ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂತರಿಕ್ಷ್‌-ದೇವಾಸ್ ಡೀಲ್ ಪ್ರಕರಣದ Timeline

|
Google Oneindia Kannada News

ನವದೆಹಲಿ, ಜನವರಿ 18: ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಭಾರತದಲ್ಲಿ ಆಂತರಿಕ್ಷ್ ಹಾಗೂ ದೇವಾಸ್ ಮಲ್ಟಿಮೀಡಿಯಾ ಡೀಲ್ ಪ್ರಕರಣ ಭಾರಿ ಸದ್ದು ಮಾಡುತ್ತಿದೆ.

ಈ ಪ್ರಕರಣ ಕುರಿತು ಸುದ್ದಿಗೋಷ್ಠಿ ನಡೆಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 16 ವರ್ಷಗಳ ಹಿಂದಿನ ಒಪ್ಪಂದ ಹಾಗೂ ಕಾಂಗ್ರೆಸ್ ಸರ್ಕಾರ ನಡೆಸಿದ ಭ್ರಷ್ಟಾಚಾರವನ್ನು ಬಿಚ್ಚಿಟ್ಟಿದ್ದಾರೆ.

ಯುಪಿಎ ನೇತೃತ್ವದ ಕಾಂಗ್ರೆಸ್ ಸರ್ಕಾರ ನಡೆಸಿದ ಮತ್ತೊಂದು ಅತೀ ದೊಡ್ಡ ಹಗರಣ ಇದು ಎಂದು ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

Devas Multimedia-Antrix Deal: Here Is The Timeline Of Ongoing Tussle In Kannada

ಸೋಮವಾರ(ಜ.18) ಅಂತರಿಕ್ಷ್ ಹಾಗೂ ದೇವಾಸ್ ಮಲ್ಟಿಮೀಡಿಯಾ ನಡುವಿನ ಒಪ್ಪಂದ ರದ್ದು ಮಾಡಿದ ಕೇಂದ್ರ ಸರ್ಕಾರ ಪರಿಹಾರ ಮೊತ್ತವಾಗಿ 7,800 ಕೋಟಿ ರೂಪಾಯಿ ನೀಡಬೇಕು ದೇವಾಸ್ ಮಲ್ಟಿಮೀಡಿಯಾ ಕಾನೂನು ಹೋರಾಟ ಮಾಡಿತ್ತು. ಈ ವೇಳೆ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯ (NCLAT)ನೀಡಿದ ತೀರ್ಪವನ್ನು ಸುಪ್ರೀಂ ಕೋರ್ಟ್ ಪುನರುಚ್ಚರಿಸಿತ್ತು.

ಬೆಂಗಳೂರು ಮೂಲದ ದೇವಾಸ್ ಮಲ್ಟಿಮೀಡಿಯಾ ಕಂಪನಿಯನ್ನು ಮುಚ್ಚಲು ಕೋರಿದ್ದ ಆಂತರಿಕ್ಷ್ ಮನವಿಯನ್ನು ಸುಪ್ರೀಂ ಕೋರ್ಟ್ ಪುರಸ್ಕರಿಸಿತ್ತು. ಈ ಕುರಿತು ಕಾಂಗ್ರೆಸ್ ಸರ್ಕಾರ ನಡೆಸಿದ ಹಗರಣವನ್ನು ನಿರ್ಮಲಾ ಸೀತಾರಾಮನ್ ದಾಖಲೆ ಸಮೇತ ವಿವರಿಸಿದ್ದಾರೆ.

ಒಪ್ಪಂದದ ಮೂಲಕ ಇಸ್ರೋ ಪರಿಶ್ರಮದ ಸ್ಯಾಟಲೈಟ್ ಸೇವೆಗಳನ್ನು ಭಾರತದಲ್ಲಿ ನೀಡಲು ದೇವಾಸ್ ಮಲ್ಟಿಮೀಡಿಯಾ ಕಂಪನಿ ಹಕ್ಕು ಪಡೆದಿತ್ತು. ಒಪ್ಪಂದ ವೇಳೆ ದೇವಾಸ್ ಸರ್ವೀಸಸ್ ವಿಭಾಗ, ದೇವಾಸ್ ಮಲ್ಟಿಮೀಡಿಯಾ ಡಿವೈಸ್ ಮೂಲಕ ಸ್ಯಾಟಲೈಟ್ ಸೇವೆಗಳನ್ನು ಭಾರತದಲ್ಲಿ ದೇವಾಸ್ ಟೆಕ್ನಾಲಜಿ ವಿಭಾಗದ ಮೂಲಕ ನೀಡಲಾಗುತ್ತದೆ ಎಂದು ದೇವಾಸ್ ಮಲ್ಟಿಮೀಡಿಯಾ ಕಂಪನಿ ಹೇಳಿತ್ತು.

