ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪ ಸಭಾಪತಿ ಸ್ಥಾನ, ಎನ್ಡಿಎ ಮಿತ್ರಪಕ್ಷಕ್ಕೆ ಸಿಗಲಿದೆ ಅದೃಷ್ಟ

|
Google Oneindia Kannada News

ನವದೆಹಲಿ, ಜೂನ್ 30: ಲೋಕಸಭೆ ಚುನಾವಣೆಯ ಸ್ಪೀಕರ್ ಸ್ಥಾನಕ್ಕೆ ಅಚ್ಚರಿಯ ಆಯ್ಕೆ ಮಾಡಿದ್ದ ಪ್ರಧಾನಿ ಮೋದಿ ಅವರು ಈಗ ಉಪ ಸಭಾಪತಿ ಸ್ಥಾನವನ್ನು ಮಿತ್ರಪಕ್ಷಕ್ಕೆ ನೀಡಲು ಮುಂದಾಗಿದ್ದಾರೆ.

ಎನ್ಡಿಎ ಮಿತ್ರಪಕ್ಷ ಶಿವಸೇನಾದವರಿಗೆ ಉಪ ಸ್ಪೀಕರ್ ಸ್ಥಾನ ಸಿಗಲಿದೆ ಎಂಬ ಸುದ್ದಿ ಬಂದಿದೆ. 17ನೇ ಲೋಕಸಭೆ ಚುನಾವಣೆಯ ಮೊದಲ ಅಧಿವೇಶನ ಜುಲೈ 26ರ ತನಕ ನಡೆಯಲಿದೆ. ರಾಜಸ್ಥಾನದ ಕೋಟಾ- ಬಂದಿ ಕ್ಷೇತ್ರ ಸಂಸತ್ ಸದಸ್ಯ ಬಿಜೆಪಿ ಮುಖಂಡ ಓಂ ಬಿರ್ಲಾ ಅವರು 17ನೇ ಲೋಕಸಭೆಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಲೋಕಸಭಾ ಸ್ಪೀಕರ್ ಸ್ಥಾನಕ್ಕೆ ರಾಜಸ್ಥಾನದ ಕೋಟಾ ಸಂಸದ ಓಂ ಬಿರ್ಲಾ ಲೋಕಸಭಾ ಸ್ಪೀಕರ್ ಸ್ಥಾನಕ್ಕೆ ರಾಜಸ್ಥಾನದ ಕೋಟಾ ಸಂಸದ ಓಂ ಬಿರ್ಲಾ

ಉಪ ಸಭಾಪತಿ ಸ್ಥಾನವನ್ನು ವೈಎಸ್ಸಾರ್ ಕಾಂಗ್ರೆಸ್ ಪಕ್ಷ ಅಥವಾ ಬಿಜೆಡಿಗೆ ಬಿಟ್ಟು ಕೊಡುವ ಬಗ್ಗೆ ಸುದ್ದಿ ಹಬ್ಬಿತ್ತು. ಆದರೆ, ಉಪ ಸ್ಪೀಕರ್ ಸ್ಥಾನವು ಶಿವಸೇನಾಕ್ಕೆ ಸಿಗಬೇಕಿದೆ ಎಂದು ಶಿವಸೇನಾ ಮುಖಂಡ ಸಂಜಯ್ ರಾವತ್ ಹೇಳಿದ್ದಾರೆ. ಲೋಕಸಭೆಯಲ್ಲಿ ಈ ಬಾರಿ ಶಿವಸೇನಾ 18 ಸಂಸದರನ್ನು ಹೊಂದಿದೆ.

Deputy Speaker of Lok Sabha likely from Shiv Sena: Sources

ಸಂಸತ್ ಕಲಾಪದ ಮೊದಲೆರಡು ದಿನಗಳಲ್ಲಿ 542 ಸದಸ್ಯರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ದೇಶದ 22 ಭಾಷೆಗಳಲ್ಲಿ ಪ್ರಮಾಣ ವಚನ ಸ್ವೀಕರಿಸಲು ಸಂಸದರು ಅರ್ಹರಾಗಿರುತ್ತಾರೆ. ಕಲಾಪದ ಮೂರನೇ ದಿನ ನೂತನ ಲೋಕಸಭಾಧ್ಯಕ್ಷ ಹಾಗೂ ಉಪಸಭಾಧ್ಯಕ್ಷರ ಆಯ್ಕೆ ನಡೆಯಲಿದೆ. ಹಂಗಾಮಿ ಸ್ಪೀಕರ್ ವೀರೇಂದ್ರಕುಮಾರ್ ಪ್ರಮಾಣವಚನ ಬೋಧಿಸಲಿದ್ದಾರೆ

English summary
The Position of Deputy Speaker of Lok Sabha is likely to be allocated to a leader of the NDA ally Shiva Sena, sources said on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X