ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಬಾಮಾ ಉಡುಗೊರೆ ನೀಡಿದ್ದ ಶಾಲೆಗೆ ಬೀಗ ಬಿದ್ದಿದೆ!

|
Google Oneindia Kannada News

ಉಜ್ಜಯಿನಿ, ಜ. 27: ಒಬಾಮಾ ಬಂದಿದ್ದು, ಗಣರಾಜ್ಯೋತ್ಸವದಲ್ಲಿ ಪಾಲ್ಗೊಂಡಿದ್ದು, ವಿಮಾನ ಇಳಿದಿದ್ದು, ಹತ್ತಿದ್ದು ಎಲ್ಲವೂ ಸುದ್ದಿಯಾಯಿತು. ಇದೇ ಬರಾಕ್ ಒಬಾಮಾ ಕಳೆದ 2010ರಲ್ಲಿ ಭಾರತಕ್ಕೆ ಭೇಟಿ ನೀಡಿದಾಗ ದಲಿತ ಕಾರ್ಮಿಕರೊಬ್ಬರ ಸಮಾಜ ಸೇವೆ ಮೆಚ್ಚಿ ಬಂಗಾರದ ನಾಣ್ಯಗಳನ್ನು ಉಡುಗೊರೆಯಾಗಿ ನೀಡಿದ್ದರು.

ಬಡ ಮಕ್ಕಳ ಶಿಕ್ಷಣಕ್ಕೋಸ್ಕರ ಶಾಲೆ ನಡೆಸುತ್ತಿದ್ದ 48 ವರ್ಷದ ರಾಮದಾಸ್ ಕೆಲಸ ಮೆಚ್ಚಿದ ಒಬಾಮ ಹೆಂಡತಿ ಅತ್ಯಮೂಲ್ಯ ಪೆನ್ ವೊಂದನ್ನು ಸಹ ಕೊಡುಗೆಯಾಗಿ ನೀಡಿದ್ದರು. ಆದರೆ ಇಂದು ಅವರ ಶಾಲೆ ಬಾಗಿಲು ಹಾಕಿದೆ. ಸಮಾಜ ಸೇವೆಗೆ ಫುಲ್ ಸ್ಟಾಪ್ ಬಿದ್ದಿದೆ.[ಗಣತಂತ್ರ ದಿನದ ಅತಿಥಿ ಒಬಾಮಾ ಚ್ಯೂಯಿಂಗ್ ಗಮ್ ಯಾಕಮ್ಮ?]

obama

ತುಘಲಕ್ ಬಾದ್ ನಲ್ಲಿ ಕಲ್ಲು ಒಡೆಯುವ ಕೆಲಸ ಮಾಡುತ್ತಿದ್ದ ರಾಮ್ ದಾಸ್ ತಮ್ಮ ಕುಟುಂಬದ ಸಹಕಾರದಲ್ಲಿ ಶಾಲೆಯೊಂದನ್ನು ನಡೆಸುತ್ತಿದ್ದರು. 12 ಬಡ ಮಕ್ಕಳು ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಇವರ ಕಾರ್ಯ ಮೆಚ್ಚಿದ ಒಬಾಮ ದಂಪತಿ ಉಡುಗೊರೆ ನೀಡಿದ್ದರು. ಕೇಂದ್ರ ಸರ್ಕಾರ ಶಾಲೆ ನಡೆಸಲು ಕುಟುಂಬಕ್ಕೆ ನೆರವಾಗಬೇಕು ಎಂದು ಸಲಹೆ ನೀಡಿದ್ದರು.

ಆದರೆ ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿದ ರಾಮ್ ದಾಸ್ ಕುಟುಂಬ ಶಾಲೆಗೆ ಬೀಗ ಹಾಕಿತು. ಓದುತ್ತಿದ್ದ ಮಕ್ಕಳ ಶಿಕ್ಷಣ ಅರ್ಧಕ್ಕೆ ಮೊಟಕಾಯಿತು. ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ರಾಮ್ ದಾಸ್ ಹಿರಿಯ ಮಗ ನರೇಂದ್ರ ಗಣಿಯೊಂದರಲ್ಲಿ ಕೆಲಸ ಹುಡುಕಿಕೊಂಡರು. ಶಾಲೆಯಲ್ಲಿ ಓದುತ್ತಿದ್ದ ಮತ್ತೊಬ್ಬ ಮಗ ವಿಶಾಲ್ ಶಿಕ್ಷಣ ಅಲ್ಲಿಗೆ ಅಂತ್ಯವಾಯಿತು.[ಒಬಾಮಾ ಕಾರ್ಯಕ್ರಮಕ್ಕೂ ಬೀದಿ ನಾಯಿ ನುಗ್ತವೆ!]

ಕೂಲಿ ಮಾಡಿ ಜೀವನ ಸಾಗಿಸುವ ನಮಗೆ ಫುಟ್ ಪಾತೇ ಮನೆ. ಇನ್ನು ಶಾಲೆ ನಡೆಸುವುದು ಎಲ್ಲಿಂದ ಬಂತು? ಬೀದಿಯಲ್ಲಿ ವಾಸಿಸುವ ನಮಗೆ ಒಬಾಮಾ ನೀಡಿದ ಉಡುಗೊರೆ ಬೇಡ. ಅದನ್ನು ಹಿಂದಕ್ಕೆ ನೀಡಬೇಕು ಅಂದುಕೊಂಡಿದ್ದೇನೆ ಎಂದು ರಾಮ್ ದಾಸ್ ಅಹಿವಾರ್ ನೊಂದು ನುಡಿಯುತ್ತಾರೆ.

ದಿನಕ್ಕೆ 400ರೂ. ದುಡಿಯುವ ರಾಮ್ ದಾಸ್ ಗೆ ಶ್ರೀಮಂತನಾಗುವ ಕನಸಿಲ್ಲ. ಆದರೆ ಗ್ರಾಮದಲ್ಲಿರುವ ಸ್ವಂತ ಭೂಮಿಯನ್ನು ಶಾಲೆ ನಿರ್ಮಾಣಕ್ಕೆ ನೀಡಬೇಕೆಂಬ ಉದಾತ್ತ ಮನೋಭಾವಿದೆ. ಸರ್ಕಾರದ ಕಣ್ಣು ಇನ್ನಾದರೂ ತೆರೆದರೆ ಗ್ರಾಮೀಣ ಮಕ್ಕಳಿಗೆ ಶಿಕ್ಷಣ ಭಾಗ್ಯ ಸಾಧ್ಯ.[ವಿಶ್ವದ ಜನಪ್ರಿಯ ನಾಯಕರ ಅಪ್ಪುಗೆ, ಫೇಸ್ಬುಕ್ ಜನಕನ ಮೆಚ್ಚುಗೆ]

English summary
A Dalit laborer, feted by Barack Obama when he came to India in 2010, now wants to return the souvenir he had received from the US President to draw his attention to the plight of poor parents who cannot even afford primary education for their children.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X