ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಪ್ರಿಲ್ 01ರಿಂದ ದೇಶ ಬದಲಾಗುತ್ತಿದೆ, ಏನೆಲ್ಲ ವ್ಯವಸ್ಥೆ ಬದಲು?

ಏಪ್ರಿಲ್ 01, 2017ರಿಂದ ದೇಶವ್ಯಾಪ್ತಿ ಅನೇಕ ವ್ಯವಸ್ಥೆಗಳು ಬದಲಾವಣೆ ಒಳಪಡುತ್ತಿವೆ. ಹೊಸ ವ್ಯವಸ್ಥೆಯಲ್ಲಿ ಏನೆಲ್ಲ ಬದಲಾವಣೆಯಾಗಲಿದೆ ಇಲ್ಲಿದೆ ಪೂರ್ಣ ವಿವರ...

By Mahesh
|
Google Oneindia Kannada News

ಏಪ್ರಿಲ್ 01, 2017ರಿಂದ ದೇಶವ್ಯಾಪ್ತಿ ಅನೇಕ ವ್ಯವಸ್ಥೆಗಳು ಬದಲಾವಣೆ ಒಳಪಡುತ್ತಿವೆ. ಹೊಸ ವ್ಯವಸ್ಥೆಯಲ್ಲಿ ಏನೆಲ್ಲ ಬದಲಾವಣೆಯಾಗಲಿದೆ ಇಲ್ಲಿದೆ ಪೂರ್ಣ ವಿವರ...

ಅಪನಗದೀಕರಣ ಜಾರಿಗೊಂಡ ಬಳಿಕ ನೋಟು ಜಮೆ ಮಾಡಲು ಕೊನೆ ದಿನಾಂಕ, ಹೊಸ ಐಟಿ ರಿಟರ್ನ್ಸ್ ಅರ್ಜಿ, ಎಸ್ ಬಿಐಯಲ್ಲಿ ಕನಿಷ್ಠ ಬ್ಯಾಲೆನ್ಸ್ ಮೊತ್ತ, ಪಿಪಿಎಫ್, ವಿಕಾಸ್ ಪತ್ರ ಬಡ್ಡಿದರ, ಬಿಎಸ್ 3 ವಾಹನಗಳ ಮಾರಾಟ ನಿರ್ಬಂಧ, ಹೆದ್ದಾರಿಗಳಲ್ಲಿ ಮದ್ಯ ಮಾರಾಟಕ್ಕೆ ನಿರ್ಬಂಧ ಹೀಗೆ ಅನೇಕ ಬದಲಾವಣೆಗಳನ್ನು ಕಾಣಬಹುದು.

ಇದೆಲ್ಲದರ ಜತೆಗೆ ಕೇಂದ್ರ ಬಜೆಟ್ ನಲ್ಲಿ ಘೋಷಿಸಿದ ಅನೇಕ ಅಂಶಗಳು ಏಪ್ರಿಲ್ 01ರಿಂದ ಜಾರಿಗೆ ಬರಲಿವೆ. ಯಾವುದು ಏರಿಕೆ? ಯಾವುದು ಇಳಿಕೆ? ಎಂಬ ಲೆಕ್ಕಾಚಾರ ಹಾಕಿ ನಿಮ್ಮ ನಿಮ್ಮ ಮನೆ ಬಜೆಟ್ ತಯಾರಿಸಿಕೊಳ್ಳುವುದು ಒಳಿತು.