ಆದರೆ ಒಪ್ಪಂದ ವೇಳೆ ಹಾಗೂ ಬಳಿಕ ದೇವಾಸ್ ಮಲ್ಟಿಮೀಡಿಯಾದಲ್ಲಿ ದೇವಾಸ್ ಸರ್ವೀಸಸ್, ದೇವಾಸ್ ಟೆಕ್ನಾಲಜಿ ಎಂಬ ಸಂಸ್ಥೆಗಳೇ ಇರಲಿಲ್ಲ. ಇಷ್ಟೇ ಅಲ್ಲ ಸೇವೆ ನೀಡುವ ಎಲ್ಲಾ ಭರವಸೆಗಳು ಕೇವಲ ಒಪ್ಪಂದಕ್ಕಾಗಿ ಮಾತ್ರ ಸೀಮಿತವಾಗಿತ್ತು. ಇದನ್ನು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ.

ಬೆಂಗಳೂರಿನ ದೇವಾಸ್ ಮಲ್ಟಿಮೀಡಿಯಾ ಸುಳ್ಳು ಮಾಹಿತಿ ನೀಡಿ ವಿದೇಶದಲ್ಲಿ ಭಾರಿ ಹಣ ಹೂಡಿಕೆ ಮಾಡಿಕೊಂಡಿತ್ತು. ಇದರ ಜೊತೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO) ಅಂಗಸಂಸ್ಥೆಯಾದ ಆಂತರಿಕ್ಷ್ ಜೊತೆ ಅಕ್ರಮ ಒಪ್ಪಂದ ಮಾಡಿಕೊಂಡಿತ್ತು. ಸ್ಯಾಟಲೈಟ್ ಮಲ್ಟಿಮಿಡಿಯಾ ಹಕ್ಕು ಹೊಂದಿದೆ ಎಂದು ಸುಳ್ಳು ಮಾಹಿತಿ ಮೂಲಕ ವಿದೇಶಗಳಿಂದ ಹಣ ಹೂಡಿಕೆ ಮಾಡಿ ಅತೀ ದೊಡ್ಡ ಅಕ್ರಮ ಎಸೆಗಿತ್ತು. ಇದು ಸಿಬಿಐ ನಡೆಸಿದ ತನಿಖೆಯಲ್ಲಿ ಬಹಿರಂಗವಾಗಿದೆ. ಸಿಬಿಐ ಪ್ರಕರಣ ವಿಚಾರಣೆ ಬೆನ್ನಲ್ಲೇ ಇಡೀ ದೇವಾಸ್ ಮಲ್ಟಿಮೀಡಿಯಾದ 80 ಕೋಟಿ ರೂಪಾಯಿ ಆಸ್ತಿಯನ್ನು ಜಪ್ತಿ ಮಾಡಿತ್ತು

-ಯುಪಿಎ ಸರ್ಕಾರ 2005ರಲ್ಲಿ ಒಪ್ಪಂದಕ್ಕೆ ಸಹಿ ಮಾಡಿರುವುದು ವಂಚನೆ ಕಂಪನಿ ಜೊತೆಗೆ ಅನ್ನೋದು 2011ರಲ್ಲಿ ಅರಿವಿಗೆ ಬಂದಿದೆ. ಹೀಗಾಗಿ ಸರ್ಕಾರದ ಅಂಗ ಸಂಸ್ಥೆಯಾಗಿರುವ ಆಂತರಿಕ್ಷ್ ಹಾಗೂ ದೇವಾಸ್ ಮಲ್ಟಿಮೀಡಿಯಾ ಒಪ್ಪಂದವನ್ನು ರದ್ದುಗೊಳಿಸಿತು.

