ವಿಜಯ್ ಮಲ್ಯ 'ಮಣ್ಣಿನ ಮಗ' ಎಂದ ದೇವೇಗೌಡ

Subscribe to Oneindia Kannada

ಬೆಂಗಳೂರು, ಮಾರ್ಚ್, 13: ಮೈತುಂಬಾ ಸಾಲ ಮಾಡಿಕೊಂಡಿರುವ ವಿಜಯ್ ಮಲ್ಯ ಅವರ ಪರ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಬ್ಯಾಟ್ ಬೀಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ದೇವೇಗೌಡ, ಮಲ್ಯ ಎಲ್ಲಿಗೂ ತಲೆ ಮರೆಸಿಕೊಂಡು ಹೋಗಿಲ್ಲ. ಮುಂಬೈನಲ್ಲಿ ಅವರ ಆಸ್ತಿ ಇದೆ, ಬೆಂಗಳೂರಿನಲ್ಲಿ ಇದೆ, ವಿದೇಶಗಳಲ್ಲೂ ಇದೆ ಮಲ್ಯ ಅದು ಹೇಗೆ ಪರಾರಿಯಾಗುತ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಜತೆಗೆ ಮಾಧ್ಯಮಗಳ ಮೇಲೂ ಅಸಮಾಧಾನ ಹೊರಹಾಕಿದ್ದಾರೆ.[ಮಲ್ಯ ಬಗ್ಗೆ ಕರ್ನಾಟಕದ ರಾಜಕಾರಣಿಗಳು ಹೇಳುವುದೇನು?]

jds

ಬ್ಯಾಂಕುಗಳಲ್ಲಿ ಸಾಲ ಉಳಿಸಿಕೊಂಡ ಉದ್ಯಮಿಗಳು, ರಾಜಕಾರಣಿಗಳು ಭಾರತದಲ್ಲಿ ಸಾಕಷ್ಟು ಮಂದಿ ಇದ್ದಾರೆ. ಮಲ್ಯ ಅವರೊಬ್ಬರ ಬಗ್ಗೆಯೇ ಮಾತನಾಡುತ್ತಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.[ಟಿಪ್ಪು ಖಡ್ಗ ತಂದ ಮಲ್ಯರ ಗತಕಾಲದ ವೈಭವ ಹೇಗಿತ್ತು?]

ಮಲ್ಯ ಕರ್ನಾಟಕದ ಮಣ್ಣಿನ ಮಗ. ಕರ್ನಾಟಕವೇ ಅವರ ಹುಟ್ಟಿದ ಊರು. ತಪ್ಪು ಮಾಡಿದ್ದರೆ ಕಾನೂನು ಪ್ರಕಾರ ಶಿಕ್ಷೆಯಾಗುತ್ತದೆ. ಆದರೆ, ಲೋಕಸಭೆ-ರಾಜ್ಯಸಭೆಯಲ್ಲಿ ಅವರ ಬಗ್ಗೆ ಚರ್ಚೆ ಮಾಡುವುದು ಸರಿಯಲ್ಲ. ಸಾಲಕ್ಕೆ ಹೆದರಿ ವಿದೇಶಕ್ಕೆ ಪರಾರಿಯಾಗಿದ್ದಾರೆ ಎಂದು ಹೇಳುವುದು ಸರಿಯಲ್ಲ ಎಂದು ಹೇಳಿದ್ದಾರೆ.[ಸಂಥಿಂಗ್ ವಿತ್ ಶಾಮ್ ನಲ್ಲಿ ಮಲ್ಯ, ದರ್ಶನ್ ಬಗ್ಗೆ, ಕ್ಲಿಕ್ ಮಾಡಿ]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former Prime Minister HD Deve Gowda termed liquor baron Vijay Mallya who is believed to be in London, as son of Karnataka. Deve Gowda is not the first politician who came in defence of Mallya. Former Jammu and Kashmir chief minister also termed him gentleman.
Please Wait while comments are loading...