ಪಿಪಿಎಫ್ ಬಡ್ಡಿದರ ಇಳಿಕೆ

ಪಿಪಿಎಫ್ ಬಡ್ಡಿದರ ಇಳಿಕೆ

ಪಿಪಿಎಫ್, ಕಿಸಾನ್ ವಿಕಾಸ್ ಪತ್ರ ಮತ್ತು ಸುಕನ್ಯ ಸಮೃದ್ಧಿ ಯೋಜನೆ ಇತ್ಯಾದಿ ಸಣ್ಣ ಉಳಿತಾಯ ಯೋಜನೆಗಳ ಮೇಲೆ ಏಪ್ರಿಲ್-ಜೂನ್ ತ್ರೈಮಾಸಿಕ ಅವಧಿಗೆ ಅನುಗುಣವಾಗಿ ಶೇ. 0.1ರಷ್ಟು ಬಡ್ಡಿದರವನ್ನು ಕಡಿಮೆ ಮಾಡಲಾಗಿದೆ. ಈ ಕುರಿತು ಕೇಂದ್ರ ಸರ್ಕಾರ ಮಾರ್ಚ್ 31ರಂದು ಅಧಿಕೃತ ಪ್ರಕಟಣೆ ಹೊರಡಿಸಿದೆ.[ವಿವರ ಇಲ್ಲಿ ಓದಿ]

ಎಸ್ ಬಿಐ ಕನಿಷ್ಠ ಬ್ಯಾಲೆನ್ಸ್

ಎಸ್ ಬಿಐ ಕನಿಷ್ಠ ಬ್ಯಾಲೆನ್ಸ್

ಎಸ್ ಬಿಐ ಜತೆಗೆ ಎಲ್ಲ ಸ್ಟೇಟ್ ಬ್ಯಾಂಕ್ ಗಳ ವಿಲೀನದ ಜತೆಗೆ ಎಸ್ ಬಿಐ ಗ್ರಾಹಕರ ಖಾತೆಯ ಕನಿಷ್ಠ ಬ್ಯಾಲೆನ್ಸ್ ನಿಯಮಗಳನ್ನು ಬದಲಾಯಿಸಲಾಗಿದೆ. ಕನಿಷ್ಠ ಬ್ಯಾಲೆನ್ಸ್ ಇಲ್ಲದಿದ್ದರೆ ಭಾರಿ ದಂಡ ತೆರಬೇಕಾಗುತ್ತದೆ. ಜನ್ ಧನ್ ಬ್ಯಾಂಕ್ ಖಾತೆ ನಿರ್ವಹಣೆ ಸುಲಭವಾಗಲು ಈ ಕ್ರಮ ಕೈಗೊಳ್ಳಲಾಗಿದೆ.

ಹೊಸ ನಿಯಾಮದಂತೆ ತಿಂಗಳ ಸರಾಸರಿ ಬ್ಯಾಲೆನ್ಸ್ (ಎಂಎಬಿ) ಕಾಯ್ದುಕೊಳ್ಳದಿದ್ದರೆ 100 ರು ಪ್ಲಸ್ ಸೇವಾ ತೆರಿಗೆ ಹೊರೆಯನ್ನು ಗ್ರಾಹಕರ ಮೇಲೆ ಹಾಕಲಾಗುತ್ತದೆ.
ಹಳೆ ನೋಟು ಜಮೆ ಅವಧಿ

ಹಳೆ ನೋಟು ಜಮೆ ಅವಧಿ

ನವೆಂಬರ್ 08ರ ರಾತ್ರಿಯಿಂದ ಜಾರಿಗೆ ಬಂದ ಅಪನಗದೀಕರಣ ಯೋಜನೆಯಂತೆ ಹಳೆ 500 ಹಾಗೂ 1000 ರುಪಾಯಿ ನೋಟುಗಳನ್ನು ಆರ್ ಬಿಐ ಸೇರಿದಂತೆ ಬ್ಯಾಂಕುಗಳಲ್ಲಿ ಪಾವತಿಸಿ ಹೊಸ ನೋಟುಗಳನ್ನು ಪಡೆಯಲು ಮಾರ್ಚ್ 31 ಕೊನೆದಿನವಾಗಿದೆ. ಏಪ್ರಿಲ್ 01 ರಿಂದ ಹಳೆ ನೋಟು ಹೊಂದಿದ್ದರೆ ಎರಡು ಪಟ್ಟು ದಂಡ ಕಟ್ಟಬೇಕಾಗುತ್ತದೆ. ಎನ್ನಾರೈ ಗಳಿಗೆ ಈ ಅವಧಿಯನ್ನು ಜೂನ್ ತಿಂಗಳ ತನಕ್ ಇದೆ.

