ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾನಸಿಕ ಒತ್ತಡ: ಕರ್ನಾಟಕದಲ್ಲಿ ನಿತ್ಯ ಒಬ್ಬ ವಿದ್ಯಾರ್ಥಿ ಆತ್ಮಹತ್ಯೆ!

|
Google Oneindia Kannada News

ಬೆಂಗಳೂರು, ಜನವರಿ 06: ಮಾನಸಿಕ ಒತ್ತಡ ನಿರ್ವಹಣೆ ವೈಫಲ್ಯದ ಪರಿಣಾಮ ಪ್ರತಿನಿತ್ಯ ರಾಜ್ಯದಲ್ಲಿ ಸರಾಸರಿ ಒಬ್ಬ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗುತ್ತಿರುವ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ.

ದೇಶದಲ್ಲೇ ತಮಿಳುನಾಡಿನಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳಲ್ಲಿ ಆತ್ಮಹತ್ಯೆ ಪ್ರವೃತ್ತಿ ಹೆಚ್ಚಿದ್ದು, ಕರ್ನಾಟಕ, ತೆಲಂಗಾಣ ನಂತರದ ಸ್ಥಾನದಲ್ಲಿದೆ. ಇತ್ತೀಚೆಗೆ ದೊರೆತ ಅಂಕಿ ಅಂಶಗಳ ಪ್ರಕಾರ 2016 ರಲ್ಲಿ ಕರ್ನಾಟಕದಲ್ಲಿ 540 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಖಿನ್ನತೆ, ಆತ್ಮಹತ್ಯೆ ವಿರುದ್ಧ ಸಮರ ಸಾರಿದ್ದ ಮಹಿಳಾ ಬೈಕರ್ ಸನಾ ದುರಂತ ಅಂತ್ಯಖಿನ್ನತೆ, ಆತ್ಮಹತ್ಯೆ ವಿರುದ್ಧ ಸಮರ ಸಾರಿದ್ದ ಮಹಿಳಾ ಬೈಕರ್ ಸನಾ ದುರಂತ ಅಂತ್ಯ

ತಮಿಳುನಾಡಿನಲ್ಲಿ 981 ಪ್ರಕರಣಗಳು ದಾಖಲಾಗಿವೆ. ಆಂಧ್ರ ಪ್ರದೇಶದಲ್ಲಿ 295, ತೆಲಂಗಾಣದಲ್ಲಿ 349 ಹಾಗೂ ಕೇರಳದಲ್ಲಿ 340 ಪ್ರಕರಣಗಳು ದಾಖಲಾಗಿದೆ.ಆಂಧ್ರ ಪ್ರದೇಶದಲ್ಲಿ ಅತಿ ಕಡಿಮೆ ಸಂಖ್ಯೆಯಲ್ಲಿ ಇಂತಹ ಪ್ರಕರಣಗಳು ನಡೆದಿದೆ.

Depression causes suicide a student everyday in state

ತಜ್ಞರ ಪ್ರಕಾರ ಡ್ರಗ್ಸ್, ಮದ್ಯಪಾನ ಹೀಗೆ ಅನೇಕ ದುಷ್ಟಟಗಳಿಗೆ ಬಿದ್ದು ಅದರಿಂದ ಮಾನಸಿಕ ಸ್ಥಿಮಿತತೆ ಕಳೆದುಕೊಂಡು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಕ್ಷಣಕಾಲ ತಮ್ಮ ನೋವುಗಳಿಂದ ಬಿಡುಗಡೆ ಹೊಂದಲು ದುಷ್ಚಟಗಳಿಗೆ ತಮ್ಮನ್ನು ಒಳಗಾಗಿಸಿಕೊಳ್ಳುತ್ತಾರೆ ಆದರೆ ಅವರಿಗೆ ತಾವು ಅದರಿಂದ ಹೊರ ಬರಲು ಸಾದ್ಯವೇ ಇಲ್ಲ ಎಂದು ಅರಿವು ಅವರ ಜೀವನದ ಅಂತ್ಯದವರೆಗೂ ತಿಳಿಯುವುದೇ ಇಲ್ಲ.

ನಿಮ್ಹಾನ್ಸ್ ಆಸ್ಪತ್ರೆಯ ವೈದ್ಯರು ಹೇಳುವ ಪ್ರಕಾರ ಶೇ. 10 ರಿಂದ 15 ರಷ್ಟು ವಿದ್ಯಾರ್ಥಿಗಳು ಮದ್ಯಪಾನ, ಡ್ರಗ್ ಸೇವೆನೆಗೆ ಒಳಗಾಗಿ ಅದರ ಅಮಲಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಪೋಷಕರು ತಮ್ಮ ಮಕ್ಕಳು ಯಾವ ದಾರಿಯಲ್ಲಿ ಹೋಗುತ್ತಿದ್ದಾರೆ ಎನ್ನುವ ಕುರಿತು ನಿಗಾವಹಿಸುವ ಅಗತ್ಯವಿದೆ.

ಜತೆಗೆ ಸಾದ್ಯವಾದಷ್ಟು ಹೊತ್ತು ಮಕ್ಕಳೊಂದಿಗೆ ಸಮಯವನ್ನು ಕಳೆಯಬೇಕು. ಅದರೊಂದಿಗೆ ಮಕ್ಕಳ ಆಹಾರ ವಿಧಾನ, ಅವರ ಹವ್ಯಾಸಗಳನ್ನು ಬದಲಾಯಿಸಬೇಕಿದೆ. ಇಲ್ಲವಾದರೆ ಮಕ್ಕಳನ್ನು ಶಾಸ್ವತವಾಗಿ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಲಿದೆ.

ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಸಂಖ್ಯೆ( 2014 ರಿಂದ 2016 ರವರೆಗೆ)

ತಮಿಳುನಾಡು-2,789
ಕರ್ನಾಟಕ-1,707
ತೆಲಂಗಾಣ-1,193
ಕೇರಳ-1,132
ಆಂಧ್ರಪ್ರದೇಶ-988

English summary
The inability to cope with stress , which eventually leads to depression, sees at least one student take her/his life every day in Karnataka. Tamil Nadu topped the chart with most suicide cases followed by Karnataka, Telangana and Kerala.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X