ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀಟ್ ಅಂಕಗಳಲ್ಲಿ ವ್ಯತ್ಯಾಸ: ಕಂಗಾಲಾದ ವಿದ್ಯಾರ್ಥಿಗಳು

|
Google Oneindia Kannada News

ನವದೆಹಲಿ, ಅಕ್ಟೋಬರ್ 20: ವೈದ್ಯಕೀಯ ಕೋರ್ಸ್‌ಗಳ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್ ಯುಜಿ 2020) ಫಲಿತಾಂಶ ಪ್ರಕಟವಾದ ಬಳಿಕ ದೇಶದ ವಿವಿಧ ಭಾಗಗಳ ಅಭ್ಯರ್ಥಿಗಳು ಅಂಕಗಳ ಹಂಚಿಕೆಯಲ್ಲಿ ತುಂಬಾ ವ್ಯತ್ಯಾಸವಾಗಿದೆ ಎಂದು ಆರೋಪಿಸಿದ್ದಾರೆ.

ಈ ಸಂಬಂಧ ಈಗಾಗಲೇ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯನ್ನು (ಎನ್‌ಟಿಎ) ಸಂಪರ್ಕಿಸಿರುವ ವಿದ್ಯಾರ್ಥಿಗಳು, ಅಂಕಗಳ ನೀಡಿಕೆ ಸಮರ್ಪಕವಾಗಿಲ್ಲ ಎಂದು ದೂರಿದ್ದಾರೆ. ಆದರೆ ಅದಕ್ಕೆ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎನ್ನಲಾಗಿದೆ.

ನೀಟ್ ಫಲಿತಾಂಶ: 720ಕ್ಕೆ 720 ಅಂಕ ಪಡೆದರೂ ಕೈತಪ್ಪಿದ ಅಗ್ರಸ್ಥಾನ!ನೀಟ್ ಫಲಿತಾಂಶ: 720ಕ್ಕೆ 720 ಅಂಕ ಪಡೆದರೂ ಕೈತಪ್ಪಿದ ಅಗ್ರಸ್ಥಾನ!

ನೀಟ್ 2020ರ ಪರೀಕ್ಷಾ ಫಲಿತಾಂಶವನ್ನು ಅಕ್ಟೋಬರ್ 16ರಂದು ಪ್ರಕಟಿಸಲಾಗಿದ್ದು, ಶೇ 56.44ರಷ್ಟು ಮಂದಿ ಉತ್ತೀರ್ಣರಾಗಿದ್ದಾರೆ. ಅಕ್ಟೋಬರ್ 18ರಂದು ತಮಿಳುನಾಡಿನ ಕೊಯಮತ್ತೂರು ಮತ್ತು ಅರಿಯಲೂರ್‌ನ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ತಮ್ಮ ಆಪ್ಟಿಕಲ್ ಮಾರ್ಕ್ಸ್ ರೆಕಗ್ನಿಷನ್ (ಒಎಂಆರ್) ಸರಿಯಾಗಿ ಬಂದಿಲ್ಲ ಎಂದು ಮರುಮೌಲ್ಯಮಾಪನಕ್ಕೆ ಕೋರಿದ್ದಾರೆ. ಇದರಲ್ಲಿ ಎನ್‌ಟಿಎ ಮಧ್ಯಪ್ರವೇಶಿಸಬೇಕೆಂದು ಅಭ್ಯರ್ಥಿಯೊಬ್ಬರು ಮನವಿ ಮಾಡಿದ್ದಾರೆ. ಮುಂದೆ ಓದಿ.

ಒಎಂಆರ್ ಪ್ರತಿಯೇ ವಿಭಿನ್ನ

ಒಎಂಆರ್ ಪ್ರತಿಯೇ ವಿಭಿನ್ನ

'ಪರೀಕ್ಷೆ ಬರೆದುಬಂದ ಬಳಿಕ ಮಗ ಪ್ರಶ್ನೆಗಳಿಗೆ ಮತ್ತೆ ಉತ್ತರಗಳನ್ನು ಗುರುತಿಸಿದ್ದ. ಅದರಲ್ಲಿ ಆತನಿಗೆ 504 ಅಂಕ ಬಂದಿತ್ತು. ಹೆಚ್ಚೂಕಡಿಮೆ ಅಷ್ಟೇ ಅಂಕಗಳು ಬರುತ್ತದೆ ಎಂಬುದು ನಮಗೆ ಖಾತರಿಯಿತ್ತು. ಆತನ ಮೇಲೆ ನನಗೆ ನಂಬಿಕೆಯಿದೆ. ಆದರೆ ಅಂತಿಮವಾಗಿ ಅವನಿಗೆ ಬಂದಿದ್ದು ಕೇವಲ 210 ಅಂಕ. ಈ ವರ್ಷ ಅವನು ಎರಡನೆಯ ಬಾರಿ ಪರೀಕ್ಷೆ ಬರೆದಿದ್ದಾನೆ. ಪ್ರತಿಷ್ಠಿತ ಖಾಸಗಿ ಸಂಸ್ಥೆಯಲ್ಲಿ ಕೋಚಿಂಗ್ ಕೂಡ ಪಡೆದಿದ್ದಾನೆ' ಎಂದು ರಾಜಸ್ಥಾನದ ವಿದ್ಯಾರ್ಥಿಯೊಬ್ಬನ ತಾಯಿ ವಿದ್ಯಾ ಹೇಳಿದ್ದಾರೆ.