ಐಟಿ ರಿಟರ್ನ್ಸ್ ಗೆ ಹೊಸ ಅರ್ಜಿ

ಐಟಿ ರಿಟರ್ನ್ಸ್ ಗೆ ಹೊಸ ಅರ್ಜಿ

ವೈಯಕ್ತಿಕ ಸಂಬಳದಾರರಿಗೆ ಏಪ್ರಿಲ್ 01ರಿಂದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಹೊಸ ಅರ್ಜಿಯನ್ನು ಪರಿಚಯಿಸಲಾಗುತ್ತಿದೆ. ಅರ್ಜಿ ನಮೂನೆ ಸರಳವಾಗಿದ್ದು, ಕಡಿಮೆ ಕಾಲಂಗಳನ್ನು ಹೊಂದಿರುತ್ತದೆ. ಆದಾಯ ಕಡಿತವನ್ನು ಐಟಿಆರ್ -1 ಅರ್ಜಿಯನ್ನು 'ಸಹಜ' ಅರ್ಜಿಯನ್ನಾಗಿ 2017-18ರ ಅವಧಿಗೆ ನೀಡಲಾಗುತ್ತಿದೆ. ಚಾಪ್ಟರ್ VIA ನಂತೆ ಕಡಿತಗೊಳ್ಳುತ್ತಿದ್ದು ಅನೇಕ ಅಂಶಗಳನ್ನು ತೆಗೆದು ಹಾಕಲಾಗಿದೆ.

ಬಿಎಸ್ 3 ವಾಹನ ಸೇಲ್ ಬಂದ್

ಬಿಎಸ್ 3 ವಾಹನ ಸೇಲ್ ಬಂದ್

ಬಿಎಸ್ 3 ವಾಹನಗಳ ಮಾರಾಟ ಹಾಗೂ ಉತ್ಪಾದನೆಯನ್ನು ಏಪ್ರಿಲ್ 01ರಿಂದ ಸ್ಥಗಿತಗೊಳಿಸಲು ಸುಪ್ರೀಂಕೋರ್ಟ್ ಆದೇಶಿಸಿದೆ. ಇದರಿಂದಾಗಿ ಡೀಲರ್ ಗಳು, ಮಾರಾಟ ಸಂಸ್ಥೆಗಳು ಕೊನೆ ಕ್ಷಣದಲ್ಲಿ ಕ್ಲಿಯೆರೆನ್ಸ್ ಸೇಲ್ ಮೂಲಕ ಭಾರಿ ರಿಯಾಯಿತಿ ದರದಲ್ಲಿ ವಾಹನಗಳನ್ನು ಮಾರಾಟ ಮಾಡುತ್ತಿವೆ. ಬಿಎಸ್ 3 ವಾಹನ ಖರೀದಿಸಿದ್ದರೆ ತೊಂದರೆಯಿಲ್ಲ. ಅಗತ್ಯ ದಾಖಲೆ ನೀಡಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.

ಏಪ್ರಿಲ್ 1, 2017ರಿಂದ ತುಟ್ಟಿ

ಏಪ್ರಿಲ್ 1, 2017ರಿಂದ ತುಟ್ಟಿ

ಸಾಮಾನ್ಯ ವಿಮೆ ಏಪ್ರಿಲ್ 1, 2017ರಿಂದ ತುಟ್ಟಿಯಾಗಲಿದೆ. ಕಾರು, ಮೋಟಾರ್ ಸೈಕಲ್ ಮತ್ತು ಆರೋಗ್ಯ ವಿಮೆ ಪ್ರೀಮಿಯಂ ಹೆಚ್ಚಳವಾಗಲಿದೆ. ಏಜೆಂಟ್‍ಗಳಿಗೆ ಕಮಿಷನ್ ಪರಿಷ್ಕರಣೆಗೆ ಐಆರ್‍ಡಿಎಐ ಸಮ್ಮತಿ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು.

English summary
Come April 1 and there will be a host of changes that the nation would witness. A new IT return form, no more depositing of demonetised currency, minimum balance in SBI, interest rates of PPF, Kisan Vikas Patra to be lowered and no sale of BS-III vehicles.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X