Devas Multimedia-Antrix Deal: Here Is The Timeline Of Ongoing Tussle In Kannada

-ಆಂತರಿಕ್ಷ್ ಅಥವಾ ಅಂತರಿಕ್ಷ್ ಕಾರ್ಪೋರೇಶ್ ಲಿಮಿಡೆಟ್ ದೇವಾಸ್ ಜೊತೆಗಿನ ಒಪ್ಪಂದವನ್ನು 2011ರಲ್ಲಿ ಯುಪಿ ಸರ್ಕಾರದ ಸೂಚನೆಯಂತೆ ರದ್ದು ಮಾಡಿತು. ಇದರ ವಿರುದ್ದ ದೇವಾಸ್ ಮಲ್ಟಿಮೀಡಿಯಾ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯ ಹಾಗೂ ಅಂತಾರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ ಕದ ತಟ್ಟಿತ್ತು. 2011ರಲ್ಲಿ ಯುಪಿ ಸರ್ಕಾರ ಒಪ್ಪಂದ ರದ್ದು ಮಾಡಿ ಆಂತರಿಕ್ಷ ಸಂಸ್ಥೆಗೆ ಈ ಭ್ರಷ್ಟಾಚಾರಾ ಹಾಗೂ ವಂಚನೆ ಕುರಿತು ದೇವಾಸ್ ಮಲ್ಟಿಮೀಡಿಯಾ ಜೊತೆಗೆ ವ್ಯವಹರಿಸಲು ಮಧ್ಯಸ್ಥಗಾರನ ನೇಮಕ ಮಾಡಲು ಸೂಚಿಸಿತ್ತು.

-2015ರಲ್ಲಿ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಮಂಡಳಿ ಕೇಂದ್ರ ಸರ್ಕಾರದ ಅಂಗಸಂಸ್ಥೆ ಆಂತರಿಕ್ಷ್ ಒಪ್ಪಂದ ರದ್ದು ಮಾಡಿ ನಷ್ಟಮಾಡಿದ ಕಾರಣಕ್ಕೆ 7,800 ಕೋಟಿ ರೂಪಾಯಿ ಪರಿಹಾರವನ್ನು ದೇವಾಸ್ ಮಲ್ಟಿಮೀಡಿಯಾ ಕಂಪನಿಗೆ ನೀಡಲು ಆದೇಶಿಸಿತ್ತು.

-2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಈ ಕುರಿತು ಈ ಪ್ರಕರಣ ಕುರಿತು ಕಾನೂನು ಹೋರಾಟಕ್ಕೆ ಮುಂದಾಗಿತ್ತು.

-ದೇವಾಸ್ 2018ರಲ್ಲಿ ಅಮೆರಿಕಾ ಸೇರಿದಂತೆ ವಿಶ್ವದ ಹಲೆವು ಕೋರ್ಟ್‌ಗಳಲ್ಲಿ ಮಧ್ಯಸ್ಥಿಕೆ ತೀರ್ಪು ಜಾರಿ ಮಾಡುವಂತೆ ಮನವಿ ಮಾಡಿತ್ತು. ಇದೇ ವೇಳೆ ಅಮೆರಿಕ ನ್ಯಾಯಾಲಯ 2020ರಲ್ಲಿ ದೇವಾಸ್ ಪರ ತೀರ್ಪು ನೀಡಿತ್ತು.

-2021ರಲ್ಲಿ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ ಆಂತರಿಕ್ಷ್‌ ಶಿಫಾರಸಿನ ಮೇರೆಗೆ ದೇವಾಸ್‌ ಅನ್ನು ಮುಕ್ತಾಯಗೊಳಿಸುವಂತೆ ಆದೇಶ ನೀಡಿತ್ತು. ಮೋಸ ಮತ್ತು ಕಾನೂನು ಬಾಹಿರ ಉದ್ದೇಶಗಳಿಗಾಗಿ ರಚಿಸಲಾಗಿದೆ ಎಂದು ಹೇಳಲಾಗಿತ್ತು.

-2022ರಲ್ಲಿ ಸತತ ಹೋರಾಟ ಮಾಡಿದ ಕೇಂದ್ರ ಸರ್ಕಾರ ಇದೀಗ ಒಪ್ಪಂದ ಹಾಗೂ ದೇವಾಸ್ ನಡೆಸಿದ ಅಕ್ರಮ ಹಾಗೂ ವಂಚನೆಗಳನ್ನು ದಾಖಲೆ ಸಮೇತ ಕೋರ್ಟ್ ಮುಂದೆ ಹಾಜರಪಡಿಸಿತು. ಹೀಗಾಗಿ ನಿನ್ನೆ ಸುಪ್ರೀಂ ಕೋರ್ಟ್ ದೇವಾಸ್ ಮಲ್ಟಿಮೀಡಿಯಾ ಸಂಸ್ಥೆಯನ್ನು ಮುಚ್ಚುವಂತೆ ಕೋರಿದ್ದ ಆಂತರಿಕ್ಷ್ ಮನವಿಯನ್ನು ಸುಪ್ರೀಂ ಕೋರ್ಟ್ ಪುರಸ್ಕರಿಸಿತು.

English summary
The Supreme Court has upheld the NCLAT decision to wind up Devas Multimedia. This is the first legal victory for Antrix Corporation. Here is a timeline of events of the Antrix-Devas deal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X