ಮಗನ ನೀಟ್ ಪರೀಕ್ಷೆಯ ಒಎಂಆರ್ ಶೀಟ್ ಪ್ರತಿಯನ್ನು ಅಕ್ಟೋಬರ್ 7ರಂದು ಎನ್‌ಟಿಎದಿಂದ ಪಡೆದುಕೊಂಡಿದ್ದ ವಿದ್ಯಾ, 'ಅಲ್ಲಿ ಏನೋತಪ್ಪಾಗಿದೆ ಎನಿಸಿತ್ತು. ನನ್ನ ಮಗನ ಸಹಿ ಕೂಡ ವಿಭಿನ್ನವಾಗಿ ಕಂಡಿತು. ಅಂಕಗಳು ತೀರಾ ಕಡಿಮೆಯಾಗಿದ್ದವು' ಎಂದು ಆರೋಪಿಸಿದ್ದಾರೆ.

ತಾಳೆಯಾಗದ ಅಂಕಗಳು

ತಾಳೆಯಾಗದ ಅಂಕಗಳು

ಇಮೇಲ್ ಮೂಲಕ ಪಡೆದುಕೊಂಡ ಒಎಂಆರ್ ಉತ್ತರ ಪತ್ರಿಕೆಯಲ್ಲಿ ಇದ್ದ ಅಂಕಗಳಿಗೂ ಅಕ್ಟೋಬರ್ 16ರಂದು ಬಿಡುಗಡೆಯಾದ ಫಲಿತಾಂಶದ ಅಂತಿಮ ಅಂಕಗಳಿಗೂ ತಾಳೆಯೇ ಆಗುತ್ತಿಲ್ಲ. ನನ್ನ ಮಗನ ಉತ್ತರ ಪತ್ರಿಕೆ ಎಂದು ಕಳುಹಿಸಿದ ಪ್ರತಿಯಲ್ಲಿ ಹಾಗೂ ಆತ ಗಳಿಸಿದ ಅಂತಿಮ ಅಂಕಗಳಲ್ಲಿ 10-12 ಅಂಕಗಳಷ್ಟು ವ್ಯತ್ಯಾಸವಿದೆ' ಎಂದಿದ್ದಾರೆ.

ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಒಡಿಶಾದ ಟಾಪರ್‌ಗೆ 720 ಅಂಕನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಒಡಿಶಾದ ಟಾಪರ್‌ಗೆ 720 ಅಂಕ

ಸರಿಪಡಿಸುವ ವ್ಯವಸ್ಥೆಯೇ ಇಲ್ಲ

ಸರಿಪಡಿಸುವ ವ್ಯವಸ್ಥೆಯೇ ಇಲ್ಲ

ತಮಗೆ ಸುಮಾರು 400 ಅಂಕಗಳು ಬರುವ ನಿರೀಕ್ಷೆಯಿತ್ತು. ಆದರೆ ಎನ್‌ಟಿಎ ಬಿಡುಗಡೆ ಮಾಡಿದ ಉತ್ತರ ಪಟ್ಟಿಯಲ್ಲಿ ಸಿಕ್ಕಿದ್ದು ಸುಮಾರು 150 ಅಂಕಗಳಷ್ಟೇ ಎಂದು ಮತ್ತೊಬ್ಬ ಆಕಾಂಕ್ಷಿ ಆರೋಪಿಸಿದ್ದಾರೆ. ಒಎಂಆರ್ ಉತ್ತರ ಪ್ರತಿಗಳಲ್ಲಿನ ಅಂಕಗಳಿಗೂ ಅಂತಿಮ ಅಂಕಗಳಿಗೂ ವ್ಯತ್ಯಾಸವಿದೆ ಎಂದು ಅನೇಕ ಅಭ್ಯರ್ಥಿಗಳು ದೂರಿದ್ದಾರೆ. ಈ ಸಮಸ್ಯೆಗಳನ್ನು ಬಗೆಹರಿಸಲು ಎನ್‌ಟಿಎ ಯಾವುದೇ ವೇದಿಕೆ ನೀಡಿಲ್ಲ. ಅಲ್ಲದೆ ಅದರ ಬಗ್ಗೆ ಜನರಿಗೆ ಮಾಹಿತಿಯೂ ಇಲ್ಲ.

ಮೊದಲೇ ಹೇಳಬೇಕಿತ್ತು ಎಂದ ಎನ್‌ಟಿಎ!

ಮೊದಲೇ ಹೇಳಬೇಕಿತ್ತು ಎಂದ ಎನ್‌ಟಿಎ!

ಈ ತಪ್ಪನ್ನು ಸರಿಪಡಿಸಲು ದೂರು ನೀಡುವ ಪ್ರಕ್ರಿಯೆ ಹೇಗೆಂದು ತಿಳಿಯಲು ವಿದ್ಯಾ ಅವರು ಎನ್‌ಟಿಎಯನ್ನು ಸಂಪರ್ಕಿಸಿದಾಗ, ಈ ಸಂದರ್ಭದಲ್ಲಿ ತಾನು ಅಸಹಾಯಕವಾಗಿರುವುದಾಗಿ ಎನ್‌ಟಿಎ ತಿಳಿಸಿದೆ. ಒಎಂಆರ್ ಉತ್ತರ ಪತ್ರಿಕೆಯಲ್ಲಿನ ವ್ಯತ್ಯಾಸಗಳನ್ನು ಮೊದಲೇ ಏಕೆ ಪ್ರಶ್ನಿಸಲಿಲ್ಲ ಎಂದು ಎನ್‌ಟಿಎ ಕೇಳಿದೆ. ಒಎಂಆರ್ ಪ್ರತಿ ದೊರೆತ 24 ಗಂಟೆಯಲ್ಲಿ ದೂರು ಸಲ್ಲಿಸಬೇಕು ಎಂದು ಉತ್ತರ ನೀಡಿದೆ ಎಂದು ಅವರು ಆರೋಪಿಸಿದ್ದಾರೆ.

English summary
NEET 2020: Many candidates alleged descrepancies in scores and contacted NTA for help.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X