿತವಾಗಿ ಕೊಂಡೊಯ್ಯಲು ಅವಕಾಶವಿದೆ. ವಿಮಾನ ಪ್ರಯಾಣ ದರದಲ್ಲಿ ರಿಯಾಯಿತಿ ಪಡೆಯಲು ಯಾವುದೇ ಚೆಕ್ ಇನ್ ಬ್ಯಾಗ್ ಗಳಿಲ್ಲದೇ ಪ್ರಯಾಣಿಸುತ್ತಿರುವುದಾಗಿ ಬುಕಿಂಗ್ ಸಮಯದಲ್ಲಿ ಪ್ರಯಾಣಿಕರು ನಮೂದಿಸುವುದು ಅವಶ್ಯಕವಾಗಿದೆ.

 ಫ್ರೀ ಬ್ಯಾಗೇಜ್ ಅಥವಾ ಜೀರೋ ಬ್ಯಾಗೇಜ್ ಆಯ್ಕೆ

ಫ್ರೀ ಬ್ಯಾಗೇಜ್ ಅಥವಾ ಜೀರೋ ಬ್ಯಾಗೇಜ್ ಆಯ್ಕೆ

ಗುರುವಾರ ಡಿಜಿಸಿಎ ಈ ಆದೇಶ ಹೊರಡಿಸಿದ್ದು, ಲಘು ಲಗೇಜ್ ತರುವ ಪ್ರಯಾಣಿಕರಿಗೆ ಅಥವಾ ಚೆಕ್ ಇನ್ ಬ್ಯಾಗೇಜ್ ತರುವವರಿಗೆ ಸಮಂಜಸ ದರ ವಿಧಿಸಲು ತಿಳಿಸಿದೆ. ಫ್ರೀ ಬ್ಯಾಗೇಜ್ ಅಲೊಯನ್ಸ್, ಜೀರೋ ಬ್ಯಾಗೇಜ್ ಅಥವಾ ಚೆಕ್ ಇನ್ ಬ್ಯಾಗೇಜ್ ಆಯ್ಕೆಗಳನ್ನು ಪ್ರಯಾಣಿಕರಿಗೆ ನೀಡಲು ಅವಕಾಶವಿರುವುದಾಗಿ ತಿಳಿಸಿದೆ.

 ಇಳಿಕೆಯಾಗಲಿದೆ ಪ್ರಯಾಣ ದರ

ಇಳಿಕೆಯಾಗಲಿದೆ ಪ್ರಯಾಣ ದರ

ಕೊರೊನಾ ಸೋಂಕಿನ ಕಾರಣದಿಂದಾಗಿ, ಮಾರ್ಚ್‌ನಲ್ಲಿ ಎರಡು ತಿಂಗಳ ಕಾಲ ದೇಶೀಯ ವಿಮಾನ ಸಂಚಾರ ಸ್ಥಗಿತಗೊಳಿಸುವ ಮುನ್ನ ವಿಮಾನ ಯಾನ ಸಂಸ್ಥೆಗಳು ದರ ವಿಧಿಸುತ್ತಿದ್ದು, ಇದು ಗರಿಷ್ಠ 200ರೂಗಳಷ್ಟು ಇಳಿಕೆಯಾಗಲಿದೆ ಎಂದು ತಿಳಿದುಬಂದಿದೆ.

 ಬುಕ್ಕಿಂಗ್ ಸಮಯದಲ್ಲಿ ಮಾಹಿತಿ

ಬುಕ್ಕಿಂಗ್ ಸಮಯದಲ್ಲಿ ಮಾಹಿತಿ

ಬುಕ್ಕಿಂಗ್ ಸಮಯದಲ್ಲಿ ಅಥವಾ ವಿಮಾನ ನಿಲ್ದಾಣದ ಟಿಕೆಟ್ ಕೌಂಟರ್‌ನಲ್ಲಿ ಈ ಶುಲ್ಕಗಳ ಬಗ್ಗೆ ಪ್ರಯಾಣಿಕರ ಗಮನಕ್ಕೆ ತರಬೇಕು ಎಂಬ ಷರತ್ತು ಕೂಡ ವಿಮಾನಯಾನ ಸಂಸ್ಥೆಗಳ ಮುಂದಿದೆ. ಜೊತೆಗೆ ಲಗೇಜ್‌ಗಳಿಗೆ ವಿಧಿಸುವ ಶುಲ್ಕಗಳು ಸಮಂಜಸವಾಗಿರಬೇಕು. ಟಿಕೆಟ್ ಕಾಯ್ದಿರಿಸುವ ಸಮಯದಲ್ಲಿ ಪ್ರಯಾಣಿಕರಿಗೆ ಈ ಸೌಲಭ್ಯದ ಕುರಿತು ವಿವರಿಸಬೇಕು ಹಾಗೆಯೇ ಟಿಕೆಟ್ ನಲ್ಲಿಯೂ ಮುದ್ರಿಸಬೇಕು ಎಂದು ತಿಳಿದುಬಂದಿದೆ.

English summary
DGCA has allowed domestic carriers to give concessions in ticket prices to passengers who carry no baggage or only cabin baggage,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X